ಚಿಕ್ಕ ವಯಸ್ಸಿಗೆ ಕೋಟ್ಯಾಂತರ ರೂ. ಆಸ್ತಿ ಹೊಂದಿರುವ ಆಲಿಯಾ ಬಳಿ ಏನೇನಿದೆ ಗೊತ್ತೇ?

in ಮನರಂಜನೆ 100 views

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಅಪ್ರತಿಮ ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಶ್ರೀ ಮಹೇಶ್ ಭಟ್ ಅವರ ಮಗಳು. ನಟಿಯಾಗಿ ಮಾತ್ರವಲ್ಲದೆ, ಗಾಯಕಿ, ರೂಪದರ್ಶಿಯಾಗಿಯೂ ಕೆಲಸ ಮಾಡಿರುವ ಆಲಿಯಾ 1993 ರಂದು ಮಾರ್ಚ್ ತಿಂಗಳಿನಲ್ಲಿ ಜನಿಸಿದರು. ಸದ್ಯ ಭಾರತದ ಮುಂಬೈ ನಗರದಲ್ಲಿ ವಾಸಿಸುತ್ತಿರುವ ಆಲಿಯಾ, ತಮ್ಮ ನಟನಾ ವೃತ್ತಿಯನ್ನು 2012 ರಲ್ಲಿ ಪ್ರಾರಂಭಿಸಿದರು.

Advertisement

 

Advertisement

Advertisement

2012 ರಲ್ಲಿ ಬಿಡುಗಡೆಯಾದ ಆಲಿಯಾ ಮೊದಲ ಚಿತ್ರ ಸ್ಟುಡೆಂಟ್ ಆಫ್ ದಿ ಇಯರ್ ಆಲಿಯಾಗೆ ಹೆಚ್ಚು ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟಿತು. ಅಂದಹಾಗೆ ಆಲಿಯಾ ಭಟ್ ಅವರ ಬಳಿ ಇರುವ ಪ್ರಸ್ತುತ ಆಸ್ತಿ 71 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಆಲಿಯಾ ಒಂದು ಚಿತ್ರಕ್ಕೆ 9-10 ಕೋಟಿಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಸಂಪತ್ತಿನ ಮೂಲ ಸಿನಿಮಾ, ಹಾಡುಗಾರಿಕೆ, ಬ್ರಾಂಡ್ ರಾಯಭಾರಿ, ಮಾಡೆಲಿಂಗ್ ಇತ್ಯಾದಿ ಎಂದು ಪರಿಗಣಿಸಲಾಗಿದೆ.

Advertisement

 


ಆಲಿಯಾ ಭಟ್ ಜುಹುನಲ್ಲಿರುವ ಸಿಲ್ವರ್ ಬೀಚ್ ಅಪಾರ್ಟ್ಮೆಂಟ್’ನಲ್ಲಿರುವ ನಂಬರ್ 205ನಲ್ಲಿ ವಾಸಿಸುತ್ತಿದ್ದಾರೆ. ಅವರು ಹೊಸ ಮನೆಯನ್ನು ಸಹ ಹೊಂದಿದ್ದು, ಇದನ್ನು ಪ್ರಸಿದ್ಧ ಗೃಹ ವಿನ್ಯಾಸಕ ರಿಚಾ ಬಹ್ಲ್ ನಿರ್ಮಿಸಿದ್ದಾರೆ . ಆಲಿಯಾ ಈಗ ತನ್ನ ಸಹೋದರಿ ಶಾಹೀನ್ ಭಟ್ ಜೊತೆ ವಾಸಿಸುತ್ತಿದ್ದಾರೆ. ಆಲಿಯಾ ಭಟ್ ಅವರ ಬಳಿ ಇರುವ ಕಾರುಗಳು ಆಡಿ ಕ್ಯೂ 7, ಆಡಿ ಕ್ಯೂ 5, ಆಡಿ ಎ 6, ಬಿಎಂಡಬ್ಲ್ಯು 7 ಸಿರೀಸ್, ಲ್ಯಾಂಡ್ ರೋವರ್, ರೇಂಜ್ ರೋವರ್ ಇತ್ಯಾದಿಗಳು.

 


ಆಲಿಯಾ 1999 ರ ಥ್ರಿಲ್ಲರ್ ಚಿತ್ರ ‘ಸಂಘರ್ಷ’ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ ನಂತರ, 2012 ರಲ್ಲಿ ಕರಣ್ ಜೋಹರ್ ರವರ ‘ಸ್ಟೂಡೆಂಟ್ ಆಫ್ ದಿ ಇಯರ್’ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಹೈವೇ ಎಂಬ ಸಿನಿಮಾದಲ್ಲಿ ಅಪಹರಣಕ್ಕೊಳಗಾದವರ ಪಾತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಫಿಲ್ಮ್ಫೇರ್ ಕ್ರಿಟಿಕ್ಸ್ ಪ್ರಶಸ್ತಿ ಮತ್ತು ಉಡ್ತಾ ಪಂಜಾಬ್ ಸಿನಿಮಾದಲ್ಲಿ ಬಿಹಾರಿ ವಲಸಿಯಾಗಿ ನಟಿಸಿದ್ದ ಪಾತ್ರಕ್ಕಾಗಿ ಎರಡು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಗಲ್ಲಿ ಬಾಯ್ ಎಂಬ ಸಿನಿಮಾದಿಂದ ಕೂಡಾ ಆಲಿಯಾ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಆಲಿಯಾ ಆರು ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ . ಜೊತೆಗೆ ಸ್ಟೇಜ್ ಶೋ ಮತ್ತು ಕಾನ್ಸರ್ಟ್ಗಳಲ್ಲಿ ಭಾಗವಹಿಸಿದ್ದಾರೆ.

Advertisement
Share this on...