ತನ್ನಿಂದ ಯಾರಿಗೂ ಕೊರೊನಾ ಹರಡಬಾರದೆಂದು ಕಾರಿನಲ್ಲೇ ವಾಸಿಸುತ್ತಿರುವ ಡಾಕ್ಟರ್​

in News/ಕನ್ನಡ ಮಾಹಿತಿ 38 views

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಎಷ್ಟೋ ಬೇಜವಾಬ್ದಾರಿ ಜನರಿಂದ ಕೊರೊನಾ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಕಾರಣದಿಂದ ಮತ್ತೆ ಲಾಕ್ ಡೌನ್ ಮುಂದಕ್ಕೆ ಹೋಗುವ ಸಂಭವ ಇದೆ.

Advertisement

 

Advertisement

Advertisement

 

Advertisement

ಆದರೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ನಿಜಕ್ಕೂ ಈ ಸಮುಯದಲ್ಲಿ ದೇವರ ಪ್ರತಿರೂಪ ಎಂದರೆ ತಪ್ಪಾಗುವುದಿಲ್ಲ. ಇದು ಮಾರಾಣಾಂತಿಕ ವೈರಸ್ ಎಂದು ತಿಳಿದರೂ ವೈದ್ಯರು ಹಾಗೂ ಸಿಬ್ಬಂದಿಗಳು ಹಗಲಿರುಳು ರೋಗಿಗಳು ಗುಣಮುಖರಾಗಲೆಂದು ಚಿಕಿತ್ಸೆ ನೀಡುತ್ತಿದ್ದಾರೆ. ಇವರಲ್ಲಿ ಎಷ್ಟೊ ವೈದ್ಯರು ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೆ ಕರ್ತವ್ಯ ನಿಭಾಯಿಸುತ್ತಿದ್ಧಾರೆ. ಕೆಲವು ವೈದ್ಯರು ಮನೆ ಬಳಿ ಹೋಗಿ ತಮ್ಮ ಕುಟುಂಬದವರನ್ನು ನೋಡಿ ಮಾತನಾಡಿಸಿ ಬಂದರೆ, ಎಷ್ಟೊ ವೈದ್ಯರು ಮನೆಗೆ ಹೋಗದೆ ಆಸ್ಪತ್ರೆಯಲ್ಲೇ ಮಲಗುತ್ತಿದ್ಧಾರೆ.

 

 

ಭೋಪಾಲ್​​​​​​​​​​​​​​​​​​​​​​​ನ ಸಚಿನ್ ನಾಯಕ್ ಎಂಬ ವೈದ್ಯರೊಬ್ಬರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬೆಳಗಿನಿಂದ ಸಂಜೆವರೆಗೂ ರೋಗಿಗಳ ನಡುವೆಯೇ ಇರುವ ಇವರು ಕೆಲಸ ಮುಗಿಸಿಕೊಂಡು ಮನೆಗೂ ಹೋಗದೆ, ಆಸ್ಪತ್ರೆಯಲ್ಲೂ ಮಲಗದೆ ತಮ್ಮ ಕಾರಿನಲ್ಲಿ ಜೀವಿಸುತ್ತಿದ್ದಾರೆ. ತನ್ನಿಂದ ಕುಟುಂಬದವರಿಗಾಗಲೀ, ಬೇರೆ ಯಾರಿಗಾಗಲೀ ಕೊರೊನಾ ಹರಡಬಾರದು ಎಂಬ ಉದ್ಧೇಶದಿಂದ ಸಚಿನ್ ಹೀಗೆ ಮಾಡುತ್ತಿದ್ದಾರೆ.

 

 

ಆಸ್ಪತ್ರೆ ಬಳಿಯೇ ಕಾರನ್ನು ಪಾರ್ಕ್ ಮಾಡಿರುವ ಇವರು ಕಾರಿನಲ್ಲಿ ಪ್ರತಿ ದಿನ ತಮಗೆ ಬೇಕಾದ ಅವಶ್ಯಕತೆ ವಸ್ತುಗಳನ್ನು ಇರಿಸಿಕೊಂಡಿದ್ದಾರೆ. ಬಟ್ಟೆ, ಹಾಸಿಗೆ, ಪುಸ್ತಕಗಳು ಇವರ ಕಾರಿನಲ್ಲಿದೆ. ಮನೆಯವರನ್ನು ನೋಡಬೇಕು ಎಂದರೆ ಮನೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರೆ. ಸಚಿನ್ ಕಾರಿನಲ್ಲಿರುವ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಫೋಟೋ ನೋಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ನೆಟಿಜನ್ಸ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ನಿಜವಾದ ಜವಾಬ್ದಾರಿಯುತ ವ್ಯಕ್ತಿ. ಇವರಂತೆಯೇ ನಮ್ಮ ಜನರು ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊರೊನಾವನ್ನು ಆದಷ್ಟು ಬೇಗ ನಿರ್ಮೂಲನೆ ಮಾಡಬಹುದು.

Advertisement
Share this on...