ಮುಂದೆ ನಿಂತು ಅಪ್ಪನ ಮದುವೆ ಮಾಡಿಸಿದ ಪುತ್ರಿ…ಅಷ್ಟಕ್ಕೂ ಕಾರಣವೇನು ಗೊತ್ತಾ…?

in Uncategorized 16 views

ಇತ್ತೀಚೆಗೆ ಟಾಲಿವುಡ್ ನಿರ್ಮಾಪಕ ದಿಲ್​​​ರಾಜು ತಮ್ಮ ಮಗಳ ವಯಸ್ಸಿನವರನ್ನು ಮದುವೆಯಾಗಿದ್ದರು. ದಿಲ್​​ ರಾಜು ಮದುವೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಬಹಳಷ್ಟು ಕಾಮೆಂಟ್​​​​ಗಳು ಬರತೊಡಗಿದವು. ಆದರೆ ನಿಜ ವಿಚಾರ ಎಂದರೆ ಈ ಮದುವೆ ದಿಲ್​​ರಾಜು ಅವರಿಗೆ ಇಷ್ಟವೇ ಇರಲಿಲ್ಲವಂತೆ.

Advertisement

 

Advertisement

Advertisement

ಹೌದು, 3 ವರ್ಷಗಳ ಹಿಂದೆ ದಿಲ್​​ರಾಜು ಪತ್ನಿ ಅನಿತಾ ಹೃದಯಾಘಾತದಿಂದ ಮೃತಪಟ್ಟಿದ್ದರು. ದಿಲ್​ರಾಜು ಬಹಳ ಚಿಕ್ಕವಯಸ್ಸಿಗೇ ಮದುವೆಯಾಗಿದ್ದರು. ಈ ದಂಪತಿಗೆ ಹನ್ಷಿಕಾ ರೆಡ್ಡಿ ಎಂಬ ಮುದ್ದಾದ ಮಗಳಿದಿದ್ದಾಳೆ. ಹನ್ಷಿಕಾ ಅವರೇ ಮುಂದೆ ನಿಂತು ಮಗಳ ಮದುವೆ ಮಾಡಿದ್ದಾರೆ ಎನ್ನಲಾಗಿದೆ. ಅದರಂತೆ ಪತಿ ಕಳೆದುಕೊಂಡು 3 ವರ್ಷಗಳ ನಂತರ ದಿಲ್​​ರಾಜು ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ಎರಡನೇ ಮದುವೆಯಾಗುತ್ತೇನೆ ಎಂದು ಸ್ವತ: ದಿಲ್​​ರಾಜು ಕನಸಲ್ಲೂ ಕೂಡಾ ಅಂದುಕೊಂಡಿರಲಿಲ್ಲವಂತೆ.

Advertisement

 

ಇನ್ನು ಲಂಡನಿನಲ್ಲಿ ಓದಿ ಬೆಳೆದ ಹನ್ಷಿಕಾ ಓದು ಮುಗಿಸಿ ಭಾ್ರತಕ್ಕೆ ಬಂದು ಎಂಎನ್​​ಸಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹನ್ಷಿಕಾ ಕೂಡಾ ತಾವು ಪ್ರೀತಿಸುತ್ತಿದ್ದ ಅರ್ಚಿತ್ ಎಂಬುವವರೊಂದಿಗೆ 2010 ರಲ್ಲೇ ಮದುವೆಯಾಗಿದ್ದಾರೆ. ಇವರಿಗೆ ಈಗ ಇಬ್ಬರು ಮಕ್ಕಳು. ಹನ್ಷಿಕಾ ವಯಸ್ಸು 29 ಆದರೆ ದಿಲ್​​ರಾಜು ಮದುವೆಯಾದ ತೇಜಸ್ವಿನಿ ಎಂಬುವವರ ವಯಸ್ಸು 30 ವರ್ಷ.

 

ಪತ್ನಿ ನಿಧನರಾದ ನಂತರ ದಿಲ್​​ರಾಜು ಹೈದರಾಬಾದ್ ಅಪಾರ್ಟ್​ಮೆಂಟ್ ಒಂದರಲ್ಲಿ ಒಬ್ಬರೇ ವಾಸವಿದ್ದರು. ಹನ್ಷಿಕಾ ಕೂಡಾ ಪತಿ ಮನೆಯಲ್ಲಿದ್ದರು. ಸಂಬಂಧ ಎಷ್ಟೇ ಚೆನ್ನಾಗಿದ್ದರೂ ಮಗಳ ಮನೆಗೆ ಹೋಗಿ ಇರುವುದು ಕೂಡಾ ಸರಿಯಿಲ್ಲ ಎನಿಸಿದ್ದರಿಂದ ತಮ್ಮ ಪಾಡಿಗೆ ತಾವು ಜೀವಿಸುತ್ತಿದ್ದರು. ಅಪ್ಪ ಒಬ್ಬಂಟಿ ಇರುವುದನ್ನು ನೋಡಿ ಮಗಳಿಗೂ ಬೇಸರವಾಯಿತು. ಅಪ್ಪನಿಗೆ ಸಂಗಾತಿ ಇದ್ದರೆ ಅವರು ಸಂತೋಷವಾಗಿ ಜೀವಿಸಬಹುದು ಎಂದು ಯೋಚಿಸಿ ಫ್ರೆಂಡ್​ ಸರ್ಕಲ್​​ನಲ್ಲಿ ಪರಿಚಯವಿದ್ದ ತೇಜಸ್ವಿನಿಯವರನ್ನು ಆಯ್ಕೆ ಮಾಡಿ ಅವರ ಒಪ್ಪಿಗೆ ಮೇರೆಗೆ ಅಪ್ಪನಿಗೆ ಮದುವೆ ಮಾಡಿಸಿದರು.

 

 

ದಿಲ್​​​ರಾಜು ಬೊಮ್ಮರಿಲ್ಲು, ಫಿದಾ, ಬೃಂದಾವನ, ಮಿಸ್ಟರ್​ ಪರ್ಫೆಕ್ಟ್​​​​, ರಾಮಯ್ಯ ವಸ್ತಾವಯ್ಯ, ಶ್ರೀನಿವಾಸ ಕಲ್ಯಾಣಂ, ಹಲೋ ಗುರು ಪ್ರೇಮಕೋಸಮೆ, ಜಾನು, ರಾಜಾ ದಿ ಗ್ರೇಟ್, ಮಿಡಲ್ ಕ್ಲಾಸ್ ಅಬ್ಬಾಯ್ ಸೇರಿ ಬಹಳಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

Advertisement
Share this on...