ಗೂಗಲ್’ನಲ್ಲಿಅತೀ ಹೆಚ್ಚು ಸರ್ಚ್ ಆದ ನಟಿಮಣಿ ಇವರೇ ನೋಡಿ…!

in ಮನರಂಜನೆ 36 views

ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಗಳ ಚಿತ್ರರಂಗದಲ್ಲಿ ನಾಯಕ-ನಾಯಕಿಯರಿಗೇನೂ ಕೊರತೆಯಿಲ್ಲ. ಪ್ರತಿಯೊಬ್ಬ ನಟ-ನಟಿಯರು ತಮ್ಮದೇ ಆದ ಅಭಿಮಾನಿ ಬಳಗವನ್ನು, ಅನುಯಾಯಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ಅವರನ್ನು ಎಷ್ಟು ಇಷ್ಟಪಡುತ್ತಾರೆ, ಫಾಲೋ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿ ಸೋಶಿಯಲ್ ಮೀಡಿಯಾ ನೋಡಿದರೆ ನಿಮಗೆ ತಿಳಿಯುತ್ತದೆ. ಇದೀಗ ಗೂಗಲ್’ನಲ್ಲಿ ಹೆಚ್ಚು ಸರ್ಚ್ ಆದ ನಟ-ನಟಿಯರ ಪಟ್ಟಿ ಬಿಡುಗಡೆಯಾಗಿದ್ದು, ಇಲ್ಲಿ ಯಾರ ಹೆಸರು ಎಷ್ಟು ಬಾರಿ ಸರ್ಚ್ ಆಗಿದೆ ನೋಡೋಣ ಬನ್ನಿ. ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ನಟ-ನಟಿಯರು ಇದ್ದರೂ ಅಚ್ಚರಿ ಪಡಬೇಕಿಲ್ಲ.

Advertisement

 

Advertisement

Advertisement

ಪ್ರಸ್ತುತ ಪ್ರಿಯಾಂಕಾ ಚೋಪ್ರಾ ಅವರನ್ನು ಅಂತರ್ಜಾಲದಲ್ಲಿ ಹೆಚ್ಚು ಹುಡುಕಲಾಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದುಬಂದಿದೆ. SEMrush ಅಧ್ಯಯನದ ವರದಿಯ ಪ್ರಕಾರ, ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಅಂತರ್ಜಾಲದಲ್ಲಿ ಹೆಚ್ಚು ಹುಡುಕಲಾಗಿದೆ. ಹೌದು, ಪ್ರಿಯಾಂಕಾ ಚೋಪ್ರಾ ಅವರನ್ನು ಗೂಗಲ್ನಲ್ಲಿ 39 ಲಕ್ಷ ಬಾರಿ ಹುಡುಕಲಾಗಿದೆ. ಅಲ್ಲಿಗೆ ಈ ಪಟ್ಟಿಯಲ್ಲಿ ಪ್ರಿಯಾಂಕಾ ಟಾಪ್ ಸ್ಥಾನದಲ್ಲಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

Advertisement

 


ಪ್ರಿಯಾಂಕಾ ಚೋಪ್ರಾ ಬಿಟ್ಟರೆ ಎರಡನೇ ಸ್ಥಾನದಲ್ಲಿರುವವರು ನಟಿ ಸನ್ನಿ ಲಿಯೋನ್. ಮತ್ತೊಮ್ಮೆ ಸನ್ನಿ ತನ್ನ ಬೋಲ್ಡ್ ಲುಕ್’ನಿಂದ ಎಲ್ಲರ ಮನ ಗೆದ್ದಿದ್ದಾರೆ. ವರದಿಯ ಪ್ರಕಾರ ಸನ್ನಿ ಅವರನ್ನು 31 ಲಕ್ಷ ಬಾರಿ ಹುಡುಕಲಾಗಿದೆ. ನಂತರ ಕತ್ರಿನಾ ಕೈಫ್ ಮೂರನೇ ಸ್ಥಾನದಲ್ಲಿದ್ದಾರೆ. ವಾಸ್ತವವಾಗಿ, ಆಕೆಯನ್ನು ಅಂತರ್ಜಾಲದಲ್ಲಿ 19 ಲಕ್ಷ ಬಾರಿ ಹುಡುಕಲಾಗಿದೆ.

 


ಇನ್ನು ಹಿರೋಗಳ ಪೈಕಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಹೆಚ್ಚು ಹುಡುಕಲಾಗಿದೆ. ವರದಿಯ ಪ್ರಕಾರ ಸಲ್ಮಾನ್ ಅವರನ್ನು 21 ಲಕ್ಷ ಬಾರಿ ಹುಡುಕಲಾಗಿದೆ. ಅಲ್ಲಿಗೆ ನಟರ ಪಟ್ಟಿಯಲ್ಲಿ ಸಲ್ಮಾನ್ ಅವರಿಗೆ ಪ್ರಥಮ ಸ್ಥಾನ ಸಿಕ್ಕಿದೆ. ಹಾಗೆಯೇ ಎರಡನೇ ಸ್ಥಾನದಲ್ಲಿರುವವರು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ವಿರಾಟ್ ಅವರನ್ನು ಅಂತರ್ಜಾಲದಲ್ಲಿ 20 ಲಕ್ಷ ಬಾರಿ ಹುಡುಕಲಾಗಿದೆ. ಹೃತಿಕ್ ರೋಷನ್ ಮೂರನೇ ಸ್ಥಾನದಲ್ಲಿದ್ದು, ಅವರನ್ನು ಅಂತರ್ಜಾಲದಲ್ಲಿ 1.3 ಮಿಲಿಯನ್ ಬಾರಿ ಹುಡುಕಲಾಗಿದೆ ಎಂದು SEMrush ಅಧ್ಯಯನದ ವರದಿ ತಿಳಿಸಿದೆ.

Advertisement
Share this on...