ಕುಜ ದೋಷ ಇರುವವರಿಗೆ ಮದುವೆಗೆ ಯಾವ ಜಾತಕ ಸೂಕ್ತ ಗೊತ್ತಾ ?

in ಜ್ಯೋತಿಷ್ಯ 2,412 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಏಕಾದಶಿ ತಿಥಿ, ಮಖಾ ನಕ್ಷತ್ರ,  ಶುಭ ಯೋಗ, ಬಾಲವ ಕರಣ ಅಕ್ಟೋಬರ್ 13 ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲವನ್ನು ಉಲ್ಲೇಖ ಮಾಡಿಲ್ಲ.

Advertisement

ಸಾಮಾನ್ಯವಾಗಿ ಜನರು ಕುಜ ದೋಷ ಇರುವವರಿಗೆ ಕುಜದೋಷ ಇರುವವರನ್ನೇ ಮದುವೆ ಮಾಡಬೇಕು ಎಂಬುದಾಗಿ ತಪ್ಪು ತಿಳಿದುಕೊಂಡಿರುತ್ತಾರೆ. ಆದರೆ ಕುಜ ದೋಷ ಇರುವವರಿಗೆ ಕುಜದೋಷ ಇರುವವರನ್ನು ಮದುವೆ ಮಾಡಿ ಮಾಡಬಾರದು. ಕುಜ ಎಂದರೆ ಉನ್ಮಾದ ಕ್ರೋಧ, ಇಬ್ಬರಿಗೂ ದೋಷವಿದ್ದರೆ,  ಇಬ್ಬರಿಗೂ ಬೆಂಕಿ ಕಾರಕ,   ಕ್ರೋಧ ಉನ್ಮಾದ ವಿರುತ್ತದೆ ಅಲ್ಲಿ ಹೊಂದಾಣಿಕೆ ಇರುವುದಿಲ್ಲ ಜಗಳ ಉಂಟಾಗುತ್ತದೆ ಹೀಗಾಗಿ ಕುಜ ದೋಷ ಇರುವವರಿಗೆ ಕುಜದೋಷ ಇರುವವರನ್ನು ಮದುವೆ ಮಾಡಬಾರದು. ಕುಜ ದೋಷ ಇರುವ ವ್ಯಕ್ತಿಗಳ ವ್ಯಕ್ತಿತ್ವ ನೇರ ನುಡಿಯವರು ಅದನ್ನು ಬೇರೆಯವರು ಸಹಿಸಿಕೊಳ್ಳುವುದಿಲ್ಲ. ಕುಜ ದೋಷ ಇರುವ ವ್ಯಕ್ತಿಗೆ ಸಂಗಾತಿಯಾಗಿ ಬರುವವರ ಜಾತಕದಲ್ಲಿ ಶನಿ ತಟಸ್ಥವಾಗಿರಬೇಕು ಇಲ್ಲವೇ  ಶುಕ್ರ ಪ್ರಭಾವ ಬಲವಾಗಿರಬೇಕು. ಒಬ್ಬರು ಕೋಪ ಉನ್ಮಾದದಲ್ಲಿ ಇರುವಾಗ ಮತ್ತೊಬ್ಬರು ವಿನಯದಿಂದ ತಾಳ್ಮೆಯಿಂದ ಇದ್ದಾಗ ಮಾತ್ರ ಸಂಸಾರ ಚೆನ್ನಾಗಿ ಇರುತ್ತದೆ. ಆದ್ದರಿಂದ ಮದುವೆ ನಿಶ್ಚಯ ಮಾಡುವಾಗ ಜಾತಕಗಳನ್ನು ಪರಾಮರ್ಶೆ ಮಾಡಿ ಆ ನಂತರ ನಿಶ್ಚಯ ಮಾಡಿಕೊಳ್ಳಿ. ಯಾರ ಜಾತಕಕ್ಕೆ ಯಾರ ಜಾತಕ ಸೂಕ್ತ ಮತ್ತು ಅವರ ಮುಂದಿನ ಜೀವನ ಹೇಗಿರುತ್ತದೆ, ಎನ್ನುವುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ಕೇತು ಸಾರದಲ್ಲಿ ಇರುವುದರಿಂದ ಸ್ವಲ್ಪ ತಳಮಳ ವಿರುತ್ತದೆ ಆದರೂ ಆ ಕೇತು ಬುಧನ ಸಾರದಲ್ಲಿದ್ದಾನೆ ಆದ್ದರಿಂದ ಬುದ್ಧಿ ಮತ್ತು ಮೇದಸ್ಸನ್ನು ಉಪಯೋಗಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ತುಂಬಾ ತೀಕ್ಷ್ಣ ಮತಿಗಳಾಗಿರುತ್ತೀರಿ. ಚೆನ್ನಾಗಿದೆ ತಾಯಿಯ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.

ವೃಷಭ ರಾಶಿ : ಹತ್ತಿರದಿಂದ ನೋವು,  ಮಕ್ಕಳ ವಿಚಾರಕ್ಕೆ ತುಂಬ ತಲೆ ಕೆಡಿಸಿಕೊಳ್ಳುತ್ತೀರಿ, ಗುರು ಅಷ್ಟಮದಲ್ಲಿ ಇದ್ದರೂ ಕುಟುಂಬ ಸ್ಥಾನವನ್ನು ನೋಡುತ್ತಿರುವುದರಿಂದ ಒಳ್ಳೆಯದೇ ಆಗುತ್ತದೆ ಚಿಂತಿಸಬೇಡಿ.

ಮಿಥುನ ರಾಶಿ : ಗಂಡನ ಸೋದರ ಸೋದರಿ ಅಥವಾ ಹೆಂಡತಿಯ ಸೋದರ ಸೋದರಿಯ ವರ್ಗದಲ್ಲಿ ಒಂದು ಸಣ್ಣ ನೋವಿದೆ ಅವರ ಕಡೆ ಸ್ವಲ್ಪ ಗಮನ ಕೊಡಿ.

ಕರ್ಕಾಟಕ ರಾಶಿ : ವ್ಯವಹಾರ ವಿಚಾರದಲ್ಲಿ ಸ್ವಲ್ಪ ವಿಘ್ನಗಳು ಉಂಟಾಗುತ್ತವೆ. ವಿನಾಯಕನ ಪೂಜೆಯನ್ನು ಮಾಡಿ ಆ ನಂತರ ಮುಂದಕ್ಕೆ ಹೆಜ್ಜೆ ಇಡಿ ಎಲ್ಲ ಒಳ್ಳೆಯದಾಗುತ್ತದೆ.

ಸಿಂಹ ರಾಶಿ : ಸ್ವಲ್ಪ ಖರ್ಚು ವೆಚ್ಚವಾಗುತ್ತದೆ ಮುಂದಕ್ಕೆ ಹೆಜ್ಜೆ ಇಡಲು ಆತಂಕ, ಆರೋಗ್ಯದ ಛಾಯೆ, ಚಂದ್ರ ಸುಖಕಾರಕ, ಚಂದ್ರ  ಕೇತು ಸಾರದಲ್ಲಿ ಇರುವುದರಿಂದ ಸ್ವಲ್ಪ ಆತಂಕ ದುರ್ಗಾ ದೇವಿಗೆ ದೀಪ ಹಚ್ಚಿ ಪೂಜೆ ಮಾಡಿ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ : ಬಂದಂತಹ ಲಾಭವೆಲ್ಲ ಯಾವುದೋ ಒಂದು ರೀತಿಯಲ್ಲಿ ಖರ್ಚಾಗುತ್ತದೆ ಅದನ್ನು ಬಿಟ್ಟರೆ ಯಾವುದೇ ರೀತಿಯ ತೊಂದರೆ ಇಲ್ಲ, ನಿಭಾಯಿಸಿಕೊಂಡು ಹೋಗುತ್ತೀರ.

ತುಲಾ ರಾಶಿ : ಉದ್ಯೋಗದ ನಿಮಿತ್ತ ಒಳ್ಳೆಯ ಸುದ್ದಿಯೊಂದನ್ನು ಕೇಳುತ್ತೀರಾ ಧರ್ಮಮಾರ್ಗದಲ್ಲಿದ್ದರೆ ಮಾತ್ರ.

ವೃಶ್ಚಿಕ ರಾಶಿ : ಎಲ್ಲ ಸಂದರ್ಭದಲ್ಲೂ ಧರ್ಮದ ಮಾರ್ಗದಲ್ಲಿ ನಡೆದುಕೊಳ್ಳಲು ಆಗುವುದಿಲ್ಲ ಅಧರ್ಮಗಳ ಜೊತೆಯಲ್ಲಿ ಅಧರ್ಮದ ರೀತಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ. ಹೇಗೆ ವಜ್ರವನ್ನು ವಜ್ರದಿಂದಲೇ ಕತ್ತರಿಸುತ್ತಾರೆ ಹಾಗೆ. ಇದರಿಂದ ಗೆಲುವು ನಿಮ್ಮದೇ.

ಧನಸ್ಸು ರಾಶಿ : ನಿಮಗೆ ಬರಬೇಕಾದ ಗೌರವ ಸನ್ಮಾನಗಳ ವಿಚಾರದಲ್ಲಿ ಸ್ವಲ್ಪ ತೊಳಲಾಟವಾಗುತ್ತದೆ. ಕೆಲವೊಂದು  ಸಮಯ ನಮಗೆ ಸಿಗಬೇಕಾದುದ್ದು ಸಿಗುವುದಿಲ್ಲ.  ಹಾಗಾಗಿ ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳಿ ಜೊತೆಗೆ ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನ ಮಾಡಿ ಪೂಜೆ ಮಾಡಿಸಿ ಒಳ್ಳೆಯದಾಗುತ್ತದೆ.

ಮಕರ ರಾಶಿ : ದೂರದ ಪ್ರಯಾಣದಿಂದ ಸ್ವಲ್ಪ ಬಳಲಿಕೆ ಯಾಗುತ್ತದೆ ಆದರೂ ಪಾಯಸವನ್ನು ಸವಿಯುವಂತಹ ಅನುಕೂಲತೆ ಯಾಗುತ್ತದೆ.

ಕುಂಭ ರಾಶಿ : ಹತ್ತಿರದಿಂದ ಸಂಗಾತಿ ವಿಚಾರದಲ್ಲಿ,  ಸ್ನೇಹಿತರಿಂದ ಪಾಲುಗಾರಿಕೆಯ ವಿಚಾರದಲ್ಲಿ ತೊಳಲಾಟ ನೋಡುವಂತಹ ಸಂದರ್ಭವಿರುತ್ತದೆ.

ಮೀನ ರಾಶಿ : ಆಗದ ಕೆಲಸ ಕಾರ್ಯಗಳಿಂದ ಅದ್ಭುತವಾದ ಪ್ರಗತಿಯನ್ನು ಪಡೆಯುತ್ತೀರಿ. ಆದರೆ ಅದು ನಿಜವಾ ಎಂದು ಆತಂಕ ಬೇಸರ ಆಶ್ಚರ್ಯದಿಂದ ದಿನವನ್ನು ಕಳೆಯುತ್ತೀರಾ. ತೊಂದರೆ ಏನೂ ಇಲ್ಲ ಒಳ್ಳೆಯದಾಗುತ್ತದೆ.

All Rights reserved Namma  Kannada Entertainment.

Advertisement
Share this on...