ಸೌತೆಕಾಯಿ ಹೆಚ್ಚು ತಿನ್ನುವುದರಿಂದ ಆಗುವ ದುಷ್ಪರಿಣಾಮ ಏನು ಗೊತ್ತೇ?

in Helath-Arogya 177 views

ಬೇಸಿಗೆ ಹಿನ್ನೆಲೆ ನೀರಿನಂಶ ಕೂಡಿದ ಆಹಾರ ಸೇವನೆ ಮಾಡಬೇಕೆಂದು ಅನಿಸುತ್ತದೆ. ಅದರಲ್ಲೂ ಸೌತೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಮಗೆ ತಿಳಿದಿದೆ.
ನಮ್ಮ ನಡುವೆ ಹಲವರು ತಮ್ಮ ಡಯಟ್‍ಗೆಂದು ಸೌತೆಕಾಯಿ ತಿನ್ನುತ್ತಾರೆ. ಈ ಮಧ್ಯೆ ಸೌತೆಕಾಯಿ ಒಳ್ಳೆಯದು ಅಂತಾ ಹೆಚ್ಚಾಗಿ ಸೇವನೆ ಮಾಡಿದರೇ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.

Advertisement

 

Advertisement

Advertisement

 

Advertisement

ದಿನನಿತ್ಯ ಡಯಟ್ ಎಂದು ದಿನಕ್ಕೆ 8 ರಿಂದ 10 ಸೌತೆಕಾಯಿ ತಿನ್ನುತ್ತಿರುವುದನ್ನು ನೋಡಿದ್ದೇವೆ. ಹೀಗೆ ಸೌತೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದಾಗುತ್ತದೆ. ಆದರೆ ಅವಶ್ಯಕ್ಕಿಂತ ಇದೇ ಸೌತೆಕಾಯಿ ಜಾಸ್ತಿ ತಿಂದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತೆ ಸೌತೆಕಾಯಿ ಕೂಡ ವಿಷ ಆಗುತ್ತದೆಯಂತೆ.

 

 

ಎಂದಿಗೂ ಸಹ ರಾತ್ರಿಯ ವೇಳೆ ಸೌತೆಕಾಯಿ ತಿನ್ನಲು ಮುಂದಾಗಬೇಡಿ. ಇದನ್ನೇ ಬೆಳಗ್ಗೆ ಹೊತ್ತು ತಿಂದರೆ ನಿಮ್ಮ ದೇಹಕ್ಕೆ ಅಧಿಕ ಲಾಭವಾಗುತ್ತದೆ. ಮಧ್ಯಾಹ್ನ ತಿಂದರೆ ಸಾಮಾನ್ಯವಾಗಿ ಒಳ್ಳೆಯದಾಗುತ್ತದೆ. ಆದರೆ ರಾತ್ರಿ ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆಯಂತೆ. ಹೌದು, ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್ ಎಂಬ ಅನಾರೋಗ್ಯಕಾರಿ ಅಂಶವಿರುತ್ತದೆ.

 

 

ನೀವು ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ನಿಮ್ಮೆ ದೇಹದಲ್ಲಿ ಟಾಕ್ಸಿಕ್ ಅಂಶ ಸೇರಿಕೊಳ್ಳುತ್ತದೆ.. ಇದರಿಂದ ಲಿವರ್, ಪ್ಯಾಂಕ್ರಿಯಾಟಿಕ್ ಮತ್ತು ಮೂತ್ರಪಿಂಡ ಊತವಾಗುವ ಸಂಭವವು ಇದೆ. ಹಾಗಾಗಿ ಸೌತೆಕಾಯಿಯನ್ನು ಮಿತಿಯಲ್ಲಿ ತಿಂದರೆ ಉತ್ತಮ. ಅಲ್ಲದೇ ಸೌತೆಕಾಯಿ ತಣ್ಣಗಿನ ಪದಾರ್ಥ. ನಿಮಗೆ ಕಫ, ಶೀತ, ನೆಗಡಿ ಅಥವಾ ಉಸಿರಾಟದ ಸಮಸ್ಯೆ ಇದ್ದರೆ ಸೌತೆಕಾಯಿ ತಿನ್ನುವುದನ್ನು ಕಲಿತುಕೊಳ್ಳಿ.

Advertisement
Share this on...