ರಾಜಕೀಯಕ್ಕೂ ಬಂದ್ರು ಕಾಮನ್ ಮ್ಯಾನ್​​​…ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ ದಿವಾಕರ್…?

in ಮನರಂಜನೆ/ರಾಜಕೀಯ 74 views

ಬಿಗ್​ ಬಾಸ್​ ಸೀಸನ್ 5 ನೋಡುವವರೆಗೂ ಮನೆಯೊಳಗೆ ಬಂದ ಸ್ಪರ್ಧಿಗಳಲ್ಲಿ ಕೆಲವರು ಬಿಟ್ಟರೆ ಉಳಿದವರ ಬಗ್ಗೆ ವೀಕ್ಷಕರಿಗೆ ಸ್ವಲ್ಪವೂ ಪರಿಚಯ ಇರಲಿಲ್ಲ. ಏಕೆಂದರೆ ಅಲ್ಲಿ ಸಾಮಾನ್ಯ ಸ್ಪರ್ಧಿಗಳಿಗೆ ಕೂಡಾ ಎಂಟ್ರಿ ಇತ್ತು. ಆದರೆ ಬಿಗ್​ ಬಾಸ್​​ನಲ್ಲಿ ದಿನಗಳು ಕಳೆಯುತ್ತಿದ್ದಂತೆ ಅಲ್ಲಿದ್ದವರೆಲ್ಲಾ ರಾಜ್ಯದ ಜನರಿಗೆ ಬಹಳ ಪರಿಚಯವಾದರು. ಆ ಸೀಸನ್​​ನಲ್ಲಿ ಚಂದನ್ ಶೆಟ್ಟಿ ವಿನ್ನರ್ ಆದರೆ ಕಾಮನ್ ಮ್ಯಾನ್ ದಿವಾಕರ್ ರನ್ನರ್ ಅಪ್ ಆದರು. ದಿವಾಕರ್ ಬಿಗ್ ಬಾಸ್​​​ಗೆ ಬರುವುದಕ್ಕೂ ಮುನ್ನ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದವರು. ಆಯುರ್ವೇದ ತೈಲಗಳನ್ನು ಬ್ಯಾಗ್​​ನಲ್ಲಿ ಇರಿಸಿಕೊಂಡು ಪ್ರತಿ ಊರಿಗೂ ತೆರಳಿ ಆ ಔಷಧಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಬಿಗ್​ ಬಾಸ್​​ಗೆ ಬಂದ ನಂತರ ಅವರ ಜೀವನದಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂತು. ದೊಡ್ಮನೆಯಲ್ಲಿ ಚಂದನ್ ಶೆಟ್ಟಿ ಜೊತೆ ಬಹಳ ಆಪ್ತರಾಗಿದ್ದ ದಿವಾಕರ್​ ಹೊರ ಬಂದ ನಂತರವೂ ಚಂದನ್ ಜೊತೆ ಸ್ನೇಹ ಉಳಿಸಿಕೊಂಡಿದ್ದಾರೆ. ಚಂದನ್ ಅವರಂತೆ ತಾವೂ ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿನಿಂದಲೂ ನಟನಾಗಬೇಕೆಂದು ಆಸೆ ಹೊಂದಿದ್ದ ದಿವಾಕರ್ ಕೆಲವೊಂದು ಶಾರ್ಟ್​ ಫಿಲ್ಮ್​​ನಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸಿದ್ದರು.

Advertisement

Advertisement

ಬಿಗ್ ಬಾಸ್​​​ನಿಂದ ಹೊರ ಬಂದ ನಂತರ ಅವರಿಗೆ ಹೆಚ್ಚು ಜನರ ಪರಿಚಯವಾದ್ದರಿಂದ ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ‘ಗುಲಾಲ್’ ಹಾಗೂ ‘ರೇಸ್’ ಚಿತ್ರದಲ್ಲಿ ದಿವಾಕರ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಬಹಳ ವರ್ಷಗಳ ಆಸೆ ನೆರವೇರಿದ ಖುಷಿಯಲ್ಲಿದ್ದರೂ ಆ ಸಿನಿಮಾಗಳು ದಿವಾಕರ್ ಕೈ ಹಿಡಿಯಲಿಲ್ಲ. ಆದರೆ ಚಿತ್ರರಂಗವನ್ನು ಎಂದಿಗೂ ನಾನು ಬಿಡುವುದಿಲ್ಲ ಎಂದು ದಿವಾಕರ್ ಹೇಳುತ್ತಾರೆ. ಇದರ ಜೊತೆ ಜೊತೆಗೆ ಇದೀಗ ರಾಜಕೀಯದಲ್ಲೂ ದಿವಾಕರ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Advertisement

ಬಿಗ್​ ಬಾಸ್​ನಿಂದ ಹೊರ ಬಂದ ನಂತರ ತಮ್ಮ ಹಳೆಯ ಸೇಲ್ಸ್ ಮ್ಯಾನ್ ವೃತ್ತಿಯಿಂದ ದೂರ ಉಳಿದಿದ್ದ ದಿವಾಕರ್ ಲಾಕ್​ ಡೌನ್ ಸಮಯದಲ್ಲಿ ಮತ್ತೆ ಔಷಧಗಳನ್ನು ಸೇಲ್ ಮಾಡಿದ್ದರು. ಜೊತೆಗೆ ಗಾಡಿಯಲ್ಲಿ ಸೊಪ್ಪು ಕೂಡಾ ಮಾರಿದ್ದರು. ಸದ್ಯಕ್ಕೆ ಚಿತ್ರರಂಗದ ಚಟುವಟಿಕೆ ನಿಧಾನವಾಗಿ ಆರಂಭವಾಗುತ್ತಿರುವುದರಿಂದ ದಿವಾಕರ್ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಜೆಡಿಎಸ್​​ ಪಕ್ಷದ ಸತ್ಯನಾರಾಯಣ ನಿಧನರಾಗಿದ್ದರಿಂದ ತೆರವಾಗಿರುವ ಶಿರಾ ವಿಧಾನಸಭೆ ಕ್ಷೇತ್ರದಿಂದ ದಿವಾಕರ್ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗಿದೆ.

Advertisement

ದಿವಾಕರ್​​ಗೆ ಮೊದಲಿನಿಂದಲೂ ತುಮಕೂರಿನ ಜನರೊಂದಿಗೆ ಹೆಚ್ಚು ಬಾಂಧವ್ಯ ಇದೆ ಎನ್ನಲಾಗಿದೆ. ಶಿರಾ ದಲ್ಲೂ ಅವರಿಗೆ ಒಳ್ಳೆಯ ಸ್ನೇಹಿತರಿದ್ದು ಚುನಾವಣೆಗೆ ಸ್ಪರ್ಧಿಸಿದರೆ ಸ್ನೇಹಿತರ ಬೆಂಬಲ ದೊರೆಯಬಹುದು ಎಂಬ ವಿಶ್ವಾಸದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ 3 ರಂದು ಚುನಾವಣೆ ನಡೆಯಲಿದ್ದು ರಾಜಕೀಯವಾದರೂ ದಿವಾಕರ್​​​​​ ಕೈ ಹಿಡಿಯಲಿದೆಯಾ ಕಾದು ನೋಡಬೇಕು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...