ಅದನ್ನು ಮಾಡಿ, ಇಲ್ಲವೇ ಇದನ್ನು ಮಾಡಿ…ಮುಖ್ಯಮಂತ್ರಿಗೆ ಉಪೇಂದ್ರ ಹೀಗೆ ಹೇಳಿದ್ದೇಕೆ…?

in ಕನ್ನಡ ಮಾಹಿತಿ 24 views

ಬಿಗಿ ಬಂದೊಬಸ್ತ್​​​ ನಡುವೆಯೂ ಕರ್ನಾಟಕದಲ್ಲಿ ಪರಿಸ್ಥಿತಿ ಕಂಟ್ರೋಲ್​​​ಗೆ ಬರುತ್ತಿಲ್ಲ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಮಹಾಮಾರಿ ವೈರಸ್ ದಿನವೂ ಹರಡುತ್ತಲೇ ಇದೆ. ಲಾಕ್ ಡೌನ್ ಇದ್ದರೂ ಸಹ ಜನರು ಬೇಕಾಬಿಟ್ಟಿ ತಿರುಗುತ್ತಿದ್ಧಾರೆ. ಇನ್ನು ಏಪ್ರಿಲ್ 14 ರ ನಂತರವೂ ಲಾಕ್ ಡೌನ್ ಮುಂದುವರೆಯಬಹುದು ಎನ್ನಲಾಗುತ್ತಿದೆ.

Advertisement

ಈ ನಡುವೆ ರಿಯಲ್ ಸ್ಟಾರ್ ಉಪೇಂದ್ರ ಸಿಎಂ ಯಡಿಯೂರಪ್ಪ ಅವರಿಗೆ ಎರಡು ಐಡಿಯಾಗಳನ್ನು ನೀಡಿ ದಯವಿಟ್ಟು ಇವರೆಡರಲ್ಲಿ ಯಾವುದಾದರೂ ಒಂದನ್ನು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

 

Advertisement

Advertisement

 

1. ಸಂಪೂರ್ಣ ಲಾಕ್​ ಡೌನ್ ಮಾಡುವುದು: ಈಗ ಲಾಕ್​ ಡೌನ್ ಇದ್ದರೂ ಜನರಿಗೆ ಇಂತಿಷ್ಟು ಅವಧಿಯಲ್ಲಿ ಮನೆಯಿಂದ ಹೊರಬಂದು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಜನರು ಸಾಮಾನುಗಳನ್ನು ಕೊಳ್ಳಲು ಹೊರಗೆ ಬಂದಾಗ ಕೂಡಾ ವೈರಸ್ ಹರಡುವುದಿಲ್ಲ ಎಂದು ಏನು ಗ್ಯಾರಂಟಿ..? ಇದಕ್ಕಾಗಿ ಸಂಪೂರ್ಣ ಲಾಕ್​​ ಡೌನ್ ಮಾಡಿ ಯಾವುದೇ ಕಾರಣಕ್ಕೂ ಹೊರ ಬಾರದೆ ನೋಡಿಕೊಳ್ಳಬೇಕು. ಸರ್ಕಾರಿ ವ್ಯವಸ್ಥೆಯನ್ನು ಈ ಯೋಜನೆಗೆ ಬಳಸಿಕೊಂಡು ಜನರಿಗೆ ಅಗತ್ಯ ಇರುವ ಸಾಮಗ್ರಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.

 

 

2. ಲಾಕ್​ ಡೌನ್​ ತೆರವುಗೊಳಿಸಿ ಜನರಿಗೆ ಜವಾಬ್ದಾರಿ ನೀಡುವುದು: ಏಪ್ರಿಲ್ 14 ರ ನಂತರ ಲಾಕ್ ಡೌನ್ ತೆರವುಗೊಳಿಸಿ ಜನರಿಗೆ ಅವರ ಆರೋಗ್ಯದ ಬಗ್ಗೆ ಜವಾಬ್ದಾರಿ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಅವರವರ ವ್ಯವಹಾರಗಳನ್ನು ಮುಂದುವರೆಸಲು ಅವಕಾಶ ನೀಡಿದರೆ ಜನರು ತಮ್ಮ ಜೀವದ ಬಗ್ಗೆ ಖಂಡಿತ ಎಚ್ಚರಿಕೆ ವಹಿಸುವುದಲ್ಲದೆ, ತಮ್ಮ ಮಕ್ಕಳ ಹಾಗೂ ಕುಟುಂಬದ ಬಗ್ಗೆ ಖಂಡಿತ ಭಯದಿಂದ ಇರುತ್ತಾರೆ. ಈ ಕಾರಣಕ್ಕಾದರೂ ಅವರು ಎಚ್ಚರದಿಂದ ಇರುತ್ತಾರೆ.

 

 

ಲಾಕ್ ಡೌನ್ ಎಂದು ಹೇಳಿ, ಜನರು ಮನೆಯಿಂದ ಹೊರ ಬಂದಾಗ ಅವರನ್ನು ಬೈಯ್ಯುವುದು ಎಷ್ಟು ಸರಿ..? ಇದೇ ರೀತಿ ಲಾಕ್​ ಡೌನ್ ಮುಂದುವರೆಸಿದರೂ ಕಷ್ಟ, ಮಲಗಿದ್ರೆ ಸಾವು, ಕೂತಿದ್ರೆ ರೋಗ, ನಡೀತಿದ್ರೆ ಜೀವನ ಎಂದು ಉಪೇಂದ್ರ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಸಿಎಂಗೆ ಮನವಿ ಮಾಡಿದ್ಧಾರೆ. ಮಾನ್ಯ ಮುಖ್ಯಮಂತ್ರಿಗಳು ಉಪೇಂದ್ರ ಅವರ ಮನವಿಯನ್ನು ಪರಿಗಣಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.

Advertisement
Share this on...