ಫ್ಲಾಪ್ ನಟನಾಗಿದ್ದ ಡಾಲಿ ಧನಂಜಯ ಬೇಡಿಕೆಯ ನಟನಾಗಿದ್ದು ಹೇಗೆ ಗೊತ್ತಾ !

in ಮನರಂಜನೆ/ಸಿನಿಮಾ 520 views

ಒಬ್ಬ ಮನುಷ್ಯನಿಗೆ ತಾಳ್ಮೆ ಎಂಬುದು ಎಷ್ಟರ ಮಟ್ಟಕ್ಕೆ ಮುಖ್ಯ ಎಂಬುದನ್ನು ಡಾಲಿ ಅಲಿಯಾಸ್ ಧನಂಜಯ್ ಅವರನ್ನು ನೋಡಿ ಕಲಿಯಬೇಕು. ಸಿನಿಮಾ ಜೀವನವನ್ನು ಪ್ರಾರಂಭಿಸಿ, ಹತ್ತಾರು ಸಿನಿಮಾ ಮಾಡಿದರೂ  ಒಂದು ಕೂಡ ಹಿಟ್ ಅಗಲಿಲ್ಲ. ಕನ್ನಡದಲ್ಲಿ ಈತ ಫ್ಲಾಪ್  ನಟನಾಗಿಬಿಟ್ಟ. ಅಭಿಮಾನಿ ಬಳಗವೂ ಇಲ್ಲ, ಸಿನಿಮಾಗಳು ಇಲ್ಲ, ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಅವನಿಗೆ ಗೊತ್ತಿದ್ದಿದ್ದು ಮಾತ್ರ ಒಂದಲ್ಲ ಒಂದು ದಿನ ಧನ ಮತ್ತು ಜಯ ಎರಡನ್ನು ಸಂಪಾದಿಸಿಯೇ ತೀರುತ್ತೇನೆ ಎಂದು ಪಟ್ಟು ಹಿಡಿದು, ಕಲಾದೇವಿಯನ್ನು  ಹಿಂಬಾಲಿಸಿ ಇದೀಗ ಡಾಲಿಯಾಗಿ ಬಹು ಬೇಡಿಕೆಯ ನಟನಾಗಿದ್ದಾನೆ. ಒಂದು ಕಾಲದಲ್ಲಿ ಇವನ ಜೊತೆ ಸಿನಿಮಾ ಮಾಡಿದರೆ ಫ್ಲಾಪ್, ಇವನನ್ನು ನೋಡೋಕೆ ಜನ ಬರಲ್ಲ, ಐರನ್ ಲೆಗ್ ಹೀಗೆ ಅವಮಾನಗಳನ್ನು ಅನುಭವಿಸಿತ್ತಾ ಸಿನಿ ಪಯಣವನ್ನು ಸಾಗಿಸುತ್ತಿದ್ದರು! ಅದೇಕೋ ಏನೋ ಸತತವಾಗಿ ಧನಂಜಯ ಅವರ ಸಿನಿಮಾಗಳು ಸೋಲನ್ನೇ ಅನುಭವಿಸುತ್ತಾ ಬಂದವು, ಅವರ ಅಭಿನಯ ಚೆನ್ನಾಗಿಯೇ ಇತ್ತು, ನೀಡಿರುವ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುತ್ತಿದ್ದರು.

Advertisement

Advertisement

ಆದರೂ ಕೂಡ ಅವರ ಸಿನಿಮಾಗಳು ಹೇಳಿಕೊಳ್ಳುವ ಯಶಸ್ಸು ತಂದು ಕೊಡುತ್ತಿರಲಿಲ್ಲ. ಅಲ್ಲದೇ ಗಾಂಧಿ ನಗರದಲ್ಲಿ ಅಷ್ಟಾಗಿ ಗೌರವವನ್ನು ಕೂಡ ಕೊಡುತ್ತಿರಲಿಲ್ಲ, ಯಾವುದೋ ಚಿತ್ರೀಕರಣದಲ್ಲಿ ಒಬ್ಬ ನಿರ್ದೇಶಕರು ಧನಂಜಯ ಅವರನ್ನು ಬೋಳಿಮಗ ಎಂದು ಕರೆದಿದ್ದು ಉಂಟು,  ಮೂರು ವರ್ಷಗಳ ಕಾಲ ಗುರುಪ್ರಸಾದ್ ಅವರ ಗರಡಿಯಲ್ಲಿ ಬೆಳೆದರು, ಅವಾಗ ಮೂಡಿ ಬಂದಿದ್ದೆ ಡೈರೆಕ್ಟರ್ ಸ್ಫೆಶಲ್ ಸಿನಿಮಾ.  ಈ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಾ ಕುಳಿತರು, ನಂತರ ಮೂರು ವರ್ಷಗಳ ಕಾಲ ಹತಾಶೆಗೆ ಒಳಗಾಗಿದ್ದರು, ಅ ಸಮಯದಲ್ಲಿ ಬರೆದು ನಟಿಸಿದ್ದ ಜಯನಗರ ಫೋರ್ತ್ ಬ್ಲಾಕ್ ಎಂಬ ಕಿರು ಸಿನಿಮಾ,  ಈ ಕಥೆಯನ್ನು ಗುರುತಿಸಿದ ರಾಮ ರಾಮರೇ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಅವರು, ಧನಂಜಯ್ ಅವರ ಜಯನಗರ ಫೋರ್ತ್ ಬ್ಲಾಕ್ ಕಿರುಚಿತ್ರವನ್ನು ನಿರ್ದೇಶಿಸುತ್ತಾರೆ ! ಮತ್ತು ಯೂಟ್ಯೂಬ್ ನಲ್ಲಿ ಈ ಚಿತ್ರ ದೊಡ್ಡದೊಂದು ಸಂಚಲನವನ್ನು ಮೂಡಿಸುತ್ತದೆ !

Advertisement

Advertisement

ಸತತ ಸೋಲುಗಳನ್ನು ಕಂಡಿದ್ದ ಧನಂಜಯ ಮತ್ತೆ ಜಿಮ್ ಶುರು ಮಾಡುತ್ತಾರೆ, ನಾನೇ ಏನಾದರು ಬರೆಯಬೇಕು, ನಾನೇ ಏನಾದರು ಮಾಡಬೇಕು ಅಂದುಕೊಂಡು ಕೆಲಸವನ್ನು ಪ್ರಾರಂಭಿಸುತ್ತಾರೆ. ಆ ಸಂಧರ್ಭದಲ್ಲಿ ಬಂದಿದ್ದೆ ಟಗರು ಚಿತ್ರದ ಆಫರ್ ! ಸೂರಿ ಅವರ ಜೊತೆ ಯಾವಾಗಲು ಸಿನಿಮಾ ವಿಚಾರವಾಗಿ ಮಾತು ಕಥೆಗಳನ್ನು ನಡೆಸುತ್ತಿದ್ದರು. ಒಮ್ಮೆ ನಿರ್ದೇಶಕ ಸೂರಿ ಅವರು ಧನಂಜಯ ಅವರಿಗೆ ನೆಗೆಟೀವ್ ರೋಲ್ ಮಾಡುತ್ತೀಯಾ ? ಎಂದು ಕೇಳಿದ್ದಾರೆ. ಒಂದು ಕ್ಷಣ ಯೋಚನೆ ಮಾಡದ ಧನಂಜಯ್, ಮಾಡ್ತೀನಿ ಸಾರ್ ಎಂದಿದ್ದಾರೆ ! ಯಾಕೆಂದರೆ ಎಲ್ಲಾ ಪಾತ್ರಗಳನ್ನು ಪ್ರಯತ್ನಿಸಿದ್ದಾರೆ, ಯಾವುದೂ ವರ್ಕ್‍ಔಟ್ ಆಗಿಲ್ಲಾ.. ಇದರಲ್ಲಿ ಏನಾದರು ಅಗುತ್ತದೆಯೇನೋ ಎಂಬ ನಂಬಿಕೆ ಅವರದ್ದು..

ಸಿನಿಮಾ ಬಿಡುಗಡೆಯಾಗುತ್ತದೆ, ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತದೆ, ತನಗೆ ಗೊತ್ತಿಲ್ಲದೆ, ಧನಂಜಯ ಅವರು ಡಾಲಿಯಾಗಿ ದೊಡ್ಡ ಮಟ್ಟದ ಹೆಸರನ್ನು
ಸಂಪಾದಿಸುತ್ತಾರೆ. ಅವರ ನಿರೀಕ್ಷೆಗೂ ಮೀರಿದ ಹೆಸರನ್ನು ಟಗರು ತಂದು ಕೊಡುತ್ತದೆ. ಟಗರು ಸಿನಿಮಾ ದೊಡ್ಡ ಮಟ್ಟದ ಹೆಸರನ್ನು ತಂದಕೊಡಲು ಡಾಲಿ ಪಾತ್ರವೇ ಮುಖ್ಯ ಕಾರಣ ಎಂದರೇ ತಪ್ಪಾಗಲಾರದು… ! ಸಿನಿಮಾದ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಲಭಿಸುತ್ತದೆ.. ಅಷ್ಟು ಸೋಲನ್ನು ಕಂಡಿದ್ದರೂ, ತಾಳ್ಮೆಯನ್ನು ಕಳೆದುಕೊಳ್ಳದ ಡಾಲಿ ಧನಂಜಯ್ ಇಂದು ಗೆಲುವಿನ ನಗೆ ಬೀರಿ ಉನ್ನತ ಶಿಖರಕ್ಕೇರಿದ್ದಾರೆ !

ಇನ್ನು ಡಾಲಿಯನ್ನು ತಮ್ಮನ್ನಂತೆ ನೋಡುತ್ತಿದ್ದ ಶಿವಣ್ಣ ಅವರು. ಟಗರು ಚಿತ್ರೀಕರಣದ ಸಮಯದಲ್ಲಿ ಯಾವುದಾದರು ಸಮಾರಂಭಕ್ಕೆ ಹೋದರೆ ಡಾಲಿಯನ್ನು ಕರೆದುಕೊಂಡು ಹೋಗುತ್ತಿದ್ದರು. ತನಗೇನಾದರು ಹಾರ ಹಾಕಿದರೆ ಅದನ್ನು ಡಾಲಿಗೂ ಕೂಡ ಹಾಕುತ್ತಿದ್ದರು. ಈಗಲೂ ಕೂಡ ಅದನ್ನು ನೆನೆದು ಕಣ್ಣೀರುಡುತ್ತಾರೆ ಡಾಲಿ ಅಲಿಯಾಸ್ ಧನಂಜಯ್. ಟಗರು ಹಿಟ್ ಬಳಿಕ ಈ ಜೋಡಿ ತೆರೆಯ ಮೇಲೆ ಯಾವಾಗ ಮತ್ತೆ ಅಭಿನಯಿಸುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತ್ತಿದ್ದರು. ಇದೀಗ ಆ ಕನಸು ನನಸಾಗುವ ಸಮಯ ಬಂದಿದ್ದು, ಈ ಬಾರಿ ಶಿವಣ್ಣನಿಗೆ ವಿಲನ್ ಆಗದೆ ಹೀರೊ ಆಗುತ್ತಿದ್ದಾರೆ ಧನಂಜಯ..

ಕಾಲಿವುಡ್‌ನ ನಿರ್ದೇಶಕ ಎಸ್‌.ಡಿ. ವಿಜಯ್ ಮಿಲ್ಟನ್ ಎಂಬುವವರು ನಿರ್ದೇಶಿಸಲಿರುವ ಈ ಹೊಸ ಚಿತ್ರದಲ್ಲಿ ಈ ಇಬ್ಬರು ನಟರು ನಟಿಸುವುದು ಪಕ್ಕಾ ಆಗಿದೆ. ಕಥೆ, ಚಿತ್ರಕಥೆ ಮತ್ತು ಛಾಯಾಗ್ರಹಣದ ಹೊಣೆಯನ್ನು ಮಿಲ್ಟನ್‌ ಅವರೇ ಹೊತ್ತಿದ್ದಾರೆ. ಇನ್ನು ಕೃಷ್ಣ ಸಾರ್ಥಕ್‌ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಅನೂಪ್ ಸಿಳೀನ್ ಸಂಗೀತ ಸಂಯೋಜಿಸಲಿದ್ದಾರೆ. ಅಂದಹಾಗೆ ಈ ಚಿತ್ರ 2021ಕ್ಕೆ ಸೆಟ್ಟೇರಲಿದ್ದು, ಈ ಬಗ್ಗೆ ಧನಂಜಯ್‌ ಅವರು ಸಾಮಾಜಿಕ ಜಾಲತಾಣದಲ್ಲಿ  ಪೋಸ್ಟರ್‌ ಹಂಚಿಕೊಂಡಿದ್ದಾರೆ.

 

Advertisement
Share this on...