ಹೋಟೆಲ್ ನಲ್ಲಿ ಪಾತ್ರೆ ತೊಳೆಯುತ್ತಿದ್ದ ಹುಡುಗ ತನ್ನ ಒಂದು ಐಡಿಯಾದಿಂದ ನೂರಾರು ಕೋಟಿ ಸಂಪಾದನೆ ಮಾಡಿದ ರೋಚಕ ಕಥೆ !

in ಮನರಂಜನೆ 129 views

ಸಾಮಾನ್ಯವಾಗಿ ಬಹಳಷ್ಟು ಜನರು ಮೂರು ಹೊತ್ತು ಜೀವನ ನಡೆದರೆ ಸಾಕು ಹೆಚ್ಚು ಏನು ಆಸೆ ಇಲ್ಲ ಎಂದು ಯೋಚಿಸುತ್ತಾರೆ. ಆದರೆ ಈತ ಮಾತ್ರ ಕೇವಲ ದಿನಕ್ಕೆ 150 ರೂಪಾಯಿ ಸಂಬಳಕ್ಕೆ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ನಂತರ ತನ್ನ ವಿಭಿನ್ನ ಆಲೋಚನೆ ಹಾಗೂ ಸತತ ಪರಿಶ್ರಮದಿಂದ ಇಂದು ಮೂರು ತಲೆಮಾರಿಗೆ ಆಗುವಷ್ಟು ದುಡಿದು ದೊಡ್ಡ ಬಿಜಿ಼ನೆಸ್ ಮ್ಯಾನ್ ಆಗಿದ್ದಾನೆ. ಕೆಲವರ ಜೀವನದಲ್ಲಿ ಕಿತ್ತು ತಿನ್ನುವಂತಹ ಬಡತನದ ಪಾಠ, ಮುಂದಿನ ಬದುಕಿನಲ್ಲಿ ಕುಳಿತು ತಿನ್ನುವ ಮಟ್ಟಕ್ಕೆ ಕರೆದೊಯ್ಯುತ್ತದೆ. ಅದಕ್ಕೆ ಈತನೇ ಸ್ಪಷ್ಟ ಉದಾಹರಣೆ. ಪ್ರೇಮ್ ಗಣಪತಿ ಇವರ ಮೂಲ ಸ್ಥಳ ತಮಿಳುನಾಡು. ತಮಿಳುನಾಡಿನಿಂದ ಕೇವಲ 17 ನೇ ವಯಸ್ಸಿನಲ್ಲಿ ಹೊಟ್ಟೆ ಪಾಡಿಗಾಗಿ ಮುಂಬೈಗೆ ಬರುತ್ತಾರೆ. ಮುಂಬೈಗೆ ಬಂದು ಬೇಕರಿಯೊಂದರಲ್ಲಿ ಕೇವಲ ದಿನಕ್ಕೆ 150 ರೂಪಾಯಿ ಸಂಬಳಕ್ಕೆ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರುತ್ತಾರೆ. ಸತತವಾಗಿ ಎರಡು ವರ್ಷ ಬೇಕರಿಯಲ್ಲಿ ಕೆಲಸ ಮಾಡುತ್ತಾರೆ.

Advertisement

 

Advertisement

Advertisement

ನಂತರ ಒಂದು ದಿನ ಸ್ವಯಂ ಅವಲೋಕನ ಮಾಡಿಕೊಳ್ಳುತ್ತಾರೆ. ಎರಡು ವರ್ಷದಲ್ಲಿ ಕೇವಲ ತನ್ನ ಮತ್ತು ತನ್ನ ನಂಬಿದವರ ಹೊಟ್ಟೆಪಾಡು ನಡೆಯಿತೆ ಹೊರತು ಮತ್ತೆ ಏನು ಆಗಲಿಲ್ಲ. ಅದೇ ಬಡತನದ ಬದುಕು. ಯಾವುದೇ ಬೆಳವಣಿಗೆ ಇಲ್ಲ. ಇಷ್ಟೇನಾ ಜೀವನ ಮುಂದಕ್ಕೂ ಇಷ್ಟೇ ಆದರೆ ಬದುಕು ವ್ಯರ್ಥ ಅಲ್ಲವೇ? ಹೀಗೆ ಇದ್ದರೆ ಆಗಲ್ಲ ಜೀವನದಲ್ಲಿ ನಾನು ತುಂಬಾ ಹಣಗಳಿಸಿ ಶ್ರೀಮಂತನಾಗಬೇಕು ಎಂದು ಯೋಚಿಸುತ್ತಾರೆ. ತುಂಬಾ ಓದಬೇಕು ಎನ್ನುವ ಹಂಬಲವಿದ್ದರೂ ಓದಲಾಗದೆ ತನ್ನ ಕುಟುಂಬವನ್ನು ಸಾಕಲು ಮುಂಬೈಗೆ ಬರುವ ಪ್ರೇಮ್ ಗಣಪತಿ ಮುಂದೆ ಏನಾದರೂ ಸಾಧಿಸಲೇಬೇಕು ಎನ್ನುವ ಅಪಾರ ಚಲ ಹೊಂದಿದ್ದರು. ಇದರಂತೆ ಬೇಕರಿಯಲ್ಲಿ ಕೆಲಸ ತೊರೆದು ತನ್ನ ಸ್ನೇಹಿತರ ಸಹಾಯದಿಂದ ತಳ್ಳುವ ಗಾಡಿಯಲ್ಲಿ ಇಡ್ಲಿ, ದೋಸೆ ಮಾರಲು ಶುರು ಮಾಡಿದರು. ಆದರೆ ಅವರಿಗೆ ಪ್ರಾರಂಭದಲ್ಲಿ ವ್ಯಾಪಾರದಲ್ಲಿ ಹಲವಾರು ಸಮಸ್ಯೆಗಳು ಎದುರಾದವು. ಪ್ರತಿದಿನವೂ ಪೊಲೀಸರು ಅವರ ಗಾಡಿಯನ್ನು ತೆಗೆದುಕೊಂಡು ಹೋಗುತ್ತಿದ್ದರು.

Advertisement

 

ಪ್ರತಿದಿನವೂ ಪೊಲೀಸರನ್ನು ಕಾಡಿ-ಬೇಡಿ ಗಾಡಿಯನ್ನು ಬಿಡಿಸಿಕೊಂಡು ಬರುತ್ತಿದ್ದರು. ವ್ಯಾಪಾರ ಸ್ವಲ್ಪ ವೃದ್ಧಿಯಾಗುತ್ತಿದಂತೆ ಈ ಪೋಲಿಸರ ಸಹವಾಸವೇ ಬೇಡ ಎಂದುಕೊಂಡು ಇನ್ನೊಂದಿಷ್ಟು ಸಾಲ ಮಾಡಿ ಸಣ್ಣದೊಂದು ಕ್ಯಾಂಟಿನ್ ಶುರು ಮಾಡಿದರು. ಇಲ್ಲಿಂದ ಅವರ ಅದೃಷ್ಟವೇ ಬದಲಾಯಿತು. ವ್ಯಾಪಾರ ದಿನೇ ದಿನೇ ಹೆಚ್ಚಾಯಿತು. ಅವರ ಹೋಟೆಲ್ ದೋಸೆ ತುಂಬಾ ಫೇಮಸ್ ಆಯಿತು. ನಂತರ ದೊಡ್ಡದಾದ ದೋಸಾ ಪ್ಲಾಜಾ಼ ಆರಂಭಿಸಿದರು. ದೋಸಾ ಪ್ಲಾಜಾ಼ದಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಇದನ್ನು ಅರಿತ ಪ್ರೇಮ್ ಗಣಪತಿಯವರು ಮುಂಬೈನ ಹಲವು ಭಾಗಗಳಲ್ಲಿ ಔಟ್ ಲೆಟ್ ಗಳನ್ನು ತೆರೆದರೂ. ಇಲ್ಲೂ ಭರ್ಜರಿ ಯಶಸ್ಸು ಕಂಡರು.

ನಂತರ ತಮ್ಮ ವಹಿವಾಟನ್ನು ದೇಶದ ವಿವಿಧ 45 ನಗರಗಳಲ್ಲಿ ತೆರೆದರು. ಅಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ದೋಸಾ ಪ್ಲಾಜಾ಼ ಔಟ್ಲೆಟ್ ಗಳನ್ನು ತೆರೆದು ಉತ್ತಮ ಲಾಭಗಳಿಸುತ್ತಿದ್ದಾರೆ. ತಿಂಗಳಿಗೆ ನೂರಾರು ಕೋಟಿ ವ್ಯವಹಾರ ನಡೆಸುತ್ತಿದ್ದಾರೆ. ಬದುಕು ಎಂದಿಗೂ ನಿಂತ ನೀರಾಗಬಾರದು. ಪ್ರೇಮ್ ಗಣಪತಿಯವರ ಬದುಕು ನಿಂತ ನೀರಾಗಲಿಲ್ಲ, ಹರಿವ ನೀರಾಗಿ ಸಾಧನೆಯ ಸಮುದ್ರ ಸೇರಿತು. ಭೂಮಿಯ ಮೇಲೆ ಎಷ್ಟು ದಿನ ಬದುಕಿದ್ದೇವು ಎಂಬುದು ಮುಖ್ಯವಲ್ಲ, ಹೇಗೆ ಬದುಕಿದ್ದೆವು ಎಂಬುದೇ ಮುಖ್ಯ.

– ಸುಷ್ಮಿತಾ

Advertisement
Share this on...