ವಯಸ್ಸಿನಲ್ಲಿ ತನಗಿಂತ ದೊಡ್ಡವರನ್ನು ಮದುವೆಯಾದ ಟಾಪ್ ನಟರು ಯಾರು ಗೊತ್ತಾ..?

in ಮನರಂಜನೆ/ಸಿನಿಮಾ 230 views

ಸಾಮಾನ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಮದುವೆಯ ವಿಧಾನದಲ್ಲಿ ಹುಡುಗಿ ಹುಡುಗನಿಗಿಂತ ವಯಸ್ಸಿನಲ್ಲಿ ಚಿಕ್ಕವಳಾಗಿರಬೇಕು ಅನ್ನುವುದು ಬಹು ಮುಖ್ಯವಾದ ವಿಚಾರ. ಅದರಲ್ಲೂ ಅರೇಂಜ್ಡ್ ಮ್ಯಾರೇಜ್ ಆದರೆ ಇದರ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಆದರೆ ಕಾಲ ಬದಲಾದಂತೆ ನಗರ ಪ್ರದೇಶಗಳಲ್ಲಿ ಹಾಗೂ ಲವ್ ಮಾಡಿ ಮದುವೆ ಆದರೆ ವಯಸ್ಸಿನ ಅಂತರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾದರೆ ಚಿತ್ರರಂಗದಲ್ಲಿ ತನಗಿಂತ ವಯಸ್ಸಿನಲ್ಲಿ ಹಿರಿಯ ಹುಡುಗಿಯನ್ನು ಯಾವೆಲ್ಲ ಸ್ಟಾರ್ ನಟರು ಮದುವೆಯಾಗಿದ್ದಾರೆ ಗೊತ್ತಾ..? ನಟ ಪ್ರಸನ್ನ ತನ್ನ ವಿಭಿನ್ನ ನಟನೆಯ ಮೂಲಕ ಖ್ಯಾತಿ ಪಡೆದಿರುವ ನಟ ಪ್ರಸನ್ನ. ಇವರು ಕನ್ನಡ ಹಾಗೂ ದಕ್ಷಿಣ ಭಾರತದಲ್ಲಿ ಮಿಂಚಿದ ನಟಿ ಸ್ನೇಹ ಅವರನ್ನು ಪ್ರೀತಿಸಿ ಮದುವೆಯಾದರು. ಇಲ್ಲಿ ಗಮನಿಸಬೇಕಾದ ವಿಷಯ ಅಂದರೆ ನಟ ಪ್ರಸನ್ನ ಅವರು ನಟಿ ಸ್ನೇಹ ಅವರಿಗಿಂತ ಒಂದು ವರ್ಷ ಚಿಕ್ಕವರು.

Advertisement

Advertisement

ಅಭಿಷೇಕ್ ಬಚ್ಚನ್ ಬಾಲಿವುಡ್ ನ ಖ್ಯಾತ ನಟ. ಅಭಿಷೇಕ್ ಬಚ್ಚನ್ ಹಾಗೂ ಮಂಗಳೂರಿನ ಬೆಡಗಿ ಐಶ್ವರ್ಯ ರೈ ಅವರ ಮದುವೆ 2007 ರಲ್ಲಿ ಅದ್ದೂರಿಯಾಗಿ ನಡೆಯಿತು. ಅಭಿಷೇಕ್ ಬಚ್ಚನ್ ನಟಿ ಐಶ್ವರ್ಯ ರೈ ಅವರಿಗಿಂತ ಎರಡು ವರ್ಷ ಚಿಕ್ಕವರು.
ಕನ್ನಡದ ಖ್ಯಾತ ನಟ ರಘು ಮುಖರ್ಜಿ ಅವರು ಕೂಡ ಒಬ್ಬರು. ಆದಾಗಲೇ ಒಂದು ಮದುವೆಯಾಗಿ ವಿಚ್ಚೇದನ ಪಡೆದಿದ್ದ ಕನ್ನಡದ ಖ್ಯಾತ ನಟಿ ಅನು ಪ್ರಭಾಕರ್ ಅವರನ್ನು ರಘು ಮುಖರ್ಜಿ ಮದುವೆಯಾಗಿದ್ದಾರೆ. ಇದು ಇಬ್ಬರಿಗೂ ಎರಡನೇ ಮದುವೆ. ಅಷ್ಟೇ ಅಲ್ಲದೆ ರಘು ಮುಖರ್ಜಿ ಅನು ಪ್ರಭಾಕರ್ ಅವರಿಗಿಂತ ಒಂದು ವರ್ಷ ಚಿಕ್ಕವರು.

Advertisement

ನಟ ಕೃಷ್ಣ. ತಮಿಳಿನ ಸ್ಟಾರ್ ನಟರಾದ ಕೃಷ್ಣ ಅವರು ಕನ್ನಡದ ಖ್ಯಾತ ನಟಿ ಛಾಯಾ ಸಿಂಗ್ ಅವರನ್ನು ಮದುವೆಯಾಗಿದ್ದು ಸಂತೋಷದ ಜೀವನ ನಡೆಸುತ್ತಿದ್ದಾರೆ.
ನಟ ಕೃಷ್ಣ ಅವರು ಛಾಯಾ ಸಿಂಗ್ ಅವರಿಗಿಂತ ಎರಡುವರೆ ವರ್ಷ ಚಿಕ್ಕವರು ಅನ್ನುವುದು ಇಲ್ಲಿ ವಿಶೇಷ.

Advertisement


ನಟ ಧನುಷ್ ತಮಿಳಿನ ಟಾಪ್ ನಟರಲ್ಲಿ ಸ್ಥಾನ ಪಡೆದುಕೊಂಡಿರುವ ಧನುಷ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೊದಲನೇ ಮಗಳಾದ ಐಶ್ವರ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಐಶ್ವರ್ಯ ಅವರಿಗಿಂತ ಧನುಷ್ ಸುಮಾರು ಒಂದುವರೆ ವರ್ಷ ಚಿಕ್ಕವರು ಅನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ.

ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಇಬ್ಬರು ಚಿತ್ರರಂಗದಲ್ಲಿ ಇದ್ದು ಪ್ರೀತಿಸಿ ಮದುವೆಯಾದ ಸ್ಟಾರ್ ಕಪಲ್ ಇವರು. ಅಷ್ಟೇ ಅಲ್ಲದೆ ಅನ್ಯೋನ್ಯ ಜೀವನ ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ನಟ ಯಶ್ ನಟಿ ರಾಧಿಕಾ ಪಂಡಿತ್ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು ಅನ್ನುವುದು.

ತೆಲುಗಿನ ಸೂಪರ್ ಸ್ಟಾರ್ ನಟ ಮಹೇಶ್ ಬಾಬು. ಕನ್ನಡದ ಚೋರ ಚಿತ್ತ ಚೋರ ಸಿನಿಮಾದಲ್ಲಿ ನಟಿಸಿದ ನಟಿ ನಮ್ರತ ಅವರನ್ನು ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಅವರು ಪ್ರೀತಿಸಿ ಮದುವೆಯಾಗಿ ಸುಮಧುರ ಜೀವನ ನಡೆಸುತ್ತಿದ್ದಾರೆ. ಮಹೇಶ್ ಬಾಬು ಅವರು ನಮ್ರತಾ ಅವರಿಗಿಂತ ಎರಡು ವರ್ಷ ಚಿಕ್ಕವರು ಅನ್ನುವುದು ಇಲ್ಲಿ ವಿಶೇಷ. ಪ್ರೀತಿಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ವಯಸ್ಸಿನ ಅಂತರವಿದ್ದರೂ ಅನ್ಯೂನ್ಯ ಜೀವನ ನಡೆಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಈ ಸ್ಟಾರ್ ನಟರು.

Advertisement
Share this on...