anvitha

ಈ ನಟಿ ” ಗಟ್ಟಿಮೇಳ” ಧಾರವಾಹಿಗೆ ಹೇಗೆ ಆಯ್ಕೆಯಾದರು ಗೊತ್ತಾ?

in ಮನರಂಜನೆ/ಸಿನಿಮಾ 1,227 views

ಗಟ್ಟಿಮೇಳ ಧಾರವಾಹಿಯಲ್ಲಿ ಆಧ್ಯಾ ಪಾತ್ರ ಮಾಡುತ್ತಿರುವ ನಟಿಯ ನಿಜವಾದ ಹೆಸರು ಅನ್ವಿತಾ. ಆಧ್ಯಾ ಪಾತ್ರ ವನ್ನು ಹಲವರು ಇಷ್ಟಪಟ್ಟಿದ್ದು,ನಮ್ಮ ಮನೆಯಲ್ಲೂ ಇಂತ ಹ ಸೊಸೆ ಇರಬೇಕು,ತಂಗಿ ಇರಬೇಕು,ಮಗಳು ಇರಬೇಕು ಎಂದು ಹಲವರು ಮನಸ್ಸಿನಲ್ಲಿ ಅಂದುಕೊಂಡಿರುವರು.ನಟಿ ಅನ್ವಿತಾ ಕೆಲ ತುಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.ಇವರು ಮೂಲತಃ ಸಾಗರದವರು.ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದ ಅನ್ವಿತಾ ಈಗ ಪೋಷಕರ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.ಇವರ ತಂದೆ ಉದ್ಯಮಿ, ತಾಯಿ ಪಿಜಿ ನೆಡೆಸುತ್ತಾರೆ.ಅಣ್ಣ ತುಳು ಸಿನಿಮಾ ನಟ.ಎಂಬಿಎ ಮುಗಿಸಿದ ನಂತರದಲ್ಲಿ ಅನ್ವಿತಾ ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟರು. ಕಾಲೇಜಿನಲ್ಲಿದ್ದಾಗ ಹೆಚ್ಚಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಮಂಗಳೂರಿನಲ್ಲಿದ್ದಾಗ ನಿರೂಪಣೆ ಮಾಡುತ್ತಿದ್ದರು.ತುಳು ಇಂಡಸ್ಟ್ರಿಯಲ್ಲಿ ಇವರು ಸಕ್ರಿಯವಾಗಿದ್ದರು.ತುಳು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ.ಆಗಲೇ ಧಾರಾವಾಹಿಗಳಿಂದ ಅವರಿಗೆ ಆಫರ್ ಬರುತ್ತಿದ್ದವು.ಇವರ ಟಿಕ್ ಟಾಕ್ ವೀಡಿಯೋ ನೋಡಿ ಮಾಸ್ಟರ್ ಆನಂದ್ ಅವರ ಸಹೋದರ ಅರುಣ್ ಕಾಲ್ ಮಾಡಿ ಬೆಂಗಳೂರಿನಲ್ಲಿ ಆಡಿಷನ್ ನೀಡುವಂತೆ ಇವರಿಗೆ ಹೇಳಿದರು.ಇವರು ಆಡಿಷನ್ನಲ್ಲಿ ಸೆಲೆಕ್ಟ್ ಆದರೂ ವಿಚಿತ್ರ ಏನಪ್ಪಾ ಅಂದ್ರೆ ಇವರು ಆಡಿಷನ್ ಕೊಟ್ಟಿದ್ದೆ ಬೇರೆ ಪಾತ್ರಕ್ಕೆ ಆದರೆ ಇವರಿಗೆ ಸಿಕ್ಕಿದ್ದೇ ಬೇರೆ ಪಾತ್ರ. ಧಾರಾವಾಹಿ ತಂಡದವರು ಆಧ್ಯಾ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ ಎಂದ ಮೇಲೆ ಈ ಪಾತ್ರ ಮಾಡಲು ಒಪ್ಪಿಕೊಂಡರು.

Advertisement


ಅವರ ಪಾತ್ರದ ಬಗ್ಗೆ ಅವರಿಗೆ ತುಂಬಾ ಖುಷಿಯಿದೆ.ತಂಗಿ ಪಾತ್ರ ಎಂದಾಗ ಇವರಿಗೆ ಒಂದುಕಡೆ ಆಗತ್ತೋ ಇಲ್ಲವೋ ಎಂಬ ಸಂಶಯವಿತ್ತು.ಆದ್ರೆ ಇವರಿಗೆ ರಿಯಲ್ ಲೈಫ್ ನಲ್ಲಿಯೂ ಕೂಡಾ ಒಬ್ಬ ಅಣ್ಣ ಇದ್ದಾನೆ.ಹಾಗಾಗಿ ಇವರಿಗೆ ಈ ಪಾತ್ರ ಕಷ್ಟ ಎನಿಸಲಿಲ್ಲ.ಇವರು ನಿಜ ಜೀವನದಲ್ಲಿ ಹೇಗಿದ್ದಾರೋ ಹಾಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವನ್ನು ಎಲ್ಲರೂ ಇಷ್ಟ ಪಟ್ಟಿದ್ದಾರೆ.ಇವರಿಗೆ ಐತಿಹಾಸಿಕ ಪಾತ್ರಗಳೆಂದರೆ ತುಂಬಾ ಇಷ್ಟ.

Advertisement

ಇವರಿಗೆ ನೆಗಟಿವ್ ಶೇಡ್ ಮಾಡಬೇಕು ಎಂಬ ಆಸೆ ಕೂಡಾ ಇದೆ.ಸಿನಿಮಾ,ವೆಬ್ ಸಿರೀಸ್ ಕಡೆ ಗಮನ ಕೊಡುವ ಆಸಕ್ತಿ ಇದೆ .ಈ ಧಾರಾವಾಹಿ ಇವರಿಗೆ ಒಳ್ಳೆ ಹೆಸರನ್ನು ತಂದು ಕೊಟ್ಟಿರುವುದರಿಂದ ಈ ಕ್ಷೇತ್ರವನ್ನು ಅವರಿಗೆ ಬಿಡಲು ಮನಸ್ಸಿಲ್ಲ. ಇವರಿಗೆ  ಜೂಲಿ ಲಕ್ಷ್ಮೀ ಕಂಡರೆ ತುಂಬಾ ಇಷ್ಟ.ಕಾರಣ ಇವರಿಗೆ ಅವರ ನಟನೆ , ಗ್ರೇಸ್ ಎಲ್ಲವೂ ಕೂಡಾ ಇಷ್ಟ.ಇವರು ತಮ್ಮ ನಿಜ ಜೀವನದಲ್ಲಿ ಮದುವೆ ವಿಷಯದಿಂದ ದೂರ ಇರುವುದಾಗಿ ಹೇಳಿದ್ದಾರೆ. ಸಿಂಗಲ್ ಆಗಿ ಇವರ ಭವಿಷ್ಯದಲ್ಲಿ ಸಾಧನೆ ಮಾಡಬೇಕೆಂಬ ಆಸಕ್ತಿಯಿದೆ .ಇವರಿಗೆ ಡಾನ್ಸ್ ಎಂದರೆ ತುಂಬಾ ಇಷ್ಟ ಹಾಗಾಗಿ ಇವರಿಗೆ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲು ಆಸಕ್ತಿ ಇದೆ ಆದರೆ ಬೇರೆ ಯಾವುದೇ ರಿಯಾಲಿಟಿ ಶೋ ನಲ್ಲಿ ಆಸಕ್ತಿ ಇಲ್ಲ.ಆಧ್ಯಾ ಪಾತ್ರದಲ್ಲಿ ಈಗ ಇವರು ಮುದ್ದು ಮುದ್ದಾಗಿ ವೇದಾಂತ ಮತ್ತು ವಿಕ್ರಂ ತಂಗಿಯಾಗಿ ಆದ್ಯಾ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Advertisement

Advertisement

ಅಮೂಲ್ಯ ಮತ್ತು ವೇದಾಂತ ಪ್ರೀತಿಗೆ ಸೇತುವೆಯನ್ನು ಕಟ್ಟುತ್ತಿದ್ದಾರೆ.ಗಟ್ಟಿಮೇಳ ಧಾರಾವಾಹಿಯಲ್ಲಿ ಸಿಂಪಲ್ ಹುಡುಗಿಯಾಗಿ ಸಾರ್ಥಕ್ ಹೆಂಡ್ತಿ ಆಗಿ ಅಭಿನಯಿಸುತ್ತಿದ್ದಾರೆ.ಇವರು ನಮ್ಮ ಸಾಗರ ಅನ್ನುವುದು ಖುಷಿಯ ಸಂಗತಿ…

Advertisement