ಬಂಡಿಯಲ್ಲಿ ದೋಸೆ ಮಾಡ್ತಾ 30 ಮಂದಿಗೆ ಉದ್ಯೋಗ ನೀಡಿದ ಯುವಕ…ಇಲ್ಲಿನ ದೋಸೆ ಸಿಟಿಯಲ್ಲೇ ಫೇಮಸ್​​​​​​​​​​​​..!​​​​​​​​​​​​​​

in ಕನ್ನಡ ಮಾಹಿತಿ 22 views

ಸಂಜೆಯಾದರೆ ಸಾಕು ಬಹಳಷ್ಟು ಕಡೆ ಸ್ನ್ಯಾಕ್ಸ್​, ಚಾಟ್ಸ್ ಅಂಗಡಿಗಳು ಸಾಲಾಗಿ ನಿಲ್ಲುತ್ತವೆ. ಆಹಾರಪ್ರಿಯರು ಕೂಡಾ ಸಂಜೆ ಹೊರಬಂದು ತಮ್ಮ ಮೆಚ್ಚಿನ ಚಾಟ್ಸ್​ ತಿಂದು ಹೋಗುತ್ತಾರೆ. ಆದರೆ ಹೀಗೆ ಚಾಟ್ ಸೆಂಟರ್ ನಡೆಸುವವರಲ್ಲಿ ಬಹುತೇಕ ಮಂದಿ ಯುವಕರು. ಪದವಿ ಪಡೆದ ಇವರು ಸರ್ಕಾರಿ ಕೆಲಸವನ್ನೇ ನಂಬಿಕೊಳ್ಳದೆ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ. ಈ ಉದ್ಯೋಗದಲ್ಲಿ ಕೆಲವರು ಕೈ ಸುಟ್ಟುಕೊಂಡ್ರೆ ಮತ್ತೆ ಕೆಲವರು ತಾವೂ ಯಶಸ್ವಿಯಾಗಿ ಇತರರಿಗೂ ಉದ್ಯೋಗ ನೀಡಿದ್ದಾರೆ.ತೆಲಂಗಾಣದ ಹೈದರಾಬಾದ್​​​​​ನಲ್ಲಿ ಎರಡು ಪುಟ್ಟ ಬಂಡಿಗಳನ್ನಿಟ್ಟುಕೊಂಡು ರಾಮ್​​ಶಿಂಧೆ ಎಂಬ ಈ ಯುವಕ ತಯಾರಿಸುವ ದೋಸೆ ಇಡೀ ತೆಲಂಗಾಣದಲ್ಲೇ ಬಹಳ ಫೇಮಸ್.

Advertisement

 

Advertisement

Advertisement

ನಮ್ಮ ದಾವಣಗೆರೆ ಬೆಣ್ಣೆ ದೋಸೆ, ಮೈಸೂರು ಮಸಾಲೆ ದೋಸೆ ಹಾಗೆ. ಇದು ದೊಡ್ಡ ಶಾಪ್ ಅಂತೂ ಅಲ್ಲವೇ ಅಲ್ಲ, ಕೇವಲ ಎರಡು ತಳ್ಳುವ ಬಂಡಿಗಳಲ್ಲೇ ವ್ಯಾಪಾರ ನಡೆಯುತ್ತಿದೆ. ಹೈದರಾಬಾದ್​​​ಗೆ ಬಂದವರು ಇಲ್ಲಿ ಬಂದು ದೋಸೆ ತಿನ್ನದೇ ಹೋಗುವುದಿಲ್ಲ. ರಾಮ್​ ಎಂಬುವವರ ಈ ದೋಸೆ ಅಂಗಡಿಗೆ ‘ರಾಮ್​​​ ಕಿ ಬಂಡಿ’ ಎಂದೇ ಹೆಸರಿದೆ.1989 ರಲ್ಲೇ ರಾಮ್ ಅವರ ತಂದೆ ದೋಸೆ ವ್ಯಾಪಾರ ಆರಂಭಿಸಿದ್ದರು. ಎಂಬಿಎ ಮಾಡಿದ್ದ ರಾಮ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆಗ ಇವರಿಗೆ ತಂದೆ ಮಾಡುವ ವ್ಯಾಪಾರದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ರಾಮ್ ಮಾಡುತ್ತಿದ್ದ ಕಂಪನಿಯಲ್ಲಿ ಅವರಿಗೆ ದೊರೆಯುತ್ತಿದ್ದದ್ದೇ 12 ಸಾವಿರ ಸಂಬಳ. ಆದರೆ ಆ ಕೆಲಸವನ್ನು ಮುಂದುವರೆಸುವ ಮನಸ್ಸು ಆಗದೆ, ತಮ್ಮದೇ ಸ್ವಂತ ಬ್ಯುಸ್ನೆಸ್ ಮಾಡಲು ನಿರ್ಧರಿಸಿ ರಾಮ್ ಆ ಕೆಲಸಕ್ಕೆ ರಾಜೀನಾಮೆ ನೀಡಿದರು.

Advertisement

 

ಹೇಗಿದ್ದರೂ ತಂದೆಯ ದೋಸೆ ಉದ್ಯಮ ಇದೆ ಅದನ್ನೇ ಮಾಡಿದರೆ ಹೇಗೆ ಎಂದು ಅದೇ ಕೆಲಸ ಆರಂಭಿಸಿರು. ಆದರೆ ಆಗ ಇಲ್ಲಿಗೆ ಜನರು ಅಷ್ಟೇನೂ ಬರುತ್ತಿರಲಿಲ್ಲ. ಜನರನ್ನು ಸೆಳೆಯಲು ರಾಮ್​​​​ ವಿಭಿನ್ನ ರುಚಿಯನ್ನು ಟ್ರೈ ಮಾಡಲು ಆರಂಭಿಸಿದರು. ಎಲ್ಲಾ ಕಡೆ ದೋಸೆ, ಇಡ್ಲಿ, ಉಪ್ಪಿಟ್ಟು ಕಾಮನ್. ಆದರೆ ಇಲ್ಲಿ ಅದನ್ನೇ ಸ್ವಲ್ಪ ವಿಭಿನ್ನವಾಗಿ ತಯಾರಿಸಲು ಆರಂಭಿಸಿದರು. ಇಲ್ಲಿ ಮಾಡುವ ದೋಸೆ, ಇಡ್ಲಿಗೆ ಜನರು ಫಿದಾ ಆಗಿ ಹೋದ್ರು.

 

12 ಸಾವಿರ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ ರಾಮ್​ ಬಳಿ ಈಗ 30 ಕ್ಕೂ ಹೆಚ್ಚು ಮಂದಿ ಕೆಲಸಗಾರರಿದ್ದಾರೆ. ಒಬ್ಬರಿಗೆ 20-25 ಸಾವಿರ ಸಂಬಳ ನೀಡುತ್ತಾರೆ. ನೀವೇ ಊಹಿಸಿ ರಾಮ್​ ಈ ದೋಸೆ ಉದ್ಯಮದಿಂದ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಅಂತ. ಹೈದರಾಬಾದ್​ನ ಅಬಿಡ್ಸ್, ಬಂಜಾರಹಿಲ್ಸ್ ಹಾಗೂ ನಾಂಪಲ್ಲಿ, ಮೂರು ಕಡೆ ರಾಮ್​​​ ಕಿ ಬಂಡಿ ಬ್ರಾಂಚ್ ಇವೆ. ಅದರಲ್ಲಿ ನಾಂಪಲ್ಲಿ ಕರಾಚಿ ಬೇಕರಿ ಬಳಿಯ ಬಂಡಿ ಬೆಳಗ್ಗೆ 4-9ವರೆಗೆ ಮಾತ್ರ ಇರಲಿದೆ.

 

ಬಟರ್ ಚೀಸ್ ದೋಸೆ, ಕಾರ್ನ್​ ದೋಸೆ, ಪಿಜ್ಜಾ ದೋಸೆ, ಶ್ವೆಜ್ವಾನ್ ಕ್ರೀಮ್ ದೋಸೆ, ಉಪ್ಮ ದೋಸೆ, ಡಬಲ್ ಚೀಸ್​​, ಪಾಲಕ್ ಪನೀರ್ ದೋಸೆ, ಚೀಸ್​ಕಾರ್ನ್, ಬಟರ್ ಕಾರ್ನ್​, ಪನೀರ್ ಕಾರ್ನ್ ಸೇರಿ 10-12 ವೈರೈಟಿ ದೋಸೆಯನ್ನು ಇಲ್ಲಿ ತಯಾರಿಸಲಾಗುತ್ತಿದೆ. ಅದೇ ರೀತಿ ಇಡ್ಲಿಯಲ್ಲಿ ಕೂಡಾ ಬಟರ್ ಇಡ್ಲಿ, ಚೀಸ್ ಇಡ್ಲಿ, ಫ್ರೈ ಇಡ್ಲಿ, ತವಾ ಫ್ರೈ ಹೀಗೆ ನಾನಾ ವೆರೈಟಿಗಳಿವೆ. ಒಮ್ಮೆ ತಿಂದವರು ಮತ್ತೊಮ್ಮೆ ತಿನ್ನದೇ ಇರುವುದಿಲ್ಲ. ಇಲ್ಲಿ ಒಂದೊದು ದೋಸೆ ಬೆಲೆ 180-350 ವರೆಗೂ ಇರುತ್ತದೆ. ರುಚಿ ಚೆನ್ನಾಗಿರುವ ಉದ್ದೇಶದಿಂದ ದೋಸೆಗೆ ಇಷ್ಟು ಬೆಲೆ ಫಿಕ್ಸ್ ಮಾಡಿಲ್ಲ. ದೋಸೆ ಮಾಡಲು ಬಳಸುವ ಚೀಸ್, ಬೆಣ್ಣೆ, ಪನೀರ್ ಎಲ್ಲವೂ ಇವರು ಬಳಸುವುದು ಅಮೂಲ್ ಕಂಪನಿಯದ್ದು.

 

ಜೊತೆಗೆ ಇವರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆ ಕಾರಣ ದೋಸೆ ಬಹಳ ಸ್ವಲ್ಪ ದುಬಾರಿ. ಇವರ ಶಾಪ್​​​ಗೆ ಬೆಸ್ಟ್ ರೆಸ್ಟೋರೆಂಟ್ ಎಂದು ಸರ್ಟಿಫಿಕೇಟ್ ಕೂಡಾ ದೊರೆತಿದೆ.ಎಂಬಿಎ ಮಾಡಿ, ಸೇರಿದ ಕೆಲಸ ಬಿಟ್ಟು ತಂದೆಯ ವ್ಯಾಪಾರವನ್ನೇ ಮುಂದುವರೆಸಿಕೊಂಡು ಇತರರಿಗೆ ಉದ್ಯೋಗ ಕೂಡಾ ನೀಡಿರುವ ರಾಮ್​​​​ ಯಾವ ಸೆಲಬ್ರಿಟಿಗಳಿಗೂ ಕಡಿಮೆ ಇಲ್ಲ ಎನ್ನಬಹುದು. ಬಂಡಿಯಿಂದ ವ್ಯಾಪಾರ ಆರಂಭಿಸಿದ ರಾಮ್​​​ ಇತ್ತೀಚೆಗೆ ಎರಡು ಹೊಸ ಬ್ರಾಂಚ್​​​​​​ಗಳನ್ನು ಆರಂಭಿಸಿದ್ದಾರೆ. ಆದರೆ ಅದು ಬಂಡಿಯಲ್ಲ,

 

 

ಆಕರ್ಷಕ ಕಟ್ಟಡವನ್ನು ಕಟ್ಟಿಸಿ ಅದರಲ್ಲಿ ರಾಮ್​​​​ ಹೊಸ ಬ್ರಾಂಚ್ ಆರಂಭಿಸಿದ್ದಾರೆ. ಆದರೆ ವ್ಯಾಪಾರ ಆರಂಭಿಸಿದ ಬಂಡಿಯನ್ನು ರಾಮ್ ಇನ್ನೂ ಬಿಟ್ಟಿಲ್ಲ. ವಿಶೇಷ ಎಂದರೆ ರಾಮ್​​​ ಕಿ ಬಂಡಿಯಲ್ಲಿ ದೋಸೆ ತಿನ್ನಲು ಸಿನಿಮಾ ನಟರೂ ಕೂಡಾ ಬರುತ್ತಾರೆ. ಒಂದು ವೇಳೆ ನೀವು ಹೈದರಾಬಾದ್​​ಗೆ ಹೋದರೆ ಇಲ್ಲಿ ದೋಸೆ ತಿನ್ನುವುದನ್ನು ಮಾತ್ರ ಮರೆಯಬೇಡಿ.

Advertisement
Share this on...