ಚಿಕನ್, ಮೀನು ತಿಂದ ನಂತರ ಹಾಲು ಕುಡಿದರೆ ಏನಾಗುತ್ತದೆ ಗೊತ್ತೇ?

in ಕನ್ನಡ ಆರೋಗ್ಯ 126 views

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಶ್ವದ ಎಲ್ಲೆಡೆ ನಾನ್ ವೆಜ್ ಸೇವಿಸುವ ಜನರು ಹೆಚ್ಚಾಗಿ ಇದ್ದಾರೆ. ಅಂದಹಾಗೆ ಮಾಂಸಹಾರ ಸೇವಿಸಿದೆ ಜನ ಬಹುಶಃ ಇರಬಹುದೇನೋ, ಆದರೆ ಹಾಲು ಕುಡಿಯದೆ ಜನರು ಇರುವುದಿಲ್ಲ. ಈ ಮಾತನ್ನು ನಾವು ಬಹಳಷ್ಟು ಜನರ ಬಾಯಲ್ಲಿ ಕೇಳಿರುತ್ತೇವೆ. ಆದರೆ ಈಗ ನಾವು ಹೇಳುತ್ತಿರುವ ವಿಷಯ ರುಚಿಕರವಾದ ಚಿಕನ್ ಊಟವನ್ನು ಮಾಡಿ, ಕೊನೆಯಲ್ಲಿ ಹಾಲು ಸೇವಿಸುವ ಮಂದಿಗೆ ಹೆಚ್ಚು ಅನ್ವಯವಾಗುತ್ತದೆ. ಏಕೆಂದರೆ ಚಿಕನ್ ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

Advertisement

 

Advertisement

Advertisement

 

Advertisement

ಹೌದು, ಆಯುರ್ವೇದದ ಪ್ರಕಾರ ಮಾಂಸ ಮತ್ತು ಹಾಲು ಅಥವಾ ಹಾಲಿನ ಉತ್ಪನ್ನಗಳು ಒಂದಕ್ಕೊಂದು ಭಿನ್ನವಾದ ಆಹಾರವಾಗಿದೆ. ಇವು ಹೊಟ್ಟೆಗೆ ಒಟ್ಟಿಗೆ ಸೇರಿದಾಗ ವಿಷಕಾರಿ ವಸ್ತುಗಳನ್ನು ಸೃಷ್ಟಿಸುತ್ತವೆ. ಇದು ಹೊಟ್ಟೆಯ ತೊಂದರೆಗಳಿಗೆ ಮಾತ್ರವಲ್ಲದೆ, ಚರ್ಮದ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಮಾಂಸ ಮತ್ತು ಹಾಲು ದೇಹಕ್ಕೆ ಆರೋಗ್ಯಕರ ಎಂದು ಹೇಳಲಾಗುತ್ತದೆಯಾದರೂ, ಅವುಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕ. ಮೊಸರನ್ನು ಚಿಕನ್ನಲ್ಲಿ ನೆನಸಿಟ್ಟಿ ಸೇವಿಸುವುದು ಸಹ ಒಳ್ಳೆಯದಲ್ಲ ಎನ್ನಲಾಗಿದೆ. ನೀವು ಈ ರೀತಿಯಾಗಿ ಆಹಾರವನ್ನು ಸೇವಿಸಿದರೆ, ನಿಮಗೆ ಚರ್ಮದ ಕಾಯಿಲೆಗಳು ಬರಬಹುದು ಎನ್ನುತ್ತಾರೆ ತಜ್ಞರು.

 

 

ಅಷ್ಟೇ ಅಲ್ಲ, ಸೋರಿಯಾಸಿಸ್, ಲ್ಯುಕೋಡರ್ಮಾದಂತಹ ಚರ್ಮದ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಮಾಂಸ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಮಾಂಸಾಹಾರವನ್ನು ಸೇವಿಸಿದ ನಂತರ ಕನಿಷ್ಠ 3 ಗಂಟೆಗಳ ಕಾಲ ಹಾಲನ್ನು ಸೇವಿಸಬಾರದು.

 

 

ಹಾಗೆಯೇ ಸಮುದ್ರಾಹಾರ ಪ್ರಿಯರು ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬಾರದು. ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸಿದರೆ ಅದು ಚರ್ಮದ ತೇಪೆಗಳು ಅಥವಾ ಚರ್ಮದ ಮೇಲೆ ವರ್ಣದ್ರವ್ಯಕ್ಕೆ ಕಾರಣವಾಗಬಹುದು ಎಂಬುದು ಸಾಮಾನ್ಯ ನಂಬಿಕೆ. ವೈಜ್ಞಾನಿಕವಾಗಿ ಹೇಳುವುದಾದರೆ, ಮೀನು ಸೇವಿಸಿದ ನಂತರ ಹಾಲು ಕುಡಿಯುವುದು ಹಾನಿಕಾರಕ ಅಥವಾ ಚರ್ಮದ ವರ್ಣದ್ರವ್ಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

 

 

ಆದರೆ ಚರ್ಮರೋಗ ತಜ್ಞ ಡಾ. ದೀಪಾಲಿ ಭಾರದ್ವಾಜ್ ಅವರ ಪ್ರಕಾರ ಮೀನು ಮತ್ತು ಹಾಲು ಎಂದಿಗೂ ಒಟ್ಟಿಗೆ ಸೇವಿಸಿಬಾರದು. ಇದು ಭಯಾನಕ ಅಲರ್ಜಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಮೀನು ಸೇವನೆಯ ನಂತರ ಹಾಲನ್ನು ಕುಡಿಯುವುದು ಒಳ್ಳೆಯದಲ್ಲ ಎಂದು ಅವರು ಹೇಳುತ್ತಾರೆ.

Advertisement
Share this on...