ನಿಮಗೆ ಗೊತ್ತಾ.. ದಿಯಾ ಸಿನಿಮಾದ ನಾಯಕಿಗೆ ಮದುವೆಯಾಗಿ ಮಗು ಕೂಡ ಇದೇ ರೀ !

in ಸಿನಿಮಾ 57 views

ಸದ್ಯ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ದಿಯಾ ಸಿನಿಮಾ. ಚಿತ್ರಮಂದಿರಗಳ ಸಮಸ್ಯೆ ನಡುವೆಯೂ ಕೂಡ ದಿಯಾ ಸಿನಿಮಾ ಗೆದ್ದಿದೆ. ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ಸಮಯದಲ್ಲಿ ಮಾರಣಾಂತಿಕ ಕಾಯಿಲೆ ಕೊರೋನಾ ದಿಂದ ಚಿತ್ರಮಂದಿರಗಳು ಬಂದ್ ಆಗಿ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿತ್ತು .ಆದರೆ ಅದ್ಯಾವಾಗ ಆನ್ಲೈನ್ / ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಮಾಡಿದರೋ ಸಿನಿ ಪ್ರೇಕ್ಷಕರು ಮುಗಿ ಬಿದ್ದು ಸಿನಿಮಾವನ್ನು ವೀಕ್ಷಿಸಿ ಉತ್ತಮ ಪ್ರತಿಕ್ರಿಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅಪಾರ ಜನಮನ್ನಣೆಯನ್ನು ಪಡೆದುಕೊಂಡರು ದಿಯಾ ಪಾತ್ರಧಾರಿ ನಟಿ ಖುಷಿ. ಹೌದು ನಟಿ ಖುಷಿ ಸಿನಿಮಾದಲ್ಲಿ ದಿಯಾ ಸ್ವರೂಪ್ ಪಾತ್ರದಲ್ಲಿ ತಮ್ಮ ಅದ್ಭುತ ನಟನೆಯಿಂದ ಕ್ಷೇತ್ರ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

Advertisement

 

Advertisement

Advertisement

 

Advertisement

ಇನ್ನು ದಿಯಾ ಸಿನಿಮಾ ನೋಡಿದ ಪ್ರತಿಯೊಬ್ಬ ಯುವಕರು ಕೂಡ ಖುಷಿ ಅವರನ್ನು ಮೆಚ್ಚಿಕೊಂಡರೂ. ಅಲ್ಲದೆ ಅವರ ಕನಸಿನ ರಾಣಿ ಯಾದರೂ ನಟಿ ಖುಷಿ. ಆದರೆ ಅದೆಷ್ಟೋ ಜನರಿಗೆ ತಿಳಿದಿರಲಿಲ್ಲ ನಟಿ ಖುಷಿ ಅವರಿಗೆ ವಿವಾಹವಾಗಿದೆ ಎಂದು. ಯಾವಾಗ ಈ ವಿಚಾರ ಬಹಿರಂಗವಾಯಿತು ಅದೆಷ್ಟೋ ಯುವಕರ ಹಾರ್ಟ್ ಬ್ರೇಕ್ ಆಗಿದೆ.. ನಿಜವಾಗಲು ದಿಯಾಗೆ ಮದುವೆಯಾಗಿದೆಯಾ? ಎಂದು ಸಾಮಾಜಿಕ ಜಾಲ ತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

 

 

ಹೌದು ದಿಯಾ ಪಾತ್ರಧಾರಿ ನಟಿ ಖುಷಿ ಅವರಿಗೆ ಈಗಾಗಲೇ ವಿವಾಹವಾಗಿ ಒಂದು ಮುದ್ದಾದ ಮಗು ಕೂಡ ಇದೆ. ಆಕೆಯ ಗಂಡನ ಹೆಸರು ರಾಕೇಶ್, ಸ್ವಂತ ಬ್ಯುಸಿನೆಸ್ ಅನ್ನು ನಡೆಸುತ್ತಿದ್ದಾರೆ. ಖುಷಿ ಮತ್ತು ರಾಕೇಶ್ ಅವರು ಪ್ರೀತಿಸಿ ವಿವಾಹವಾಗಿದ್ದು, ಇಬ್ಬರ ಕುಟುಂಬದ ಸಮ್ಮುಖದಲ್ಲಿ ಮೂರು ವರ್ಷಗಳ ಹಿಂದೆ ಹಸೆಮಣೆ ಏರಿದ್ದಾರೆ. ಈ ಜೋಡಿಗೆ ತನಿಷಾ ಎನ್ನುವ ಮುದ್ದಾದ ಹೆಣ್ಣು ಮಗುವಿದೆ.

 

 

ಇನ್ನು ನಟಿ ಖುಷಿ ಇದೀಗ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೊದಲೇ ದಿ ಗ್ರೇಡ್ ಸೋಡಾ ಬುಟ್ಟಿ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಗಿಂತ ಮೊದಲು ನಾಟಕ ಮತ್ತು ಕಿರುಚಿತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಅವರು, ಅದ್ಭುತ ನೃತ್ಯ ಗಾರ್ತಿ ಮತ್ತು ಸಂಗೀತಗಾರ್ತಿಯು ಕೂಡ ಹೌದು.

 

 

ಇನ್ನು ದಿಯಾ ಸಿನಿಮಾ ಖುಷಿ ನಾಯಕಿಯಾಗಿ ಅಭಿನಯಿಸಿದ ಮೊಟ್ಟ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಹೆಸರು ಮತ್ತು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.ಇನ್ನು ಹಟ್ಟಿಯ ಸಿನಿಮಾ ಬರೋಬ್ಬರಿ ನಾಲ್ಕು ವರ್ಷದ ಹಿಂದೆ ಸೆಟ್ಟೇರಿತ್ತು.ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಖುಷಿ ಹಾಗೂ ರಾಕೇಶ್ ಜೋಡಿ ಹಸೆಮಣೆ ಏರುತ್ತಾರೆ. ಸಿನಿಮಾ ರಿಲೀಸ್ ಆಗುವಷ್ಟರಲ್ಲಿ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಕೂಡ ಜನಿಸುತ್ತಾಳೆ. ಇನ್ನು ಈ ಸಿನಿಮಾ ಆನ್ ಲೈನ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ನಟಿ ಖುಷಿ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಗಳು ಬರುತ್ತಿದೆಯಂತೆ. ಆದರೆ ಸಿನಿಮಾ ಆಯ್ಕೆಯಲ್ಲಿ ಎಚ್ಚರ ವಹಿಸಿ ಆಯ್ದುಕೊಳ್ಳುತ್ತಿರುವ ನಟಿ ಖುಷಿ, ಸದ್ಯ ನಕ್ಷೆ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದಿಯಾ ಸಿನಿಮಾದ ನಂತರ ಖುಷಿಯ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ನಕ್ಷೆಯಲ್ಲಿ ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಕಾದು ನೋಡಬೇಕಾಗಿದೆ

Advertisement
Share this on...