ಹಾಲಿದ್ದರೆ ಸಾಕು ಸುಲಭವಾಗಿ ಸಾಫ್ಟ್ ದೂದ್ ಪೇಡ ರೆಡಿ ಮಾಡ್ಬಹುದು !

in ಕನ್ನಡ ಮಾಹಿತಿ 58 views

ದೂದ್ ಪೇಡ ವನ್ನು  ಮನೆಯಲ್ಲಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು  ಇಲ್ಲಿ ತಿಳಿದುಕೊಳ್ಳೋಣ. ದೂದ್ ಪೇಡ ಎಂದಾಕ್ಷಣ ಅದಕ್ಕೆ ಬೇಕಾಗುವ ಬಹು ಮುಖ್ಯವಾದ ವಸ್ತು ಎಂದರೆ ಹಾಲು. ಇದಕ್ಕೆ ಗಟ್ಟಿಯಾದ ಶುಭಂ ಹಾಲನ್ನು ತೆಗೆದುಕೊಳ್ಳಬೇಕು. ಒಂದು ಲೀಟರ್ ನಷ್ಟು ಗಟ್ಟಿ ಹಾಲನ್ನು ಕುದಿಯಲು ಇಟ್ಟು ಅದು ಉಕ್ಕಿ ಬರುವ ಸಮಯದಲ್ಲಿ ಅದನ್ನು ಸತತವಾಗಿ ಕೈಬಿಡದೆ ತಿರುಗಿಸುತ್ತಾ ಇರಬೇಕು .ನಾವು ತೆಗೆದುಕೊಂಡಿರುವ ಎಲ್ಲಾ ಹಾಲು ಕೂಡ ಹಿಂಗಿ ಖೋವಾ ಆಗುವವರೆಗೂ ಕೂಡ ತಿರುಗಿಸುತ್ತಾ ಇರಬೇಕು.  ಐ ಫ್ಲೇಮ್ ನಲ್ಲಿ  ಇಟ್ಟು ಕೈಬಿಡದೆ ತಿರುಗಿಸುತ್ತಾ  ನಲ್ಲಿ ಇದ್ದರೆ  ಮೂವತ್ತರಿಂದ ನಲವತ್ತು ನಿಮಿಷದ ಒಳಗೆ ಖೊವಾ ರೆಡಿಯಾಗುತ್ತದೆ.

Advertisement

 

Advertisement

Advertisement

ಸತತವಾಗಿ ತಿರುಗಿಸುತ್ತಾ ಬಂದಾಗ ಕೋವಾ ರೆಡಿಯಾಗಿರುತ್ತದೆ ಇದು ಖೊವಾ ಆಗಿದೆಯೇ ಇಲ್ಲವೇ ಎಂದು ಹೇಗೆ ತಿಳಿದುಕೊಳ್ಳುವುದು ಎಂದರೆ ಗಟ್ಟಿಯಾದ ಮೇಲೆ ಪಾತ್ರೆಯ ತಳ ನೀಟಾಗಿ ಕಾಣಿಸುತ್ತಿರಬೇಕು ಹೀಗಾದಾಗ ಖೊವಾ ರೆಡಿಯಾಗಿದೆ ಎಂದರ್ಥ ಇದಕ್ಕೆ ಒನ್ ಥರ್ಡ್ ಕಪ್ಪಿನಷ್ಟು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ತಿರುಗಿಸಿ . ಸಕ್ಕರೆ ಹಾಕಿದ ತಕ್ಷಣ ಲೋ ಮೀಡಿಯಂ ಫ್ಲೇಮ್  ನಲ್ಲಿ   ತಿರುಗಿಸುತ್ತಾ ಬನ್ನಿ. ಸಕ್ಕರೆ ಹಾಕಿದ ಮೇಲೆ ಇದರ ಕಲರ್ ಕೂಡ ಬದಲಾಗುತ್ತದೆ ಮತ್ತು ನೀರಿನ ಅಂಶವೆಲ್ಲಾ ಹೋಗುತ್ತದೆ ಸುಮಾರು  ಹತ್ತು ನಿಮಿಷಗಳ ಕಾಲ ಇದನ್ನು ಚೆನ್ನಾಗಿ ತಿರುಗಿಸಿ  ಗಟ್ಟಿಯಾದ ಈ ಮಿಶ್ರಣಕ್ಕೆ  ಸ್ವಲ್ಪ ಏಲಕ್ಕಿ ಪುಡಿ ಅಥವಾ ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ತಿರುಗಿಸಿ.

Advertisement

 

ಸ್ಟೌವನ್ನು ಆಫ್ ಮಾಡಿ ಕಂಪ್ಲೀಟ್ ತಣ್ಣಗಾದ ಮೇಲೆ ಮೃದುವಾದ ಖೊವಾ ರೆಡಿಯಾಗುತ್ತದೆ .ಕೈಗೆ ಸ್ವಲ್ಪ ತುಪ್ಪವನ್ನು ಹಾಕಿಕೊಂಡು ಖೊವಾವನ್ನು  ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ .ಒಂದು ಲೀಟರ್ ಹಾಲಿನಲ್ಲಿ ಸುಮಾರು  ಹನ್ನೆರಡು ಪೇಡಗಳು ಆಗುತ್ತವೆ .ಪೇಡಗಳಿಗೆ ಶೇಪ್ ಕೊಡಲು ಪೇಡ ಪ್ರೆಸ್ ನ್ನು ಕೂಡ ಉಪಯೋಗಿಸಬಹುದು. ಪೇಡಾ ಪ್ರೆಸ್ ಇಲ್ಲದೇ ಇದ್ದರೆ ಕೈಯಿಂದ ಸ್ವಲ್ಪ ಪ್ರೆಸ್ ಮಾಡಿ ತಯಾರಿಸಿ ಕೊಳ್ಳಬಹುದು. ಮಾಡಿದ ಎರಡು ಗಂಟೆಗಳ ಕಾಲ ಅದನ್ನು ಡ್ರೈ ಆಗಲು ಬಿಡಬೇಕು.ಎರಡು ಗಂಟೆಗಳ ನಂತರ ಸ್ವಲ್ಪ ಪೇಡ ಗಟ್ಟಿಯಾಗಿರುತ್ತದೆ. ಆ ನಂತರ ಸ್ವೀಟ್ ಶಾಪ್ ಗಳಲ್ಲಿ ಸಿಗುವಂತಹ  ರುಚಿಯಾದ ಸಿಹಿಯಾದ ಪೇಡವನ್ನು ಸವಿಯಬಹುದು.

Advertisement
Share this on...