hudugaru abhinaya

ಎಲ್ಲರಿಗೂ ಸ್ಫೂರ್ತಿಯಾಗಿರುವ ಈ ವಿಶೇಷ ಚೇತನ ನಟಿಯ ಬಗ್ಗೆ ಗೊತ್ತೇ…?

in ಮನರಂಜನೆ/ಸಿನಿಮಾ 932 views

ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕವೇ ಚಿತ್ರ ರಸಿಕರ ಮನಗೆದ್ದಿರುವ ಈ ವಿಶೇಷ ಚೇತನ ನಟಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಕಿವುಡು ಮತ್ತು ಮೂಕಿಯಾಗಿರುವ ಈ ನಟಿಯ ಹೆಸರು ಅಭಿನಯ. ಅಭಿನಯದ ಮೂಲಕವೇ ತಮ್ಮ ಅಂಗವೈಕಲ್ಯವನ್ನೂ ಮೆಟ್ಟಿನಿಂತು ಸಾಧನೆ ಮಾಡಿರುವ ಈ ನಟಿಯ ಬಗ್ಗೆ ನಿಜಕ್ಕೂ ಹೆಮ್ಮೆಯೆನಿಸುತ್ತೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತು ಬಹುಶ: ಈ ನಟಿಗೆ ಹೆಚ್ಚು ಆಪ್ಯಾಯಮಾನ ಎನಿಸುತ್ತೆ.ಮೂಲತ: ಆಂಧ್ರಪ್ರದೇಶದವರಾದ ಅಭಿನಯ ಪುನೀತ್ ರಾಜ್ ಕುಮಾರ್ ಅಭಿನಯದ ’ಹುಡುಗರು’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮನೆಮಾತಾದರು. ಈ ಚಿತ್ರದಲ್ಲಿ ಅಭಿನಯ ಪುನೀತ್ ಅವರ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅಭಿನಯ ತಮಿಳಿನ ನಾಡೋಡಿಗಲ್ ಚಿತ್ರದಲ್ಲಿ ಅಭಿನಯಿಸಿದ್ದರು. ಅಭಿನಯ ಅವರ ಸಿನಿಮಾ ಸಾಧನೆಗೆ ಅವರ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಇನ್ನು ಅಭಿನಯ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ವರ್ಷಗಳ ಹಿಂದೆ ಧ್ರುವ ಶರ್ಮಾ ಜೊತೆ ಕಿಚ್ಚು ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ವಿರಾಟ ಪರ್ವ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಮೂರು ಕಾಲಘಟ್ಟದಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾ. ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳಿವೆ. ಕೇ’ಸ್​​​​ವೊಂದರ ತನಿಖೆಗೆ ನೇಮಕವಾಗುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಈ ಪಾತ್ರ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

Advertisement

Advertisement

ತಮಿಳಿನ ‘ನಾಡೋಡಿಗಲ್’ ನಂತರ ಅಭಿನಯ ಯಂಗ್ ಇಂಡಿಯ, ಶಂಭೋ ಶಿವ ಶಂಭೋ, ಕಥಾಯಿ, ಈಶನ್, ಆಟನಾಯಗನ್ , ತೆಲುಗಿನ ನೇನಿಂತೆ, ಕಿಂಗ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಂದಿದ್ದಾರೆ. ‘ನಾಡೋಡಿಗಲ್’ ಚಿತ್ರಕ್ಕೆ ಅಭಿನಯರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡಾ ಲಭಿಸಿದೆ.

Advertisement

ಹೈದರಾಬಾದ್ ನ ಕಡಲೂರು ಮೂಲದವರಾದ ಅಭಿನಯ ಹುಟ್ಟಿದ 3 ತಿಂಗಳಿಗೆ ಮಾತು ಮತ್ತು ಆಲಿಸುವ ಶಕ್ತಿಯನ್ನು ಕಳೆದುಕೊಂಡರಂತೆ. ಇದರಿಂದ ನೊಂದ ತಂದೆ-ತಾಯಿ ಮಗಳಿಗೆ ಮಾತು ಅರ್ಥ ಮಾಡಿಸುವ ಸಲುವಾಗಿ ಪ್ರತಿ ದಿನ ತರಬೇತಿ ನೀಡುತ್ತಾರೆ. ತಂದೆ-ತಾಯಿ ಹೇಳುತ್ತಿದ್ದನ್ನು ನೋಡಿ ಅರ್ಥೈಸಿಕೊಳ್ಳುತ್ತಿದ್ದ ಅಭಿನಯ ಇಂದು ನಟಿಸುವಲ್ಲಿಯವರೆಗೆ ಬಂದಿದ್ದಾರೆ. ಮಾತ್ರವಲ್ಲದೆ ಕಿರುತೆರೆ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದರು.

Advertisement

 

ಮಗಳನ್ನು ನಟಿಯನ್ನಾಗಿ ಮಾಡಿಸಬೇಕು ಎಂದು ಅಭಿನಯ ತಂದೆ-ತಾಯಿ ಆಸೆಯಾಗಿತ್ತಂತೆ. ಆದರೆ ಮಾತು,ಕಿವಿ ಕೇಳಿಸುವುದಿಲ್ಲ ಎಂದು ಆಕೆಗೆ ಹಲವರು ಅವಕಾಶ ಕೊಡಲು ಹಿಂದೂ ಮುಂದು ನೋಡುತ್ತಿದ್ದರಂತೆ. ಆದರೆ ನಾಡೋಡಿಗಲ್ ಚಿತ್ರದ ನಿರ್ದೇಶಕ ಅಭಿನಯ ಅವರ ನಟನಾ ಕೌಶಲ್ಯ ನೋಡಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರಂತೆ. ಅಂದಿನಿಂದ ಅಭಿನಯ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅಭಿನಯ ಅವರಿಗೆ ಕಿವಿ ಶಸ್ತ್ರಚಿಕಿತ್ಸೆಯಾಗಿದ್ದು, ಸ್ವಲ್ಪಮಟ್ಟಿಗೆ ಆಕೆಗೆ ಕಿವಿ ಕೇಳಿಸುವಂತಾಗಿದೆ ಎಂದು ತಿಳಿದುಬಂದಿದೆ.

ಅದೇನೇ ಇರಲಿ ಎಲ್ಲವೂ ಸರಿಯಿದ್ದರೂ ಹಲವರಿಗೆ ಅವಕಾಶವೇ ಸಿಗುವುದಿಲ್ಲ, ಇನ್ನು ಹಲವರಿಗೆ ಏನೂ ಮಾಡಲು ಮನಸಿರುವುದಿಲ್ಲ. ಇನ್ನೂ ಅನೇಕ ಬುದ್ಧಿವಂತರು ತಪ್ಪುದಾರಿ ತಾವು ತುಳಿಯುತ್ತಾ, ಇನ್ನಷ್ಟು ಜನರನ್ನೂ ತುಳಿಸುತ್ತಾ ಸಮಾಜ ಹಾಳುಮಾಡುತ್ತಾರೆ. ಆದರೆ ಮಾತು ಬಾರದ, ಕಿವಿಯೂ ಕೇಳದ ಈ ನಟಿಯ ಸಾಧನೆ ನಿಜಕ್ಕೂ ಎಲ್ಲರೂ ಹೆಮ್ಮೆ ಪಡಲೇಬೇಕು.

Advertisement
Share this on...