ಎಂತಹ ಮಾಸ್ಕ್‌ ಧರಿಸಿದರೆ ವೈರಸ್‌ ಹರಡುವುದನ್ನು ನಿಯಂತ್ರಿಸಬಹುದು ಗೊತ್ತೇ ? ಇಲ್ಲಿದೆ ಸಂಪೂರ್ಣ ಮಾಹಿತಿ

in ಕನ್ನಡ ಆರೋಗ್ಯ 123 views

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದುಎಲ್ಲರೂ ಸಾಮಾನ್ಯವಾಗಿ ಈ ಮಾಸಕ್‌ ಹಾಗೂ ಸ್ಯಾನಿಟೈಸರ್‌ ಮೊರೆ ಹೋಗಿದ್ದಾರೆ. ಯಾವ ಮೆಡಿಕಲ್‌ ಶಾಪ್‌ ಗೆ ತೆರಳಿ ವಿಚಾರಿಸದರೂ ಅಂಗಡಿಯ ಮುಂದೆ ನೋ ಸ್ಟಾಕ್‌ ಎಂಬ ಬೋರ್ಡ್‌ ಕಾಣಸಿಗುತ್ತದೆ. ಅಲ್ಲದೇ ಪೊಲೀಸರು ಸಹ ಮಾಸ್ಕ್‌ ಧರಿಸಿ ಹೊರಗೆ ಬರಬೇಕು ಎಂದು ತಾಕೀತು ಸಹ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ಯಾವ ಮಾಸ್ಕ್‌ ಬಳಸಿದ್ರೆ ಹೆಚ್ಚು ಉಪಯುಕ್ತ ಎಂಬುದು ಮಾತ್ರ ತಿಳಿಯುತ್ತಿಲ್ಲ. ಅದಕ್ಕೆ ಇಲ್ಲಿದೆ ಉತ್ತರ.

Advertisement

 

Advertisement

Advertisement

 

Advertisement

ಸಾಮಾನ್ಯವಾಗಿ ಎನ್‌95- ಅತಿ ಹೆಚ್ಚು ಸುರಕ್ಷಿತ ಎನ್ನುತ್ತಾರೆ ವೈದ್ಯರು. ಇದರಲ್ಲಿ ವೈರಸ್‌-95%, ಬ್ಯಾಕ್ಟೀರಿಯಾ-100%, ಧೂಳು-100% , ಪರಾಗ ಕಣ-100% ತಡೆಯುವುದನ್ನು ನಿಲ್ಲಿಸುವ ಕಾರಣದಿಂದಾಗಿ ಇದು ನಮ್ಮನ್ನು ಸುರಕ್ಷಿತವಾಗಿಡುತ್ತದೆ. ಇನ್ನು ವೈದ್ಯರು ಹೆಚ್ಚು ಬಳಸುವ ಸ ರ್ಜಿಕಲ್‌ ಮಾಸ್ಕ್‌ ನಲ್ಲಿಯೂ ಸಹ ವೈರಸ್‌-95% , ಬ್ಯಾಕ್ಟೀರಿಯಾ-80%, ಧೂಳು-80%, ಪರಾಗ ರೇಣು -80% ತಡೆಯಬಲ್ಲಿ ಸ್ಥಾನದಲ್ಲಿದ್ದು ನಮಗೆ ಬೇಕಾದ ರಕ್ಷಣೆ ಯನ್ನುಒದಗಿಸುವ ವಿಚಾರದಲ್ಲಿ ಇದು ದ್ವಿತೀಯ ಪಟ್ಟಿಯಲ್ಲಿದೆ.

 

 

ಇನ್ನು ಎಫ್‌ಎಫ್‌ಪಿ1 ಮಾಸ್ಕ್‌ ಎಂಬ ಹೆಸರಿ ಮುಖಗವಸು ವೈರಸ್‌-95% , ಬ್ಯಾಕ್ಟೀರಿಯಾ-80%, ಧೂಳು-80%, ಪರಾಗ ರೇಣು-80%: ಇದ್ದು, ಇದು ನಮ್ಮ ಅಪಾಯವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತದೆ. ಮತ್ತೊಂದು ಆ್ಯಕ್ಟಿವ್‌ ಕಾರ್ಬನ್‌, ವಾಸನೆ ನಿಯಂತ್ರಣಕ್ಕೆ ಮಾಸ್ಕ್‌ ತಯಾರಾಗಿದ್ದು ಇದರಲ್ಲಿ ವೈರಸ್‌-10%, ಬ್ಯಾಕ್ಟೀರಿಯಾ-50%, ಧೂಳು-50%, ಪರಾಗ ಕಣ-50% ನಿಯಂತ್ರಿಸುತ್ತದೆ. ಅಂದರೆ ಇದನ್ನು ನಮ್ಮ ಅಕ್ಕ- ಪಕ್ಕದ ವಾಸನೆ ನಿಯಂತ್ರಣಕ್ಕೆ ಅತಿ ಸೂಕ್ತ, ಮಾರಕ ವೈರಸ್‌ಗಳಿಂದ ರಕ್ಷಣೆ ಸಿಗುವುದು ಕಷ್ಟವೇ ಸರಿ.

 

 

ಕೊರೊನಾ ಬಂದಾಗಿನಿಂದ ಎದುರಾಗುತ್ತಿರುವ ಸ್ಪಾಂಜ್‌ ಮಾಸ್ಕ್‌ ಬಳಕೆಯನ್ನು ಫ್ಯಾಷನ್‌ಗಾಗಿ ಬಳಸಬಹುದಷ್ಟೇ. ಅದರೆ ವೈರಸ್‌-00%, ಬ್ಯಾಕ್ಟೀರಿಯಾ-05%, ಧೂಳು-05%, ಪರಾಗ ರೇಣು-05% ತಡೆಹಿಡಿಯಬಹುದು. ಬಟ್ಟೆಯ ಮಾಸ್ಕ್‌ ಅನ್ನು ಸಹ ಕೇವಲ ಡೈಯಿಂಗ್‌ ಕೆಲಸಕ್ಕೆ ಬಳಸಬಹುದು. ವೈರಸ್‌-0%, ಬ್ಯಾಕ್ಟೀರಿಯಾ-50%, ಧೂಳು-50%, ಪರಾಗ ರೇಣು-50% : ಇದು ಧೂಳೊರೆಸುವ ಕೆಲಸಕ್ಕೆ ಮಾತ್ರ ಬಳಸಬಹುದು. ಇದರಿಂದ ಕೊರೊನಾ ವೈರಸ್‌ ನಿಯಂತ್ರಣ ಅಸಾಧ್ಯ ಎಂದರೆ ತಪ್ಪಿಲ್ಲ.

 

 

ಅಂದರೆ ನಾವು ಮೆಡಿಕಲ್‌ ಶಾಪ್‌ ಗೆ ತೆರಳಿದಾಗ ಮೊದಲು ಸರ್ಜಿಕಲ್‌ ಮಾಸ್ಕ್‌ಗಳು ನೀಡಿ ಎಂದು ಕೇಳಬಹುದು ಇದು 3 ಲೇಯರ್‌ ಹೊಂದಿರುತ್ತವೆ. ಈ ಮಾಸ್ಕ್‌ ಗಳ ಜೊತೆಯಲ್ಲಿ ಟಿಸಿ ಅಪ್ರೂವಲ್‌ ನಂಬರ್‌, ಮಾಡೆಲ್‌ ನಂಬರ್‌, ಲಾಟ್‌ ನಂಬರ್‌, NಐOಖಏ ಎಂಬ ಹೆಸರು ಅಥವಾ ಲೋಗೋ ಮುಂತಾದವು ಇರುತ್ತವೆ. ಅಂತಹವನ್ನೇ ಆಯ್ಕೆ ಮಾಡಿ

Advertisement
Share this on...