ಮಹಾಭಾರತ ಧಾರವಾಹಿಯ ಕೊನೆಯ ಎಪಿಸೋಡ್ ಚಿತ್ರೀಕರಣ ಮಾಡುವಾಗ ಏನಾಯಿತು ಗೊತ್ತಾ ?

in ಮನರಂಜನೆ 58 views

ಲಾಕ್ ಡೌನ್ ದೇಶಾದ್ಯಂತ ಇರುವುದರಿಂದ ಎಲ್ಲಾ ಟಿವಿ ಧಾರಾವಾಹಿಗಳು ಮತ್ತುಸಿನಿಮಾ ಶೂಟಿಂಗ್’ಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಟಿವಿಯಲ್ಲಿ ಹಳೆದ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡಲಾಗುತ್ತಿದೆ. ದೂರದರ್ಶನವು ತೊಂಬತ್ತರ ದಶಕದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಾದ ‘ರಾಮಾಯಣ’ ‘ಮಹಾಭಾರತ’ ಸೇರಿದಂತೆ ಅನೇಕ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಇವೆಲ್ಲಾ ಹಳೆ ಕಾರ್ಯಕ್ರಮಗಳಾದರೂ ಜನರು ಇಂದಿಗೂ ಆ ಧಾರವಾಹಿಗಳನ್ನು ನೋಡಲು ಇಷ್ಟಪಡುತ್ತಾರೆ, ಪ್ರೀತಿಸುತ್ತಾರೆ. ಅಂದಹಾಗೆ ದೂರದರ್ಶನದಲ್ಲಿ ಹಳೆಯ ಧಾರಾವಾಹಿಗಳು ಪ್ರಸಾರವಾದಾಗಿನಿಂದ, ಇದಕ್ಕೆ ಸಂಬಂಧಿಸಿದ ಅನೇಕ ಹಳೆಯ ವಿಡಿಯೋಗಳು, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈಗ ಮಹಾಭಾರತದ ಬಗ್ಗೆ ಒಂದು ಸುದ್ದಿ ಕೇಳಿಬರುತ್ತಿದೆ. ಬಿ.ಆರ್.ಚೋಪ್ರಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಕೊನೆಯ ದಿನ ಚಿತ್ರೀಕರಣ ನಡೆಸುವಾಗ ಎಲ್ಲಾ ಪಾತ್ರಧಾರಿಗಳು ಅಳುತ್ತಿದ್ದರು ಎಂದು ಹೇಳಲಾಗುತ್ತಿದೆ.

Advertisement

 

Advertisement

 

Advertisement

Advertisement

ಹೌದು, ಪರದೆಯ ಮೇಲೆ ಪರಸ್ಪರ ವಿರೋಧಿಸುತ್ತಿದ್ದಂತೆ ಕಾಣುತ್ತಿದ್ದ ಕೌರವರು-ಪಾಂಡವರು ಶೂಟಿಂಗ್ ಮುಗಿದ ನಂತರ ಪರಸ್ಪರ ತಬ್ಬಿಕೊಂಡು ಅಳಲು ಪ್ರಾರಂಭಿಸಿದ್ದರಂತೆ. ಇದರ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಯುಧಿಷ್ಠಿರ, ಕೃಷ್ಣ, ದುರ್ಯೋಧನ, ದ್ರೌಪದಿ, ಧೃತರಾಷ್ಟ್ರ, ಅರ್ಜುನ ಮತ್ತು ಇತರ ಅನೇಕ ನಟರು ಚಿತ್ರೀಕರಣದ ನಂತರ ಒಬ್ಬರನ್ನೊಬ್ಬರು ಪರಸ್ಪರ ತಬ್ಬಿಕೊಂಡು ಅಳುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.
ವಿಡಿಯೋವನ್ನು ನೋಡುವಾಗ ಇವರು ಪರದೆಯ ಮೇಲೆ ಪರಸ್ಪರರ ಶತ್ರುಗಳಂತೆಯೇ ಇದ್ದರೂ, ನಿಜ ಜೀವನದಲ್ಲಿ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿರುವುದು ಕಂಡುಬರುತ್ತದೆ. ಹಾಗೆಯೇ ಪ್ರತಿಯೊಬ್ಬರಲ್ಲೂ ವಿಶೇಷ ಬಂಧವಿರುವುದು ಕಾಣುತ್ತದೆ.

 

ಬಿ.ಆರ್.ಚೋಪ್ರಾ ಮಹಾಭಾರತದ ಪ್ರತಿಯೊಂದು ದೃಶ್ಯವನ್ನು ಅತ್ಯದ್ಭುತವಾಗಿ ತೋರಿಸಿದ್ದಾರೆ. ಪ್ರತಿಯೊಂದು ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. ಜನರು ಈ ಧಾರವಾಹಿಯನ್ನು ನೋಡಿದಾಗ ಮಹಾಭಾರತ ಸಂಭವಿಸಿದಾಗ ಇದೇ ರೀತಿ ನಡೆದಿರಬೇಕು ಎಂದು ಅರಿತುಕೊಂಡಿದ್ದಾರೆ. ಅಭಿಮಾನಿಗಳು ಸಹ ಮಹಾಭಾರತದ ಈ ಪಾತ್ರಧಾರಿಗಳದ್ದು ಕೇವಲ ನಟನೆ ಎಂದು ಭಾವಿಸುವುದಿಲ್ಲ. ಹಾಗೆಯೇ ಪ್ರತಿಯೊಬ್ಬರು ವಿಶೇಷವಾದ ರೀತಿಯಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಲಾಗುತ್ತದೆ. ದ್ರೌಪದಿಯ ದೃಶ್ಯವನ್ನು ಚಿತ್ರೀಕರಿಸುವಾಗ ಆ ಪಾತ್ರ ಮಾಡುತ್ತಿದ್ದ ರೂಪಾ ಗಂಗೂಲಿ ಪಾತ್ರದಲ್ಲಿ ಸಂಪೂರ್ಣವಾಗಿ ಮುಳುಗಿದ್ದರಂತೆ. ಆ ಪಾತ್ರವನ್ನು ನಿರ್ವಹಿಸುವಾಗ ಅವರು ನಿಜವಾಗಿ ಅತ್ತಿದ್ದರು ಎಂದು ಹೇಳಲಾಗುತ್ತದೆ.

Advertisement
Share this on...