ಈ ಬಾರಿಯ ಬಿಗ್ ಬಾಸ್ ಮನೆ ಹೇಗಿದೆ ಗೊತ್ತಾ? ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಯ ಫೋಟೋ ಹಂಚಿಕೊಂಡ ಬಿಗ್ ಬಾಸ್ ಶೋ ಆಯೋಜಕ ಪರಮೇಶ್ವರ್ ಗುಂಡ್ಕಲ್

in ಮನರಂಜನೆ 8,875 views

ಬಿಗ್‌ಬಾಸ್ ಕನ್ನಡ ಸೀಸನ್ 08ರ ಆರಂಭಕ್ಕೆ ಇನ್ನು ಕೇವಲ ನಾಲ್ಕೇ ದಿನ ಬಾಕಿ ಉಳಿದಿದೆ. ಫೆಬ್ರವರಿ 28 ರ ಬಿಗ್‌ಬಾಸ್ ಶೋ ಆರಂಭವಾಗಲಿದೆ. ಬಿಗ್‌ಬಾಸ್ ಮನೆ ಸಹ ಅದ್ಧೂರಿಯಾಗಿ ತಯಾರಾಗಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಭಿನ್ನವಾಗಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಬಿಗ್‌ಬಾಸ್ ಶೋ ಆಯೋಜಕರಲ್ಲಿ ಪ್ರಮುಖರಾದ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್‌ಬಾಸ್ ಮನೆಯ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಬಿಗ್ ಬಾಸ್ ಮನೆಯ ಫೋಟೋವನ್ನು ಹಂಚಿಕೊಂಡಿದ್ದು, ಈಗಾಗಲೇ ವೀಕ್ಷಕರಿಗೆ ಭಾರಿ ಕುತೂಹಲ ಮೂಡಿಸಿದೆ. ಬಿಗ್‌ಬಾಸ್ ಮನೆಯ ಅಡುಗೆ ಮನೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಹಸಿರು ಬಣ್ಣಕ್ಕೆ ಹೆಚ್ಚಿನ ಒತ್ತು ನೀಡಿ ಐಶಾರಾಮಿಯಾಗಿ, ವಿಶಾಲವಾಗಿ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ.

Advertisement

Advertisement

ಹೆಚ್ಚು ಚರ್ಚೆ, ಜಗಳ, ನಗು ಎಲ್ಲದಕ್ಕೂ ಮೂಲ ಸ್ಥಾನ ಅಡುಗೆ ಮನೆಯೇ. ಸ್ಪರ್ಧಿಗಳು ಹೆಚ್ಚು ಸಮಯ ಕಳೆಯುವುದು ಸಹ ಇಲ್ಲಿಯೇ. ಹಾಗಾಗಿ ಈ ಏರಿಯಾಕ್ಕೆ ‘ಜಸ್ಟ್ ಬಾತ್ ಬಾತಲ್ಲಿ’ ಎಂದು ಹೆಸರಿಡಲಾಗಿದ್ದು ಕೊಂಚ ಭಿನ್ನವಾಗಿದೆ.ಆಧುನಿಕ ಹಾಗೂ ಹಳ್ಳಿ ಮನೆ ಅಡುಗೆ ಮನೆಯ ಲುಕ್ ಅನ್ನು ಒಟ್ಟು ಮಾಡಿ ಭಿನ್ನವಾದ ವಿನ್ಯಾಸದೊಂದಿಗೆ ಅಡುಗೆ ಮನೆ ನಿರ್ಮಿಸಲಾಗಿದೆ. ಹೆಚ್ಚು ಹಸಿರು ಬಣ್ಣ ಬಳಸಿರುವುದಕ್ಕೆ ಕಾರಣ ಇರಲೇ ಬೇಕು. ಅಡುಗೆ ಮನೆಯಲ್ಲಿ ಶೋ ನ ಜಾಹೀರಾತುದಾರರ ಚಿತ್ರಗಳನ್ನು ಸಹ ಅಂಟಿಸಲಾಗಿದೆ.

Advertisement

ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆ ಇರಲಿದೆ. ಕೊರೊನಾ ಕಾರಣಕ್ಕೆ ಹಲವು ಭಿನ್ನತೆಗಳು ಬಿಗ್‌ಬಾಸ್ ಮನೆಯಲ್ಲಿ ಕಾಣಲು ಸಿಗುತ್ತವೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್ ಫೂಲ್ ಇರುವುದಿಲ್ಲ ಎನ್ನಲಾಗುತ್ತಿದೆ. ಜೊತೆಗೆ ಯಾರೆಲ್ಲ ದೊಡ್ಮನೆಗೆ ಪ್ರವೇಶ ಮಾಡಬಹುದು ಎಂಬ ಕುತೂಹಲ, ಚರ್ಚೆ ದೊಡ್ಡ ಮಟ್ಟದಲ್ಲಿದೆ. ಈಗಾಗಲೇ ದೊರೆತಿರುವ ಮಾಹಿತಿಯ ಪ್ರಕಾರ, ಈಗಾಗಲೇ ಎಲ್ಲ ಸ್ಪರ್ಧಿಗಳು ಹಾಗೂ ಶೋ ಸಿಬ್ಬಂದಿಗಳು ಬೆಂಗಳೂರಿನ ನಾನಾ ಪಂಚತಾರಾ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ.ಈಗಾಗಲೇ ಅವರುಗಳಿಗೆ ಎರಡನೇ ಬಾರಿ ಕೊರೊನಾ ಪರೀಕ್ಷೆ ನಡೆದಿದೆ.

Advertisement

ಕೊರೊನಾ ಪ್ರೋಟೋಕಾಲ್ ಪ್ರಕಾರ, ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮುನ್ನ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡುವುದು ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಸ್ಪರ್ಧಿಗಳು ಯಾರು, ಯಾರೆಲ್ಲಾ ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತಾರೆ. ಯಾವ ಸ್ಥಳದಲ್ಲಿ ಕ್ವಾರಂಟೈನ್ ಆಗಿದ್ದಾರೆ ಎನ್ನುವುದು ಇಲ್ಲಿಯವರೆಗೆ ಹೊರಬಿದ್ದಿಲ್ಲ. ಆದರೆ, ಕ್ವಾರಂಟೈನ್‌ನಲ್ಲಿ ಇರುವವರು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಇದೇ ಕೆಲವರ ಇರುವಿಕೆ ಮತ್ತು ಬಿಗ್‌ ಬಾಸ್‌ ಮನೆಗೆ ಕಾಲಿಡುವ ಸಂಭಾವ್ಯತೆಗಳ ಕುರಿತಾದ ರಹಸ್ಯ ಹೊರಬೀಳಲು ಕಾರಣವಾಗಿದೆ.

ವಾಹಿನಿ ಕಡೆಯಿಂದ ಸ್ಪರ್ಧಿಗಳಿಗೆ ನೀಡಲಾಗಿರುವ ‘ಬಿಗ್ ಬಾಸ್ ಕಿಟ್’ ಬಿಗ್‌ಬಾಸ್‌ ಮನೆಗೆ ಹೋಗಲಿರುವ ಸ್ಪರ್ಧಿಯೊಬ್ಬರ ಕುರಿತು ಮಾಹಿತಿ ನೀಡಿದ್ದು,ಟಿಕ್ ಟಾಕ್ ಧನುಶ್ರೀ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಇದರ ಜೊತೆಗೆ ಅನೇಕರ ಹೆಸರು ಕೇಳಿ ಬಂದಿದ್ದು,ಬ್ರಹ್ಮಗಂಟು ಖ್ಯಾತಿಯ ನಟಿ ಗೀತಾ ಭಾರತಿ, ಸುಕೃತಾ, ತರಂಗ ವಿಶ್ವ, ರವಿಶಂಕರ್ ಗೌಡ, ಕಾಮಿಡಿ ಕಿಲಾಡಿ ನಯನಾ, ಸುಮಂತ್ ಸೈಲೇಂದ್ರ, ನಟಿ ಅನುಷಾ ಸೇರಿದಂತೆ ಸಾಕಷ್ಟು ಕಲಾವಿದರ ಹೆಸರು ಕೇಳಿಬರುತ್ತಿದೆ. ಆದರೆ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಫೆಬ್ರವರಿ 28ರಂದುತೆರೆಬೀಳಲಿದೆ.

ವಾರದ ಕತೆ ಕಿಚ್ಚನ ಜೊತೆಯೂ ಪ್ರತೀ ಸಾರಿಗಿಂತ ಈ ವರ್ಷ ತುಸು ವಿಭಿನ್ನವಾಗಿರುವ ಕಾರಣಕ್ಷಣಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಇನ್ನು ಸಾಮಾಜಿಕ ಅಂತರ ಸಂದೇಶ ಸಾರಲು ಸ್ಪರ್ಧಿಗಳ ಬೆಡ್‌ಗಳು, ಚೇರ್‌ಗಳು ದೂರ-ದೂರ ಇರಲಿವೆ. ಸ್ಯಾನಿಟೈಸರ್ ರೂಮ್ ಇನ್ನಿತರ ಅಧಿಕೃತ ಸೌಲಭ್ಯಗಳು ಸ್ಪರ್ಧಿಗಳಿಗೆ ಇರುವ ಸಾಧ್ಯತೆ ಇದೆ. ಬಿಗ್‌ಬಾಸ್ ಮನೆಯ ವಿನ್ಯಾಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಬಣ್ಣ ನಳನಳಿಸುತ್ತಿದ್ದನ್ನು ಗಮನಿಸಬಹುದಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಯಾವೆಲ್ಲಾ ಸ್ಪರ್ಧಿಗಳು ಭಾಗವಹಿಸಿಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೆ ಇದೆ.

Advertisement