ನೂತನ ಸರ್ಕಾರಿ ಸಿಬ್ಬಂದಿ ನಿಯಮಾವಳಿಗೆ ವಿರೋಧ ವ್ಯಕ್ತವಾಗ್ತಾ ಇರೋದ್ಯಾಕೆ ಗೊತ್ತಾ..?

in ಕನ್ನಡ ಮಾಹಿತಿ 219 views

ರಾಜ್ಯ ಸರ್ಕಾರ ಸರ್ಕಾರಿ ಸಿಬ್ಬಂದಿಗೆ ಅಳವಡಿಸಿರುವ ನೂತನ ಸಿಬ್ಬಂದಿ ನಿಯಮಾವಳಿಗೆ ರಾಜ್ಯ ಸರ್ಕಾರಿ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಕರಡು ಪ್ರತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಇದಕ್ಕೆ ನೌಕರರು ತೀವ್ರ ಅಸಮಾಧಾನ ಹೊರಹಾಕಿದ್ದು, ಈ ರೀತಿಯ ನಿಯಮಾವಳಿಗಳ ಮೂಲಕ ಸರ್ಕಾರ ನಮ್ಮ ಮೇಲೆ ಗುಲಾಮಗಿರಿಯನ್ನು ಹೇರಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಎಲ್ಲ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಕಾರ್ಯಕ್ಷಮತೆ ಹೆಚ್ಚಳ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ಜನಸ್ನೇಹಿ ಕರ್ತವ್ಯ ನಿರ್ವಹಣೆ, ಆಡಳಿತದಲ್ಲಿ ಪಾರದರ್ಶಕತೆ, ಸೇವಾ ದಕ್ಷತೆ ಹೆಚ್ಚಿಸಲು ನಿಯಮಾವಳಿಗಳ ಕರಡು ಪ್ರಕಟಿಸಲಾಗಿದೆ. ಆದರೆ ಸರ್ಕಾರ ಕೆಲವು ಬದಲಾವಣೆ ಮಾಡಿರುವುದು ನೌಕರರ ಆಕ್ಷೇಪಕ್ಕೆ ಕಾರಣವಾಗಿದೆ. ಸಲಹೆ ಮತ್ತು ಆಕ್ಷೇಪಣೆಗಳನ್ನು 15 ದಿನಗಳೊಳಗೆ ಸಲ್ಲಿಸಲು ಆಡಳಿತ ಸುಧಾರಣಾ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ನಿಗದಿತ ಗಡುವು ಮುಗಿದ ಬಳಿಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಸೇವಾ ನಿಯಮಗಳು ಜಾರಿಗೆ ಬರಲಿವೆ ಎಂದು ರಾಜ್ಯ ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.

Advertisement

 

Advertisement

Advertisement

ಇನ್ನು ನೂತನ ಸರ್ಕಾರಿ ನೌಕರರ ನಡತೆ ಕರಡು ನಿಯಮಾವಳಿಯ ಮುಖ್ಯಾಂಶಗಳು ಹೀಗಿವೆ ನೋಡಿ.
• ಬಡ್ಡಿ, ಸಟ್ಟಾ ವ್ಯವಹಾರಕ್ಕೆ ಆಸ್ಪದವಿಲ್ಲ.
• ಪ್ರತಿ ವರ್ಷ ಕುಟುಂಬ ಸದಸ್ಯರ ಸಹಿತ ಚರ-ಸ್ಥಿರಾಸ್ತಿ ವಿವರ ಸಲ್ಲಿಕೆ.
• ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವುದು ನಿಷಿದ್ಧ
• ಕರ್ತವ್ಯಕ್ಕೆ ಗೈರಾಗಿ ಮುಷ್ಕರ ಹೂಡುವಂತಿಲ್ಲ.
ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವಂತಿಲ್ಲ.
• ಕರ್ನಾಟಕ, ಇತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೀತಿ, ಕ್ರಮಗಳ ಕುರಿತು ಟೀಕೆ- ಟಿಪ್ಪಣೆ ಸಲ್ಲದು.
• ನಿಯಮಿಸಿದ ಪ್ರಾಧಿಕಾರಿಯಿಂದ ಪೂರ್ವಾನುಮತಿಯಿಲ್ಲದೆ ಖಾಸಗಿ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ.

Advertisement

• ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಮಾಹಿತಿ ಕೊಡಬಹುದು. ಆದರೆ, ನಿರ್ದಿಷ್ಟ ಸೂಚನೆಗಳಿಲ್ಲದ ಹೊರತು ಕಚೇರಿ ದಸ್ತಾವೇಜು, ರಹಸ್ಯ ದಾಖಲೆಗಳನ್ನು ನೀಡುವಂತಿಲ್ಲ.
• ವೈದ್ಯರು, ಖಾಸಗಿಯಾಗಿ ನರ್ಸಿಂಗ್ ಹೋಮ್ ಆಸ್ಪತ್ರೆ, ಪ್ರಯೋಗಾಲಯ, ಔಷಧಾಲಯ ನಡೆಸುವಂತಿಲ್ಲ.
• ಮೇಲಧಿಕಾರಿಯು ತನ್ನ ಅಧೀನ ಅಧಿಕಾರಿ/ಸಿಬ್ಬಂದಿಗೆ ಯಾವುದೆ ಪ್ರಸ್ತಾವನೆಯನ್ನು ಒಂದು ನಿರ್ದಿಷ್ಟ ಮಾದರಿಯಲ್ಲಿ ಮಂಡಿಸಲು ಆಜ್ಞಾಪಿಸುವಂತಿಲ್ಲ.
• ದೇಶದ ಸಾರ್ವಭೌಮತ್ವ, ಅಖಂಡತೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಂಘ-ಸಂಸ್ಥೆಗಳಲ್ಲಿ ಸೇರಿಕೊಳ್ಳಬಾರದು.
• ಕುಟುಂಬ ಸದಸ್ಯನಿಗೆ ಖಾಸಗಿ ಕಂಪನಿ ಉದ್ಯೋಗ ಕೊಡಿಸಲು ಪ್ರಭಾವಬೀರುವಂತಿಲ್ಲ.
• ಪತಿ/ ಪತ್ನಿ ಜೀವಂತವಿರುವಾಗ 2ನೇ ಮದುವೆಯಾಗಕೂಡದು.
• ದಿನಗೂಲಿ, ತಾತ್ಕಾಲಿಕ, ಗುತ್ತಿಗೆ, ಸಿಬ್ಬಂದಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ.

 

ಸದ್ಯ ರಾಜ್ಯ ಸರ್ಕಾರ ಪ್ರಕಟಿಸಿರುವ ಈ ಕರಡು ಪ್ರತಿಗೆ ರಾಜ್ಯ ಸರ್ಕಾರಿ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ನಮ್ಮ ಜೊತೆಗೆ ನಮ್ಮ ಕುಟುಂಬ ಸದಸ್ಯರನ್ನು ನಿಯಂತ್ರಿಸಲು ಹೊರಟಿದೆ. ನಮ್ಮ ವೈಯಕ್ತಿಕ ವಿಷಯಗಳು ಸರ್ಕಾರಿ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಸರ್ಕಾರ ಗ್ರಹಿಸಬೇಕು. ಕರಡು ಪ್ರತಿಯಲ್ಲಿನ ಕೆಲವು ನಿಯಮಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸರ್ಕಾರಿ ನೌಕರರಿಂದ ವ್ಯಕ್ತವಾಗಿದೆ.

Advertisement
Share this on...