ಮಾಡೆಲಿಂಗ್ ನಲ್ಲಿ ಮಿಂಚಿದ ಈತ ಇಂದು ಕಿರುತೆರೆ ನಟ

in Uncategorized/ಮನರಂಜನೆ/ಸಿನಿಮಾ 106 views

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಕಸ್ತೂರಿ ನಿವಾಸದಲ್ಲಿ ನಾಯಕ ರಾಘವ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ದಿಲೀಪ್ ಶೆಟ್ಟಿ. ಆಕಸ್ಮಾತ್ ಆಗಿ ನಟನೆಗೆ ಕಾಲಿಟ್ಟ ದಿಲೀಪ್ ಶೆಟ್ಟಿ ಎಂಕಾಂ ಪದವೀಧರ ಹೌದು. ಸ್ನಾತಕೋತ್ತರ ಪದವಿ ಪಡೆದಿದ್ದ ದಿಲೀಪ್ ಸೀದಾ ಹಾರಿದ್ದು ದುಬೈಗೆ. ದುಬೈಯಲ್ಲಿ ಎಂ ಎನ್ ಸಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಗಿಟ್ಟಿಸಿಕೊಂಡ ದಿಲೀಪ್ ಅವರು ಅಲ್ಲಿಯೇ ನೆಲೆಸಿದ್ದರು. ಇದ್ದಕ್ಕಿದ್ದಂತೆ ದಿಲೀಪ್ ಅವರನ್ನು ಮಾಡೆಲಿಂಗ್ ಲೋಕ ಆಕರ್ಷಿಸಿತು. ಅಕೌಂಟೆಂಟ್ ವೃತ್ತಿ ಆದರೆ ಮಾಡೆಲಿಂಗ್ ಅನ್ನು ಪ್ರವೃತ್ತಿಯಾಗಿ ಸ್ವೀಕರಿಸುವ ನಿರ್ಧಾರವನ್ನು ದಿಲೀಪ್ ಮಾಡಿದರು‌. ಕೆಲಸದ ಜೊತೆಗೆ ಮಾಡೆಲಿಂಗ್ ನತ್ತ ಮುಖ ಮಾಡಿದ ಇವರು ಒಂದಷ್ಟು ಫ್ಯಾಷನ್ ಶೋ ಗಳಲ್ಲಿ ರ್ಯಾಂಪ್ ವಾಕ್ ಕೂಡಾ ಮಾಡಿದರು. ಮತ್ತು 2015 ರಲ್ಲಿ ಮಿಸ್ಟರ್ ದುಬೈ ಪಟ್ಟವನ್ನು ಕೂಡಾ ಇವರು ಪಡೆದುಕೊಂಡಿದ್ದರು. ಇಂತಿಪ್ಪ ಕನ್ನಡದ ಕುವರ ದುಬೈಗೆ ಬಾಯ್ ಹೇಳಿ ತವರಿಗೆ ಬಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಡಬ್ ಸ್ಮ್ಯಾಶ್ ಕಾರಣ ಎಂದರೆ ಸುಳ್ಳಲ್ಲ. ದಿಲೀಪ್ ಅವರು ಬಿಡುವಿನ ವೇಳೆಯಲ್ಲಿ ಒಂದಷ್ಟು ಡಬ್ ಸ್ಮ್ಯಾಶ್ ವಿಡಿಯೋಗಳನ್ನು ಮಾಡುತ್ತಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡಾ ಮಾಡುತ್ತಿದ್ದರು.

Advertisement

Advertisement

ಇದನ್ನು ನೋಡಿದ ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ನಟಿಸುವ ಅವಕಾಶ ನೀಡಿದರು. ಬಯಸದೇ ಬಂದ ಅವಕಾಶವನ್ನು ಒಲ್ಲೇ ಎನ್ನದೇ ಅಸ್ತು ಎಂದ ದಿಲೀಪ್ ಶೆಟ್ಟಿ ದಿಲೀಪ್ ರಾಜ್ ನಿರ್ದೇಶನದ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ನಾಯಕ ವಿನು ಆಲಿಯಾಸ್ ವಿನಾಯಕ ಆಗಿ ಬಣ್ಣ ಹಚ್ಚಿದ್ದರು. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ಹ್ಯಾಂಡ್ ಸಮ್ ಹುಡುಗ ಮುಂದೆ ತೆಲುಗಿನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡರು.

Advertisement

Advertisement

ತೆಲುಗಿನ ಸ್ವರ್ಣಖಡ್ಗಂ ನಲ್ಲಿ ಬಣ್ಣ ಹಚ್ಚುವ ಮೂಲಕ ಪರಭಾಷೆಯಲ್ಲಿಯೂ ನಟನಾ ಛಾಪನ್ನು ಮೂಡಿಸಿದ್ದ ದಿಲೀಪ್ ಅವರು ಕಸ್ತೂರಿ ನಿವಾಸದ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಸ್ತೂರಿ ನಿವಾಸದ ರಾಘವ ಆಗಿ ವೀಕ್ಷಕರನ್ನು ಸೆಳೆಯುತ್ತಿರುವ ದಿಲೀಪ್ ರಾಜ್ ನಟನೆಯ ಹೊರತಾಗಿ ಅದ್ಭುತ ಡ್ಯಾನ್ಸರ್ ಕೂಡಾ ಹೌದು! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕಧಿಮಿತ ಡ್ಯಾನ್ಸ್ ರಿಯಾಲಿಟಿ ಶೋ ವಿನಲ್ಲಿ ಭಾಗವಹಿಸಿದ್ದ ಇವರು ಫಿನಾಲೆಯ ತನಕವೂ ಬಂದಿದ್ದರು.
– ಅಹಲ್ಯಾ

ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ ಕೇಂದ್ರದ  ಶ್ರೀ ಕಾಳಿಮಾತಾ ದೇವಿ ಉಪಾಸಕರಾದ ಪಂಡಿತ್ ಶ್ರೀ ವಾಸುದೇವ ಗುರೂಜಿ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಶತ್ರು ಕಾಟ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಮಾಟ ಮಂತ್ರ ನಿವಾರಣೆ ಆರೋಗ್ಯ ಹಣಕಾಸು ಮದುವೆ ಸಂತಾನ ಪ್ರೇಮ ವಿವಾಹ ಮನೆಯಲ್ಲಿ ಅಶಾಂತಿ ಗಂಡ ಹೆಂಡತಿ ಕಲಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ  ಫೋನಿನ ಮೂಲಕ ಶಾಶ್ವತ ಪರಿಹಾರ. ph : 8970080017 ಇಂದೇ ಕರೆ ಮಾಡಿ.

Advertisement
Share this on...