"ಪದೇ ಪದೇ ನನ್ನನ್ನು ಕೆಣಕಬೇಡಿ. ನಾನು ಮತ್ತೇ ಸಿಎಂ ಆಗ್ತೀನಿ"..! - Namma Kannada Suddi
H D Kumaraswamy

“ಪದೇ ಪದೇ ನನ್ನನ್ನು ಕೆಣಕಬೇಡಿ. ನಾನು ಮತ್ತೇ ಸಿಎಂ ಆಗ್ತೀನಿ”..!

in ರಾಜಕೀಯ 411 views

ಬೆಂಗಳೂರು: ಈಗ ನನಗೆ ಹಿನ್ನಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನೊ ದಿನಗಳು ಬರುತ್ತವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತೊಡೆ ತಟ್ಟಿದ್ದಾರೆ. ಜಾತಿ ಸಮೀಕ್ಷೆ ಬಿಡುಗಡೆಗೆ ಕುಮಾರಸ್ವಾಮಿ ಅಡ್ಡಗಾಲು ಹಾಕಿದ್ರು ಅನ್ನೋ ಸಿದ್ದರಾಮಯ್ಯ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯಗೆ ನನ್ನ ಭಯ ಇದೆ. ಜನರಿಂದ ಮತ್ತೆ ಮೇಲೆ ಬರ್ತೀನಿ ಅನ್ನೊ ಸೂಚನೆ ಅವ್ರಿಗೆ ಇದೆ.ಈಗ ನನಗೆ ಹಿನ್ನಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನೊ ದಿನಗಳು ಬರುತ್ತವೆ ಎನ್ನುವ ಮೂಲಕ ಮತ್ತೆ ಸಿಎಂ ಆಗ್ತೀನಿ‌ ಎಂದು ಹೆಚ್ ಡಿ ಕುಮಾರಸ್ವಾಮಿ ಸವಾಲಾಕಿದ್ದಾರೆ.

Advertisement

ರಾಜಕೀಯ ತೆವಲಿಗೆ ನನ್ನ ವಿರುದ್ಧ ಟೀಕೆ

Advertisement

ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡಾ. ಸಿದ್ದರಾಮಯ್ಯಗೆ ನಿನ್ನೆ ರಾತ್ರಿ ಕನಸ್ಸು ಬಿತ್ತಂತಾ? ನನ್ನ ವಿರುದ್ದ ಟೀಕೆ ಮಾಡೋಕೆ ಬೇರೆ ವಿಚಾರಗಳು ಇಲ್ಲ.ಜನರನ್ನ ಮರಳು ಮಾಡೋಕೆ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ಹಳೆಯದನ್ನ ಮತ್ತೆ ಕೆದಕಿಕೊಂಡು ಹೊರಟಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇದ್ದರು. ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆಯೇ ಮಾಡಿಲ್ಲ. ಕಾಂಗ್ರೆಸ್ ನ ಮಂತ್ರಿಗಳು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾಕೆ ಸುಳ್ಳು ಹೇಳ್ತಾರೆ.ಬೇರೆ ವಿಷಯ ಅವ್ರ ಬಳಿ ಇಲ್ಲ. ಹೀಗಾಗಿ ನನ್ನ ಮೇಲೆ ಆಪಾದನೆ ಮಾಡ್ತಿದ್ದಾರೆ.

Advertisement

 

Advertisement

ಈಗ ಹಿಂದುಳಿದವರ ಬಗ್ಗೆ ಇವ್ರಿಗೆ ಪ್ರೀತಿ ಬಂದಿದೆ. ಪದೇ ಪದೇ ನನ್ನನ್ನ ಕೆಣಕಬೇಡಿ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ತೆವಲಿಗೆ ಸಮಾಜಗಳನ್ನ ನನ್ನ ವಿರುದ್ದ ಎತ್ತಿಕಟ್ಟಿದ್ದೀರಾ ಎಂದು ಗೊತ್ತಿದೆ. ರಾಜಕೀಯದ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರೀ.ಇದು ಬಹಳ ದಿನ ನಡೆಯೊಲ್ಲ. ಯಾಕೆ ನನ್ನನ್ನ ಕೆಣಕುತ್ತೀರಾ.ಅವತ್ತು ನಿಮಗೆ ಜವಾಬ್ದಾರಿ ಇರಲಿಲ್ಲವಾ? ಅವತ್ತು ನಾನು ವಿರೋಧ ಮಾಡಿದ್ರೆ ಅವತ್ತೇ ಬೆಂಬಲ ವಾಪಸ್ ಪಡೆಯಬೇಕಿತ್ತು. ಈಗ ಈಶ್ವರಪ್ಪನಿಗೆ ನಮೋ ನಮೋ ಅಂತಿದ್ದೀರಾ? ಎಂದು ಕೆಂಡಾಮಂಡಲರಾದರು.

ಸಿದ್ದರಾಮಯ್ಯಗೆ ಬಿಜೆಪಿ ಕಣ್ಣಿಗೆ ಕಾಣ್ತಿಲ್ಲ. ಜೆಡಿಎಸ್ ಮಾತ್ರ ಕಾಣ್ತಿದೆ. ಅವ್ರಿಗೆ ಜೆಡಿಎಸ್ ಮುಗಿಸಬೇಕು.ಯಾಕಂದ್ರೆ ಅವ್ರನ್ನ ಬೆಳೆಸಿದ್ವಿ ಅಲ್ಲವಾ ಆ ತಪ್ಪಿಗೆ. ಹೀಗಾಗಿ ನನ್ನ ಬಗ್ಗೆ ಸಿದ್ದರಾಮಯ್ಯ ಪದೇ ಪದೇ ಮಾತಾಡೋದು ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ

ಕೆಆರ್ ಪೇಟೆಯಂತೆ ಶಿರಾ ಮುಗಿಸ್ತೀನಿ ಎಂಬ ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ ಕುರಿತು ಕಿಡಿ ಕಾರಿದ ಹೆಚ್ ಡಿಕೆ, ಅವರು ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ. ಇದು ಮಾಧ್ಯಮಗಳಲ್ಲೇ ಬಂದಿದೆ. ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ ಅದೇ ದುಡ್ಡನ್ನು ತಗೊಂಡು ಹೋಗಿ ಬೀದಿಯಲ್ಲಿ ಇರುವ ಜನರಿಗೆ ಕೊಡಬೇಕಿತ್ತು. ಅಲ್ಲಿ ಅವರ ಕಷ್ಟ ಸುಖ ಕೇಳಲು ಕನಿಷ್ಠ ಸೌಜನ್ಯಕ್ಕಾದ್ರು ಹೋಗಿದ್ದೀರಾ..?
ನನಗೆ ಇಷ್ಟೆಲ್ಲಾ ನೋವು ಇದ್ರು, ಉತ್ತರ ಕರ್ನಾಟಕ ಭಾಗದಲ್ಲಿ ಜನರು ನನ್ನನ್ನು ಕೈ ಬಿಟ್ಟಿದ್ರು ಆ ಭಾಗದ ಜನರ ಕಷ್ಟಗಳಿಗೆ ನಾನು ಸ್ಪಂದಿಸುತ್ತಿದ್ದೇನೆ ಎಂದರು.

ಜನ ಮತ ಕೊಡದೇ ಹೋದ್ರು ನನ್ನ ಪ್ರಾಮಾಣಿಕ ಹಣದಲ್ಲಿ ಸಹಾಯ ಮಾಡ್ತಿದ್ದೇನೆ

ಉತ್ತರ ಕರ್ನಾಟಕ ಪ್ರವಾಹದ ಕುರಿತು ಮಾತನಾಡಿದ ಅವರು, ನಾಡಿದ್ದು ಸಿಎಂ ವೈಮಾನಿಕ ಸಮೀಕ್ಷೆ ಮಾಡ್ತಾರೆ ಅಂತ ನೋಡಿದ್ದೇನೆ. ಸಿಎಂಗೆ ಹೃದಯದಲ್ಲಿ ಗಾಂಭೀರ್ಯ ಇದ್ದಿದ್ದರೆ ಶಿಕಾರಿಪುರಕ್ಕೆ ಹೋಗೋ ಬದಲು ಅಲ್ಲಿಗೆ ಹೋಗಬೇಕಿತ್ತು. ಊರು ಹತ್ತಿಕೊಂಡು ಉರಿಯುತ್ತಿದೆ, ಜಿಲ್ಲೆಗಳು ನೀರಿನಲ್ಲಿ ಮುಳುಗಿ ಹೋಗಿದೆ.ಹೀಗಿದ್ರು ಶಿಕಾರಿಪುರಕ್ಕೆ ಹೋಗಿ ಸಿಎಂ ಕುಳಿತಿದ್ದಾರೆ.ಜನರಿಗೆ ಈ ಸರ್ಕಾರ ಸ್ಪಂದನೆ ಮಾಡ್ತಿಲ್ಲ. ಸಂತ್ರಸ್ಥರು ನರಳಾಡುತ್ತಿದ್ದಾರೆ. ಸಹಾಯ ಮಾಡುವ ಕನಿಷ್ಠ ಸೌಜನ್ಯ ಈ ಸರ್ಕಾರಕ್ಕೆ ಇಲ್ಲ.ಪರಿಹಾರ ಸರಿಯಾಗಿ ಆಗಬೇಕು. ಬೆಳೆ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಎಲ್ಲಾ ಬೆಳೆ ನಾಶವಾಗಿದೆ. ಯಾವ ಮಂತ್ರಿಗೂ ಜವಾಬ್ದಾರಿ ಇಲ್ಲ. ಯಾರು ಜವಾಬ್ದಾರಿ ತೆಗೆದುಕೊಳ್ತಿಲ್ಲ. ಬಿಜೆಪಿ ಅವ್ರಿಗೆ ಚುನಾವಣೆ ನಡೆಸಬೇಕು ಅಷ್ಟೇ. ಚುನಾವಣೆಗೆ ಕೋಟಿ‌ ಕೋಟಿ ಹಣ ಖರ್ಚು ಮಾಡ್ತಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾ ಚುನಾವಣೆ ಮಾಡ್ತಿದ್ದೀರಾ. ಆ ಹಣವನ್ನು ಸಿಎಂ ಮಾಡಲು ಸ್ಥಾನ ಕೊಟ್ಟ ಜನರಿಗೆ ಕೊಡಿ. ಸರ್ಕಾರದ ಪರಿಹಾರಕ್ಕೆ ನಾನು ಕಾಯೊಲ್ಲ. ಬುಧವಾರ‌ ಪ್ರವಾಹ ಪ್ರದೇಶಕ್ಕೆ ನಾನೇ ಅಕ್ಕಿ, ಬೆಳೆ,ಬಟ್ಟೆ ಕಳಿಸ್ತಿದ್ದೇನೆ. ನನ್ನ ಡ್ಯೂಟಿ ನಾನು ಮಾಡ್ತಿದ್ದೇನೆ. ಆ ಭಾಗದ ಜನ ಮತ ಕೊಡದೇ ಹೋದ್ರು ನನ್ನ ಪ್ರಾಮಾಣಿಕ ಹಣದಲ್ಲಿ ಸಹಾಯ ಮಾಡ್ತಿದ್ದೇನೆ. ನಮ್ಮ ‌ಪಕ್ಷದ ನಾಯಕರಿಗೆ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. ಬುಧವಾರ ಎಲ್ಲಾ ಸಾಮಗ್ರಿ ನಮ್ಮ ‌ಪಕ್ಷದಿಂದ ಕೊಡ್ತಿದ್ದೇವೆ ಎಂದು ತಿಳಿಸಿದರು.

Advertisement
Share this on...

Latest from ರಾಜಕೀಯ

ಅಭಿಮಾನಿ ತಮ್ಮನ್ನು ಬೀಳಿಸಿದರೂ ಕೋಪಗೊಳ್ಳದ ಪವನ್ ಕಲ್ಯಾಣ್…ನಿಮ್ಮ ಸಹನೆಗೆ ಹ್ಯಾಟ್ಸಾಫ್ ಎಂದ ನೆಟಿಜನ್ಸ್​​​​​​..ವಿಡಿಯೋ

ಪವನ್ ಕಲ್ಯಾಣ್, ಆಂಧ್ರ ಹಾಗೂ ತೆಲಂಗಾಣದಲ್ಲಿ ಪವರ್ ಸ್ಟಾರ್ ಎಂದೇ ಫೇಮಸ್. ನಟನಾಗಿ, ರಾಜಕೀಯ ನಾಯಕನಾಗಿ…

ತಮಿಳುನಾಡು ಸಿಎಂ ಭೇಟಿ ಮಾಡಿದ ಶಿವರಾಜ್​​ ಕುಮಾರ್ ದಂಪತಿ….ಭೇಟಿ ಬಗ್ಗೆ ಶಿವಣ್ಣ ಹೇಳಿದ್ದೇನು..?

ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಮೈಸೂರಿನಿಂದ ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿಗೆ ಕರೆತಂದು…

ನನ್ನ ಕೆನ್ನೆಗಳನ್ನು ಇನ್ಮುಂದೆ ಜೋಪಾನವಾಗಿರಿಸಿಕೊಳ್ಳಬೇಕು…ಸಂಸದೆ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ…?

ರಾಜಕೀಯ ಮುಖಂಡರು ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನೀಡುವ ಕೆಲವೊಂದು ಹೇಳಿಕೆಗಳು ಇತರರ ಬೇಸರಕ್ಕೆ ಕಾರಣವಾಗುತ್ತದೆ. ಈ…

ಪಾಲಿಟಿಕ್ಸ್​​​​ ಬೇಡ ಎನ್ನುತ್ತಿದ್ದ ರಿಯಲ್ ಹೀರೋ, ಪ್ರಕಾಶ್ ರಾಜ್​ ವಿರುದ್ಧ ಮಾ ಚುನಾವಣೆಗೆ ಸ್ಪರ್ಧಿಸ್ತಾರಾ…?

ಕಳೆದ ಲೋಕಸಭೆ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್, ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅವರು…

Go to Top