ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿರುವ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತಾ? ಶಾಕ್ ಆಗುತ್ತೀರ !

in ಮನರಂಜನೆ 23 views

ಕಿರುತೆರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಖಾಸಗಿ ವಾಹಿನಿಗಳು ಅನೇಕ ರಿಯಾಲಿಟಿ ಶೋಗಳನ್ನು ನಡೆಸುತ್ತಲೇ ಇರುತ್ತವೆ. ಈ ಸಾಲಿನಲ್ಲಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದುಕೊಂಡಿರುವ ಬಿಗ್ ಬಾಸ್ ರಿಯಾಲಿಟಿ ಶೋ ನೇ ಅಗ್ರಸ್ಥಾನ ಎಂದು ಹೇಳಿದರೆ ತಪ್ಪಾಗಲಾರದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಿರೂಪಣೆ, ನೆಚ್ಚಿನ ಕಲಾವಿದರುಗಳು ಒಂದೇ ಮನೆಯಲ್ಲಿ ನೂರು ದಿನಗಳ ಕಾಲ ಬದುಕಿ,ಟಾಸ್ಕ್ ಗಳಲ್ಲಿ ಮಾಡುವ ಗಲಾಟೆ, ತಮಾಷೆ ಗಳೆಲ್ಲವೂ ಕೂಡ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತದೆ.ಮೊದಲೆರಡು ಆವೃತ್ತಿಯಲ್ಲಿ ಬರೀ ಸೆಲೆಬ್ರಿಟಿಗಳನ್ನೇ ಹೊಂದಿದ್ದ ಈ ರಿಯಾಲಿಟಿ ಶೋ, ನಂತರ ಸಾರ್ವಜನಿಕರಿಗೂ ಕೂಡ ಅವಕಾಶಗಳನ್ನು ಒದಗಿಸಿ ಕೊಟ್ಟಿತ್ತು. ಅವಕಾಶ ಮತ್ತು ಸದುಪಯೋಗಪಡಿಸಿಕೊಂಡ ಕೆಲ ಜನ ಸಾಮಾನ್ಯ ಸ್ಪರ್ಧಿಗಳು ಇದೀಗ ಸೆಲೆಬ್ರಿಟಿಯಾಗಿದ್ದಾರೆ

Advertisement

 

Advertisement

Advertisement

ಒಬ್ಬ ವ್ಯಕ್ತಿಗೆ ತನ್ನ ಮೇಲೆ ತನಗೆ ಗೌರವ ಹುಟ್ಟಬೇಕು ಎಂದರೆ ಅವನು ಅಭಿಮಾನಿಯಾಗಿರಬೇಕು. ಅಷ್ಟು ಮಾತ್ರವಲ್ಲದೆ ಆತ್ಮಸಾಕ್ಷಿಯಾಗಿ ಬದುಕುತ್ತಿರಬೇಕು.
ಸಮಾಜದಲ್ಲಿ ಅದೆಷ್ಟೋ ಜನ ತಾವು ಆ ಕೆಲಸ ಮಾಡುವುದಿಲ್ಲ, ಈ ಕೆಲಸ ಮಾಡುವುದಿಲ್ಲ, ಅದು ಕೀಳು ಮಟ್ಟದ ಕೆಲಸ ಎಂದು ಹೇಳಿ ಬದುಕುತ್ತಿರುತ್ತಾರೆ . ಆದರೆ ಅವರಿಗೆಲ್ಲ ತಿಳಿದಿಲ್ಲ. ಸಮಾಜದಲ್ಲಿ ಕಳ್ಳತನ ದರೋಡೆ ಕೊಲೆ ಸುಲಿಗೆ ಇವೆಲ್ಲವನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡಿದರೂ ಅದು ಶ್ರೇಷ್ಠವಾದ ಕೆಲಸವೇ. ಅದೇ ರೀತಿ ತಾನು ಕನ್ನಡದ ನಟ ಅಲ್ಲದೆ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ರನ್ನರ್  ಎಂಬ ಅಹಂಕಾರವನ್ನು ಹೊಂದಿಲ್ಲದೆ ರಸ್ತೆ ಬದಿಯಲ್ಲಿ ತರಕಾರಿಯನ್ನು ಮಾರುತ್ತಿದ್ದಾರೆ. ಅಷ್ಟಕ್ಕೂ ಆ ಸ್ಪರ್ಧಿ ನಟ ಯಾರು ಗೊತ್ತಾ? ದಿವಾಕರ್ !

Advertisement

 

ಒಂದು ಕಾಲದಲ್ಲಿ ತಮ್ಮ ಮಾತಿನ ಚಾತುರ್ಯವನ್ನು ಬಳಸಿಕೊಂಡು ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ದಿವಾಕರ್ , ಆ ನಂತರ ಬಿಗ್ ಬಾಸ್ ಆವೃತ್ತಿ ೫ ರಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅದ್ಭುತ ಆಟ, ಪ್ರಾಮಾಣಿಕತೆ ಹಾಗೂ ಚಂದನ್ ಶೆಟ್ಟಿ ಅವರ ಜೊತೆ ಆಪ್ತ ಗೆಳೆಯನಾಗಿ ತಮಾಷೆಯನ್ನು ಮಾಡುತ್ತಾ ಖ್ಯಾತಿ ಪಡೆದುಕೊಂಡಿದ್ದ ದಿವಾಕರ್ ಇನ್ನೇನು ಬಿಗ್ ಬಾಸ್ ಕಾರ್ಯಕ್ರಮವನ್ನು ಗೆದ್ದುಬಿಡುತ್ತಾರೆ ಅನ್ನುವ ಸಮಯದಲ್ಲಿ ರನ್ನರ್ ಆಗಿ ಹೊರಹೊಮ್ಮುತ್ತಾರೆ. ನಂತರ ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡ ದಿವಾಕರ್ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಇದೀಗ ಅವರು ನಾಯಕ ನಟನಾಗಿ ಅಭಿನಯಿಸಿರುವ ಗುಲಾಳ್.ಕಾಮ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಲಾಕ್ ಡೌನ್ ನಂತರ ತೆರೆಗೆ ಬರಲಿದೆ.

 

 

ಇದರ ನಡುವೆ ಯಲಹಂಕ ಬಳಿ ದಿವಾಕರ್ ಅವರು ತರಕಾರಿಯನ್ನು ಮಾಡುತ್ತಿರುವುದನ್ನು ಕಂಡ ಜನ ಸಾಮಾನ್ಯರು ಆಶ್ಚರ್ಯ ಪಟ್ಟಿದ್ದಾರೆ. ಹೌದು ಯಲಹಂಕದ ರಸ್ತೆ ಬದಿಯಲ್ಲಿ ದಿವಾಕರ್ ಅವರು ತರಕಾರಿಯನ್ನು ಮಾರುತ್ತಿದ್ದಾರೆ. ಅಷ್ಟೇ ಅಲ್ಲದೆ ಜನರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಕೂಡ ಮಾರುತ್ತಿದ್ದಾರೆ.ಮಹಾಮಾರಿ ಕೋರೊನದಿಂದ ಎಲ್ಲ ಚಿತ್ರರಂಗದ ಚಟುವಟಿಕೆಗಳು ನಿಂತು ಹೋಗಿದೆ. ಹಾಗಾಗಿ ಕಳೆದ ಒಂದುವರೆ ತಿಂಗಳಿಂದ ತರಕಾರಿ ಮಾರುತ್ತಿದ್ದಾರೆ ದಿವಾಕರ್.

 

ಇನ್ನು ಈ ಕೆಲಸ ಅವರಿಗೆ ಹೊಸ ಕೆಲಸವೇನಲ್ಲ ಕಾರಣ ಈ ಹಿಂದೆ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಅವರು ದೇಶವೇ ಲಾಕ್ ಡೌನ್ ಆಗಿದೆ ಎಂದು ಮನೆಯಲ್ಲಿ ಸುಮ್ಮನೆ ಕೂರದೆ ತಮಗೆ ಗೊತ್ತಿರುವ ಸೇಲ್ಸ್ ಸ್ಕಿಲ್ ಅನ್ನು ಬಳಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ದಿವಾಕರ್ ಅವರ ಈ ಸ್ವಾಭಿಮಾನದ ಕೆಲಸ ನೋಡಿ ಅವರ ಅಭಿಮಾನಿಗಳು ಹೆಮ್ಮೆ ಬರುತ್ತಿರುವುದಂತೂ ಸತ್ಯ

Advertisement
Share this on...