david rach

“ಲವ್ ಮಾಕ್ಟೇಲ್ 2” ಸಿನಿಮಾದ ನಾಯಕಿ ಯಾರು ಗೊತ್ತಾ?

in ಮನರಂಜನೆ/ಸಿನಿಮಾ 244 views

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅಭಿನಯದ ‘ ಲವ್ ಮಾಕ್ಟೇಲ್’ ಸಿನಿಮಾ ಈಗಾಗಲೇ ಚಿತ್ರ ರಸಿಕರ ಮನಸ್ಸು ಗೆದ್ದಿದೆ. ಈ ವರ್ಷ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡ ಕೆಲವೇ ಸಿನಿಮಾಗಳಲ್ಲಿ ಲವ್ ಮಾಕ್ಟೇಲ್ ಕೂಡಾ ಒಂದು.ಮೊದಲ ಬಾರಿಗೆ ನಟ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದ ಈ ಸಿನಿಮಾ ಚಿತ್ರಮಂದಿರದಲ್ಲಿ ಹೌಸ್ಫುಲ್ ಪ್ರದರ್ಶನ ಕಂದಿದ್ದಲ್ಲದೇ,ಡಿಜಿಟಲ್ ವೇದಿಕೆಯಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು.ಈ ರೀತಿ ಅದರಲ್ಲಿ ಬರುವ ನಿಧಿ ಪಾತ್ರ ಎಲ್ಲರ ಅಚ್ಚುಮೆಚ್ಚಿನ ಪಾತ್ರವಾಗಿತ್ತು. ಆದರೆ ಈವಾಗ ಸಿನಿ ರಸಿಕರಿಗೆ ಸಂತಸದ ವಿಷಯ ಒಂದಿದೆ.ಇನ್ನೂ ಸದ್ಯದ ದಿನಗಳಲ್ಲಿ ‘ಲವ್ ಮಾಕ್ಟೇಲ್ 2’ ಚಿತ್ರೀಕರಣ ಆರಂಭವಾಗಲಿದೆ. ಈ ವಿಷಯ ಎಲ್ಲರಿಗೂ ಕುತೂಹಲ ಮೂಡಿಸಿದೆ.ನಿಧಿ ಪಾತ್ರ ಇರತ್ತೋ ಇಲ್ಲವೋ ಎಂಬ ಹಲವಾರು ಪ್ರಶ್ನೆಗಳು ಸಿನಿ ಪ್ರಿಯರಲ್ಲೂ ಮೂಡಿದೆ. ಆ ಎಲ್ಲಾ ಪ್ರಶ್ನೆಗಳಿಗೂ ಮತ್ತು ಕುತೂಹಲಗಳಿಗೆ ಉತ್ತರ ಸಿಕ್ಕಿದೆ.ಡಾರ್ಲಿಂಗ್ ಕೃಷ್ಣ ಮತ್ತು ಮಿಲಾನಾ ನಾಗರಾಜ್ ಈ ಸಿನೆಮಾದ ನಾಯಕಿಯ ಹೆಸರನ್ನು ಹೇಳಿದ್ದಾರೆ.

Advertisement

Advertisement

“ರಾಚೆಲ್ ಡೇವಿಡ್” ಎಂಬುವರನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ‘ಲವ್ ಮಾಕ್ಟೇಲ್ 2’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.ಕೇರಳ ಮೂಲದ ರಾಚೆಲ್ ಡೇವಿಡ್ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆ ಹಾಗೂ ಕ್ರೈಸ್ತ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.ಕನ್ನಡದ ಹುಡುಗಿ,ಆದರೆ ಮಲಯಾಳಂನಿಂದ ಚಿತ್ರರಂಗಕ್ಕೆ ಕಾಲಿಟ್ಟ ಬೆಡಗಿ ಈಕೆ. ಮೂಲತಃ ಬೆಂಗಳೂರಿನ ಹುಡುಗಿ ರಾಚೆಲ್ ಡೇವಿಡ್ ಬಿಬಿಎಂ ಪದವೀಧರೆ,ಕಾಲೇಜಿನಲ್ಲಿದ್ದಾಗಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಇವರು ಈಗ ಲವ್ ಮಾಕ್ಟೇಲ್ 2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮುಂಬಯಿಯ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ನಲ್ಲಿ ನಟನಾ ತರಭೇತಿ ಪಡೆದಿದ್ದಾರೆ.ಈ ಸಿನಿಮಾದ ನಾಯಕಿಯ ಪಾತ್ರಕ್ಕೆ ಇವರ ಲುಕ್,ನಟನೆ ಸರಿ ಹೊಂದುತ್ತಿದ್ದ ಕಾರಣ ಇವರನ್ನು ಆಯ್ಕೆ ಮಾಡಲಾಗಿದೆ.

Advertisement

ಈ ಹಿಂದೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಮಲಯಾಳಂ ನಲ್ಲಿ ರಾಚೆಲ್ ನಟಿಸಿದ ಚಿತ್ರಗಳು ‘ಇರುಪತಿಯೋನ್ನಂ ನೂಟ್ರಾಂಡು,ಒರೊನ್ನನರ ಪ್ರಣಯಕದಾ,ಕಬೀರಿಂದೆ ದಿವಸಂಗಳ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇವರ ನಟನಾ ವೈಖರಿಯನ್ನು ನೋಡಿ ಡಾರ್ಲಿಂಗ್ ಕೃಷ್ಣ ಇವರನ್ನು ಆಯ್ಕೆ ಮಾಡಿದ್ದಾರೆ.

Advertisement

ಲವ್ ಮಾಕ್ಟೇಲ್ ಸಿನಿಮಾ ಈಗಾಗಲೇ ಸಿನಿ ರಸಿಕರಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.ಈಗ “ಲವ್ ಮಾಕ್ಟೇಲ್2” ಚಿತ್ರದ ಮೇಲೆ ಸಿನಿ ಪ್ರಿಯರು ಹತ್ತು ಹಲವಾರು ನೀರೀಕ್ಷೆ ಇಟ್ಟುಕೊಂಡಿದ್ದಾರೆ.ಈ ಚಿತ್ರದ ಯಶಸ್ಸು ಡಾರ್ಲಿಂಗ್ ಕೃಷ್ಣ ಅವರಿಗೆ ತುಂಬಾ ಮುಖ್ಯವಾಗಿದ್ದು,ಒಂದು ಉತ್ತಮ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.ಪ್ರೀತಿಯ ರೂಪು ರೇಷೆಯನ್ನೆ ಆಧಾರವಾಗಿಸಿ ಮಾಡಿದ ಲವ್ ಮಾಕ್ಟೇಲ್ ಜನರ ಮನಸ್ಸನ್ನು ಗೆದ್ದಿತ್ತು.ಅದೇ ರೀತಿ “ಲವ್ ಮಾಕ್ಟೇಲ್ 2” ಚಿತ್ರದ ಬಿಡುಗಡೆಗೆ ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

Advertisement
Share this on...