ಈ ಸ್ಟಾರ್ ನಟ-ನಟಿಯರು ಶಾಪಿಂಗ್’ಗೆ ಹೋದಾಗ ಏನನ್ನು ಖರೀದಿಸುತ್ತಾರೆ ಗೊತ್ತಾ ?

in ಮನರಂಜನೆ 38 views

ಅನೇಕ ನಟ-ನಟಿಯರು ತಮ್ಮ ಜೀವನಶೈಲಿ ಮತ್ತು ಹವ್ಯಾಸಗಳಿಂದಾಗಿ ಬಹಳ ಪ್ರಸಿದ್ಧರಾಗಿದ್ದಾರೆ. ಅವರ ಅಭಿಮಾನಿಗಳಿಗೂ ಸಹ ಅವರು ತಿನ್ನುವುದರಿಂದ ಹಿಡಿದು ಅವರು ಉಪಯೋಗಿಸುವ ಬಟ್ಟೆಗಳ ಬ್ರಾಂಡ್ ತನಕ ಒಂದು ಕಣ್ಣು ಇಟ್ಟಿರುತ್ತಾರೆ. ಈ ಹಿಂದೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲೈಫ್ ಸ್ಟೈಲ್’ಗಳ ಬಗ್ಗೆ ಹೇಳಿದ್ದೆವು. ವಿರಾಟ್ ಕೊಹ್ಲಿ ಬಳಿ ಅಮೂಲ್ಯವಾದ ಕೈಗಡಿಯಾರಗಳ ಉತ್ತಮ ಸಂಗ್ರಹವಿದ್ದು, ಹೆಚ್ಚು ಕಡಿಮೆ ವಿರಾಟ್ ಕೊಹ್ಲಿ ಬಳಿ 70-70 ಲಕ್ಷ ರೂ ಬೆಲೆ ಬಾಳುವ ವಾಚುಗಳ ಸಂಗ್ರಹವಿದೆ. ಹಾಗೆಯೇ ಅನುಷ್ಕಾ ಬಳಿ ಅನೇಕ ಐಷಾರಾಮಿ ಬ್ರಾಂಡ್ ಹ್ಯಾಂಡ್ ಬ್ಯಾಗ್’ಗಳಿವೆ. ಅಂತೆಯೇ ಇಂದು ಕೂಡ ನಾವು ಬಾಲಿವುಡ್’ನ ಸ್ಟಾರ್ ನಟ-ನಟಿಯರು ಶಾಪಿಂಗ್ ಮಾಡುವ ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ ಓದಿ…

Advertisement

 

Advertisement


ಸಲ್ಮಾನ್ ಖಾನ್
ಬಾಲಿವುಡ್’ನ ಭಾಯ್ ಜಾನ್ ಸಲ್ಮಾನ್ ಖಾನ್ ಶಾಪಿಂಗ್ಗೆ ಹೋದಾಗಲೆಲ್ಲಾ ಸೋಪ್ ಖರೀದಿಸುತ್ತಾರೆ. ಹೌದು, ಸಲ್ಮಾನ್’ಗೆ ಸೋಪ್ ಅಂದರೆ ತುಂಬಾ ಇಷ್ಟ. ಅದಕ್ಕೆ ಅವರು ಬೇರೆ ದೇಶಕ್ಕೆ ಹೋದಾಗಲೆಲ್ಲಾ ಅಲ್ಲಿಂದ ಸೋಪ್ ಖರೀದಿಸುತ್ತಾರೆ.

Advertisement

 

Advertisement


ಪ್ರಿಯಾಂಕಾ ಚೋಪ್ರಾ
ಬಾಲಿವುಡ್’ನ ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಪಾದರಕ್ಷೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಹೌದು, ಪ್ರಿಯಾಂಕಾ ಬಳಿ 400 ಕ್ಕೂ ಹೆಚ್ಚು ಪಾದರಕ್ಷೆಗಳಿದ್ದು, ಅವುಗಳಲ್ಲಿ ಕೆಲವುಗಳನ್ನುಈಗಾಗಲೇ ಪ್ರದರ್ಶಿಸಿದ್ದಾರೆ.

 


ಕರೀನಾ ಕಪೂರ್
ಕರೀನಾ ಸೈಫ್ ಮೇಲೆ ಕೋಪಗೊಂಡಾಗಲೆಲ್ಲಾ, ಸೈಫ್ ಅಲಿ ಖಾನ್ ಕರೀನಾಗೆ ಒಂದು ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಇದರಿಂದ ಕರೀನಾ ಬೇಗ ರಾಜಿಯಾಗುತ್ತಾರೆ. ಕರೀನಾ ಬಳಿ ಪ್ರಸಿದ್ಧ ಬ್ರಾಂಡ್’ನ ಸುಮಾರು 200 ದುಬಾರಿ ಹ್ಯಾಂಡ್ ಬ್ಯಾಗ್’ಗಳಿವೆ.

 


ಶಾರೂಖ್ ಖಾನ್
ಬಾಲಿವುಡ್’ನ ಕಿಂಗ್ ಖಾನ್ ಶಾರೂಖ್’ಗೆ ಜೀನ್ಸ್ ಬಗ್ಗೆ ತುಂಬಾ ಒಲವು. ಯಾವುದೇ ಕಾರ್ಯಕ್ರಮಗಳಿರಲಿ, ಅಲ್ಲಿ ಶಾರೂಖ್ ಜೀನ್ಸ್’ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂದಹಾಗೆ ಶಾರೂಖ್ 1500 ಕ್ಕೂ ಹೆಚ್ಚು ಜೀನ್ಸ್ ಸಂಗ್ರಹವನ್ನು ಹೊಂದಿದ್ದಾರೆ. ಶಾರೂಖ್ ಅವರು ಜೀನ್ಸ್ ಮೇಲೆ ಬಿಳಿ ಬಣ್ಣದ ಶರ್ಟ್ ಅಥವಾ ಟೀ ಶರ್ಟ್ ಧರಿಸಲು ಇಷ್ಟಪಡುತ್ತಾರೆ.

 


ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರಿಗೆ ಶೂಗಳ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಅಕ್ಷಯ್ ಕುಮಾರ್ ಅವರು ಶೂಟಿಂಗ್ಗೆ ಹೋದಲ್ಲೆಲ್ಲಾ ಶೂ ಶಾಪಿಂಗ್ ಮಾಡುತ್ತಾರೆ. ಅಕ್ಕಿಗೆ ಶೂಟಿಂಗ್’ನಿಂದ ಬಿಡುವು ಸಿಕ್ಕಾಗ, ತಾವೇ ಶೂಗಳನ್ನು ಖರೀದಿಸಲು ಹೊರಡುತ್ತಾರೆ.

Advertisement
Share this on...