ದಿಶಾ ಧರಿಸಿದ ಈ ದಿರಿಸನ್ನು ನೋಡಿ ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡಿದ ನೆಟ್ಟಿಗರು !

in ಮನರಂಜನೆ 55 views

ಇತರ ಭಾರತೀಯ ನಟ ನಟಿಯರಿಗೆ ಹೋಲಿಸಿದರೆ ಬಾಲಿವುಡ್ ಬೋಲ್ಡ್ ಆಂಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಫೋಟೋಗಳು ಮತ್ತು ಪೋಸ್ಟ್ಗಳು ಅಭಿಮಾನಿಗಳಿಂದ ಹೆಚ್ಚಿನ ಸಂಖ್ಯೆಯ ಕಾಮೆಂಟ್’ಗಳು ಮತ್ತು ಲೈಕ್ಸ್’ಗಳನ್ನು ಪಡೆದುಕೊಳ್ಳುತ್ತವೆ. ಇದೇ ಕಾರಣಕ್ಕೆ ದಿಶಾ ಪಟಾನಿಯನ್ನು ಸೋಶಿಯಲ್ ಮೀಡಿಯಾ ರಾಣಿ ಎಂದೂ ಕರೆಯುತ್ತಾರೆ.
ದಿಶಾ ಕೂಡ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತುಸು ಹೆಚ್ಚೇ ಎನ್ನುವಷ್ಟು ಗ್ಲಾಮರ್ ಇರುವ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ದಿಶಾ ಕ್ಯಾಲ್ವಿನ್ ಕ್ಲೈನ್ ಒಳ ಉಡುಪು ಬ್ರಾಂಡ್ ಪ್ರಚಾರಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ ಬಿಡಿ.

Advertisement

Advertisement

ಅಂದಹಾಗೆ ದಿಶಾ ಎಂದಿನಂತೆ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇದೀಗ ಗ್ಲ್ಯಾಮ್ ಫೋಟೋವನ್ನು ಪೋಸ್ಟ್ ಮಾಡಿದ್ದು, ಇದು ಕೆಲವು ಕಾರಣಗಳಿಗಾಗಿ ಟ್ರೆಂಡಿಂಗ್ ಆಗಿದೆ. ಹೌದು, ಈ ಫೋಟೋದಲ್ಲಿ ದಿಶಾ ಹಳದಿ ಬಣ್ಣದ ಟಿ-ಶರ್ಟ್ ಧರಿಸಿದ್ದು, ಟೀ ಶರ್ಟ್ ಮೇಲೆ ‘ಬನಾನಾ ಮಿಲ್ಕ್ ಶೇಕ್’ ಎಂಬ ಲೈನ್’ಗಳನ್ನು ಬರೆಯಲಾಗಿದೆ. ಇದನ್ನು ನೋಡಿದ ಟ್ರೋಲಿಗರು ಸುಮ್ಮನಿರುತ್ತಾರೆಯೇ, ಟೀ ಶರ್ಟ್ ಮೇಲೆ ಬರೆದಿರುವ ಆ ಲೈನ್ ನೋಡಿ, ಗೇಲಿ ಮಾಡುವ ಜೊತೆಗೆ ತಮಾಷೆಯ ಮತ್ತು ಅಸಹ್ಯವಾದ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಆದರೆ ದಿಶಾ ಮಾತ್ರ ಇಷ್ಟೆಲ್ಲಾ ಆದರೂ ಇನ್ನೂ ಆ ಫೋಟೋ ತೆಗೆಯದೆ ಸುಮ್ಮನಿದ್ದಾರೆ. ಇದನ್ನೆಲ್ಲಾ ನೋಡಿದ ಕೆಲವರು ದಿಶಾಗೆ ಆ ಟೀ ಶರ್ಟ್ ಧರಿಸಿದ ನಂತರ ಯಾವ ರೀತಿಯ ಪ್ರತಿಕ್ರಿಯೆಗಳು ಬರಬಹುದು ಎಂದು ಊಹಿಸಿದ್ದರೇನೋ ಎನ್ನುತ್ತಿದ್ದಾರೆ.

Advertisement

 

Advertisement
View this post on Instagram

 

?

A post shared by disha patani (paatni) (@dishapatani) on


ಕೆಲವು ದಿನಗಳ ಹಿಂದೆ ದಿಶಾ ಪಟಾನಿ ಮುಂಬೈನಲ್ಲಿ ಗೆಳೆಯ ಟೈಗರ್ ಶ್ರಾಫ್ ಮನೆಯಲ್ಲಿ ಇದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಕೆಲವರು ಇದು ಗಾಸಿಪ್ ಎಂದು ಸುಮ್ಮನಾದರೆ, ಮತ್ತೆ ಕೆಲವರು ಇದ್ದರೆ ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರು. ಆಗ ದಿಶಾ ಪಟಾನಿ ಈ ಎಲ್ಲಾ ವದಂತಿಗಳಿಗೂ ಸ್ಪಷ್ಟನೆ ನೀಡಿ ಆಡಿಕೊಂಡವರ ಬಾಯಿ ಮುಚ್ಚಿಸಿದ್ದರು. ದಿಶಾ ಪಟಾನಿ ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಚಿತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದು, ತೆಲುಗು ಚಿತ್ರವೊಂದರಲ್ಲಿ ನಟಿಸಲು ಬರೋಬ್ಬರಿ 4-5 ಕೋಟಿ ರೂ. ಕೇಳಿದ್ದಾರೆ ಎಂಬ ಸುದ್ದಿ ಬಂದಿದೆ. ಪ್ರಸ್ತುತ ಅವರು ಸಲ್ಮಾನ್ ಖಾನ್ ಅವರ ರಾಧೆ ಮತ್ತು ಆಶಿಮಾ ಚಿಬ್ಬರ್ ಅವರ ಕೆಟಿನಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement
Share this on...