ದಿಶಾ ಯಾರ ಮನೆಯಲ್ಲಿದ್ದಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ!

in ಮನರಂಜನೆ 20 views

ಕೆಲವು ದಿನಗಳ ಹಿಂದೆ ಬೋಲ್ಡ್ ಆಂಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಮುಂಬೈನಲ್ಲಿ ಗೆಳೆಯ ಟೈಗರ್ ಶ್ರಾಫ್ ಮನೆಯಲ್ಲಿ ಇದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಕೆಲವರು ಇದು ಗಾಸಿಪ್ ಎಂದು ಸುಮ್ಮನಾದರೆ, ಮತ್ತೆ ಕೆಲವರು ಇದ್ದರೆ ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಅಂತೆಕಂತೆಗಳಿಗೆಲ್ಲಾ ಈಗ ಫುಲ್ ಸ್ಟಾಪ್ ಇಡುವ ಸಮಯ ಬಂದಿದೆ ಹೇಗೆ ಅಂತೀರಾ?

Advertisement

ಟೈಗರ್ ಸಹೋದರಿ ಕಿಶು ಶ್ರಾಫ್ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅಲ್ಲಿ ಅವರು ‘ಮೇಕಪ್ ಬೈ ದಿಶಾ ಪಟಾನಿ’ ಎಂದು ಬರೆದಿದ್ದರು. ಇದು ಉಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಆದರೆ ಈ ಪೋಸ್ಟ್ ಮಾಡಿದ ನಂತರ, ಕಿಶು ಸ್ಪಷ್ಟತೆ ನೀಡಿದ್ದಾರೆ.

Advertisement

 

Advertisement

Advertisement

 

ಕಿಶು ಶ್ರಾಫ್ ಮನೆಯಿಂದಲೇ ತನ್ನ ವಿವಿಧ ಭಂಗಿಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಮುಂಬೈ ಟ್ಯಾಬ್ಲಾಯ್ಡ್ ಕಿಶು ಅವರನ್ನು ಸಂಪರ್ಕಿಸಿ ಸಂದರ್ಶನ ಮಾಡಿದೆ. ಯಾಕೆಂದರೆ ಕಿಶು ಮತ್ತು ದಿಶಾ ಇಬ್ಬರು ವಿಡಿಯೋಗಳಿಗೆ ಮತ್ತು ಫೋಟೋಗಳಿಗೆ ಪೋಸ್ ನೀಡುತ್ತಿರುವುದರಿಂದ ದಿಶಾ ಪಟಾನಿ ಕಿಶು ಅವರೊಂದಿಗೆ ಉಳಿದುಕೊಂಡಿದ್ದಾರೆಯೇ ಎಂದು ಅವರು ಕೇಳಿದ್ದಾರೆ.

 

ಇದೀಗ ಕಿಶು “ಇಲ್ಲ, ದಿಶಾ ನಮ್ಮ ಮನೆಯಲ್ಲಿ ಇಲ್ಲ. ಆದರೆ ಅವರು ನಮ್ಮ ಅಪಾರ್ಟ್’ಮೆಂಟ್ ಹತ್ತಿರ ವಾಸಿಸುತ್ತಿದ್ದಾರೆ. ನಾವು ಲಾಕ್ ಡೌನ್ ಮುನ್ನ ಕೆಲವೊಮ್ಮೆ ಕಿರಾಣಿ-ಶಾಪಿಂಗ್ಗೆ ಒಟ್ಟಿಗೆ ಹೋಗುತ್ತಿದ್ದೆವು. ಟೈಗರ್, ದಿಶಾ ಮತ್ತು ನಾನು ಎಲ್ಲಾ ಒಂದೇ ವಾರಿಗೆಯವರು. ಮೇಲಾಗಿ ಸ್ನೇಹಿತರು ಸದಾ ಫಿಟ್ನೆಸ್ ಬಗ್ಗೆ ಕಾಳಜಿವಹಿಸುತ್ತಿರುತ್ತೇವೆ. ಅನೇಕ ಫೋಟೋಗಳು ಮತ್ತು ವೀಡಿಯೊಗಳಲ್ಲಿ ನಾವು ಒಟ್ಟಿಗೆ ಕಾಣಿಸಿಕೊಳ್ಳಲು ಇದೂ ಕಾರಣವಾಗಿದೆ ” ಎಂದು ತಿಳಿಸಿದ್ದಾರೆ.

 

 


ಈಗ ದಿಶಾ ಪಟಾನಿ ಕಿಶು ಶ್ರಾಫ್ ಅವರ ಜೊತೆ ಉಳಿದುಕೊಂಡಿಲ್ಲ. ಆದರೆ ಲಾಕ್ಡೌನ್ ಸಮಯದಲ್ಲೂ ಅವರಿಬ್ಬರೂ ಭೇಟಿಯಾಗುತ್ತಾರೆ ಎಂಬುದಂತೂ ಸ್ಪಷ್ಟವಾಗಿದೆ. ಇತ್ತೀಚೆಗೆ ದಿಶಾ ಅವರು ‘ಬಾಘಿ 3’ ರಲ್ಲಿ ಸ್ನೇಹಿತ ಟೈಗರ್ ಗಾಗಿ ಹಾಡೊಂದರಲ್ಲಿ ನಟಿಸಿದ್ದಾರೆ. ಹಾಡು ಇವರಿಬ್ಬರ ಹಿಂದಿನ ಚಲನಚಿತ್ರಗಳಂತೆ ಚೆನ್ನಾಗಿ ಮೂಡಿಬಂದಿಲ್ಲವಾದರೂ, ಆಕೆಯ ಗ್ಲಾಮರಸ್, ಬಿಕಿನಿ ಅವತಾರಗಳು ಮತ್ತು ಕ್ರೇಜಿ ನೃತ್ಯ ವೈರಲ್ ಆಗಿವೆ.
ದಿಶಾ ಪಟಾನಿ ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಚಿತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದು, ತೆಲುಗು ಚಿತ್ರವೊಂದರಲ್ಲಿ ನಟಿಸಲು ಬರೋಬ್ಬರಿ 4-5 ಕೋಟಿ ರೂ. ಕೇಳಿದ್ದಾರೆ ಎಂಬ ಸುದ್ದಿ ಬಂದಿದೆ. ಪ್ರಸ್ತುತ ಅವರು ಸಲ್ಮಾನ್ ಖಾನ್ ಅವರ ರಾಧೆ ಮತ್ತು ಆಶಿಮಾ ಚಿಬ್ಬರ್ ಅವರ ಕೆಟಿನಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement
Share this on...