ಪ್ರತಿದಿನ ಲವಂಗ ಸೇವಿಸಿದರೆ ಆಗುವ ಆರೋಗ್ಯ ಪರಿಣಾಮಗಳೇನು ಗೊತ್ತಾ?

in ಕನ್ನಡ ಆರೋಗ್ಯ 287 views

ಭಾರತದ ಮಸಾಲೆಪದಾರ್ಥಗಳು ಬರೇ ಅಡುಗೆಯ ಭಾಗವಾಗಿರದೇ ಮದ್ದಿಗಾಗಿಯೂ ಉಪಯೋಗಿಸಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಜನರಲ್ಲಿ ಹೆಚ್ಚಾಗುತ್ತಿದ್ದು, ಅನೇಕ ಮಂದಿ ಮತ್ತೆ ಮನೆಮದ್ದಿನ ಕಡೆ ವಾಲುತ್ತಿದ್ದಾರೆ. ನಮ್ಮ ಆರೋಗ್ಯ ನಮ್ಮ ಕೈಲಿದೆ ಎನ್ನುವುದನ್ನು ಮನಗಾಣಬೇಕು. ಪ್ರತಿದಿನ, ಪ್ರತಿಕ್ಷಣ ನಡೆಸುವ ಅನೇಕ ಸಣ್ಣ ವಿಷಯಗಳು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತವೆ. ಉದಾಹರಣೆಗೆ, ದಿನಕ್ಕೆ ಒಂದರಿಂದ ಎರಡು ಲೀಟರ್ ನೀರು ಕುಡಿಯುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ನಾವು ಸೇವಿಸುವ ಆಹಾರ, ದೈನಂದಿನ ಕ್ರಿಯೆಗಳ ನಿಯಮಿತ ಪಾಲನೆ ಮೊದಲಾದವುಗಳು ನಮ್ಮನ್ನು ಆರೋಗ್ಯವಂತರನ್ನಾಗಿಡಲು ಮಾರ್ಗೋಪಾಯಗಳು. ಲವಂಗ ಸುವಾಸನೆ ಜೊತೆ ಒಂದಿಷ್ಟು ಖಾರದ ರುಚಿಯನ್ನು ನೀಡುವಂಥ ಸಾಂಬಾರ ಪದಾರ್ಥ. ಇದು ಹೇಗೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳೋಣ. ಲವಂಗವನ್ನು ಬೆಚ್ಚಗಿನ ನೀರಿನಲ್ಲಿ ಕುದಿಸಿ ಅದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಂಬಂಧಿ ತೊಂದರೆಗಳಿಂದ ದೂರವಿರಬಹುದು. ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ. ಅದು ಉಗುರು ಬೆಚ್ಚಗಾಗುವ ವೇಳೆಗೆ ಅದಕ್ಕೆ ಎರಡು ಲವಂಗವನ್ನು ಸೇರಿಸಿ. ಆ ನೀರನ್ನು ಕೆಳಗಿಳಿಸಿ ತಕ್ಷಣ ಕುಡಿದು, ನಂತರ ಮಲಗಿ. ಮಲಬದ್ಧತೆ, ಅತಿಸಾರ, ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳನ್ನು ಇದರಿಂದ ನಿವಾರಿಸಬಹುದು, ಉತ್ತಮ ಜೀಣಾಂಗವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿ.

Advertisement

Advertisement

ಮುಖ್ಯವಾಗಿ ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸುವುದರಿಂದ ಹಲ್ಲುನೋವು ಶಮನವಾಗುತ್ತದೆ. ನೋವಿರುವ ಹಲ್ಲುಗಳ ಮೇಲೆ ಲವಂಗವನ್ನು ಇರಿಸಿ ಹಲ್ಲುನೋವಿನಿಂದ ಮುಕ್ತಿ ಪಡೆಯಬಹುದು. ಗಂಟಲು ನೋವನ್ನು ನಿವಾರಿಸಲು ಲವಂಗ ಸಹಾಯ ಮಾಡುತ್ತದೆ. ಕೈ ಮತ್ತು ಕಾಲುಗಳ ನಡುಕದಿಂದ ಬಳಲುತ್ತಿರುವ ಜನರು ರಾತ್ರಿಯಲ್ಲಿ ಮಲಗುವ ಮುನ್ನ 1-2 ಲವಂಗವನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Advertisement

ಲವಂಗವನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೆಮ್ಮು, ಶೀತ, ವೈರಲ್ ಸೋಂಕು, ಬ್ರಾಂಕೈಟಿಸ್, ಸೈನಸ್ ಮತ್ತು ಆಸ್ತಮಾದ ನಿವಾರಣೆಗೆ ಕೂಡಾ ಲವಂಗ ಸಹಾಯ ಮಾಡುತ್ತದೆ. ಲವಂಗವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ‌. ಇದು ಮೊಡವೆಗಳನ್ನು ತಡೆಯಲು ಸಹಾಯ ಮಾಡುವ ಒಂದು ರೀತಿಯ ಸ್ಯಾಲಿಸಿಲೇಟ್ ಅನ್ನು ಹೊಂದಿರುತ್ತದೆ. ಆದ್ದರಿಂದ ಈ ನೀರನ್ನು ಸೇವಿಸುವುದರಿಂದ ಮೊಡವೆಗಳನ್ನು ತಡೆಯಬಹುದು.

Advertisement

ಲವಂಗದಲ್ಲಿ ವಿಟಮಿನ್ ಇ, ವಿಟಮಿನ್ ಸಿ, ಫೋಲೇಟ್, ರಿಬೋಫ್ಲಾವಿನ್, ವಿಟಮಿನ್ ಎ, ಥಯಾಮಿನ್, ವಿಟಮಿನ್ ಡಿ, ಒಮೆಗಾ 3 ಕೊಬ್ಬಿನಾಮ್ಲಗಳು ಹೆಚ್ಚಿವೆ.
– ಅಹಲ್ಯಾ

Advertisement