ಅಪ್ಪಿ ತಪ್ಪಿಯೂ ಈ ಅಣಬೆಯನ್ನು ಸೇವಿಸಬೇಡಿ!

in ಕನ್ನಡ ಆರೋಗ್ಯ 30 views

ತರಕಾರಿ ಮತ್ತು ಹಣ್ಣುಗಳಲ್ಲಿ ನಾರಿನಂಶ ಹೆಚ್ಚಿರುವುದರಿಂದ ನೀವು ತರಕಾರಿಯನ್ನು ಪ್ರತಿನಿತ್ಯ ಸೇವಿಸಿ… ಎಂದು ವೈದ್ಯರು ನಮಗೆ ಸಲಹೆ ನೀಡುತ್ತಾರೆ ಅಲ್ಲವೇ. ಆದರೆ ಈ ಪ್ರದೇಶದಲ್ಲೊಂದು ಶಿಲೀಂಧ್ರ ಜಾತಿಗೆ ಸೇರಿದ ತರಕಾರಿಯಿದೆ. ಇದನ್ನು ನೀವು ಒಂದು ವೇಳೆ ಬಳಸಿದರೆ ನಿಮ್ಮ ಕಥೆ ಮುಗಿಯಿತು. ಅಂದರೆ ಈ ತರಕಾರಿಯನ್ನು ಸೇವಿಸುವುದು ವಿಷ ಸೇವಿಸುವುದು ಎರಡೂ ಒಂದೇ. ಹಾಗಾಗಿ ಆ ತರಕಾರಿಯ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಮುಂದೆ ಓದಿ…ಇತರರಿಗೂ ತಿಳಿಸಿ…

Advertisement

 

Advertisement

Advertisement

 

Advertisement

ಸಾಮಾನ್ಯವಾಗಿ ನಾವೆಲ್ಲಾ ಅಣಬೆ ರೆಸಿಪಿಯನ್ನು ಮಾಡಿಕೊಂಡು ಸೇವಿಸಿರುತ್ತೇವೆ. ಅಣಬೆ ಒಂದು ರೀತಿಯ ಶಿಲೀಂಧ್ರವಾಗಿದ್ದು, ಮಳೆಗಾಲದ ದಿನಗಳಲ್ಲಿ ಕೊಳೆತ ಸಾವಯವ ಪದಾರ್ಥಗಳ ಮೇಲೆ ಅದು ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ, ದೇಶ ಮತ್ತು ವಿದೇಶಗಳಲ್ಲಿ ಅಣಬೆ ಕೃಷಿ ಮಾಡಲಾಗುತ್ತದೆ. ಆದರೆ ನಾವು ಹಾಗೆ ತಿನ್ನುವ ಎಲ್ಲಾಅಣಬೆಗಳು ಒಳ್ಳೆಯದಲ್ಲ. ಹೆಚ್ಚು ಕಡಿಮೆ 38,000 ಜಾತಿಯ ಅಣಬೆಗಳಿದ್ದು, ಅದರಲ್ಲಿ 200 ಮಾತ್ರ ಔಷಧೀಯ ಗುಣಗಳನ್ನು ಹೊಂದಿವೆ. ಇತ್ತೀಚೆಗೆ ಸಂಶೋಧಕರು ಒಂದು ಜಾತಿಯ ಅಣಬೆ ಅಪಾಯಕಾರಿ ಮತ್ತು ವಿಷಕಾರಿ ಎಂದು ಕಂಡುಹಿಡಿದಿದ್ದಾರೆ.

 

 

ಈ ವಿಷಕಾರಿ ಅಣಬೆ ಕೆಂಪು ಬಣ್ಣದಲ್ಲಿದ್ದು, ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲ, ಏಷ್ಯಾದ ದೇಶಗಳಾದ ಜಪಾನ್ ಮತ್ತು ಕೊರಿಯಾದಲ್ಲಿಯೂ ಕಂಡುಬರುತ್ತದೆ, ಆದರೆ ಕೆಲವು ದಿನಗಳ ಹಿಂದೆ ಈ ಶಿಲೀಂಧ್ರವನ್ನು ಕ್ವೀನ್ಸ್ಲ್ಯಾಂಡ್ನಲ್ಲಿ ಕಂಡುಹಿಡಿಯಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವಿಷಕಾರಿ ಶಿಲೀಂಧ್ರದಿಂದಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಜನರು ಇದನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಖಾದ್ಯವೆಂದು ತಿಳಿದುಕೊಂಡು ಅದನ್ನು ಚಹಾದಲ್ಲಿ ಬೆರೆಸಿ ಕುಡಿದು ನಂತರ ಸಾವನ್ನಪ್ಪಿದ್ದಾರೆ.

 

 

ವಿಜ್ಞಾನಿಗಳ ಪ್ರಕಾರ, ಈ ಅಣಬೆ ಎಷ್ಟು ವಿಷಪೂರಿತವೆಂದರೆ ಅದನ್ನು ತಿನ್ನುವುದರಿಂದ ಅಂಗಾಂಗ ವೈಫಲ್ಯ ಉಂಟಾಗುತ್ತದೆ. ಅಂದರೆ ಮಾನವ ಅಂಗಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಜೊತೆಗೆ ಮೆದುಳಿಗೂ ಹಾನಿಯುಂಟು ಮಾಡುತ್ತದೆ. ಇದನ್ನು ಸ್ಪರ್ಶಿಸುವುದರಿಂದ ದೇಹದಲ್ಲಿ ಊತ ಉಂಟಾಗುತ್ತದೆ. ಪೊಡೊಸ್ಟ್ರೋಮಾ ಕಾರ್ನು-ಡಮಾ ಎಂಬ ಹೆಸರಿನ ಈ ವಿಷಕಾರಿ ಶಿಲೀಂಧ್ರವನ್ನು ಚೀನಾದಲ್ಲಿ ಮೊದಲ ಬಾರಿಗೆ 1895 ರಲ್ಲಿ ಕಂಡುಹಿಡಿಯಲಾಯಿತು. ಇತ್ತೀಚಿನ ವರದಿಗಳ ಪ್ರಕಾರ, ಈ ಶಿಲೀಂಧ್ರವನ್ನು ಇಂಡೋನೇಷ್ಯಾ ಮತ್ತು ನ್ಯೂ ಪಪುವಾ ಗಿನಿಯಲ್ಲೂ ಗಮನಿಸಲಾಗಿದೆ.

Advertisement
Share this on...