ಆ ವ್ಯಕ್ತಿ ನೀಡಿದ್ದ ಕಳೆತ ಹಣ್ಣನ್ನು ತಿಂದಿದ್ದರಂತೆ ವರನಟ…ಯಾರು ಆ ವ್ಯಕ್ತಿ..ಅಣ್ಣಾವ್ರು ಏಕೆ ಆ ಹಣ್ಣು ತಿಂದರು….?

in ಸಿನಿಮಾ 27 views

ಇಂದು ವರನಟ ಡಾ. ರಾಜ್​​​ಕುಮಾರ್ ಅವರ 92ನೇ ಹುಟ್ಟುಹಬ್ಬ. ಪ್ರತಿವರ್ಷ ಡಾ. ರಾಜ್​ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಿಂದ ಆಚರಿಸುತ್ತಿದ್ದರು. ಡಾ. ರಾಜ್ ಕುಟುಂಬ ಕೂಡಾ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಬಂದಿರುವ ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಲಾಕ್​​ಡೌನ್ ಇದೆ. ಪ್ರತಿಬಾರಿಯಂತೆ ಈ ಬಾರಿ ಹುಟ್ಟುಹಬ್ಬ ಆಚರಿಸಲು ಸಾಧ್ಯವಿಲ್ಲ. ಆದ್ದರಿಂದ ಅಭಿಮಾನಿಗಳು ಬಹಳ ಸರಳವಾಗಿ ಇರುವೆಲ್ಲಿಯೇ ಅಣ್ಣಾವ್ರ ಬರ್ತಡೇ ಆಚರಿಸುತ್ತಿದ್ದಾರೆ.ಇನ್ನು ಡಾ. ರಾಜ್​​​ ಅವರನ್ನು ಬಹಳ ಹತ್ತಿರದಿಂದ ಬಲ್ಲವರು ಅವರ ಸರಳ ಸ್ವಭಾವದ ಬಗ್ಗೆ ಆಗ್ಗಾಗ್ಗೆ ಹೇಳುತ್ತಿರುತ್ತಾರೆ. ರಾಜ್​ ಕುಟುಂಬಕ್ಕೆ ಬಹಳ ಹತ್ತಿರವಿರುವ ಎನ್​​​​​.ಎಸ್​​. ರಾಜ್​​​ಕುಮಾರ್​ ಕೂಡಾ ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ. 1980 ರಲ್ಲಿ ಡಾ. ರಾಜ್​​ಕುಮಾರ್ ಹಾಗೂ ಜಯಪ್ರದಾ ಅಭಿನಯದ ಕವಿರತ್ನ ಕಾಳಿದಾಸ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿತ್ತು. ಚಿತ್ರಕ್ಕೆ ವಿ.ಎಸ್​​​. ಗೋವಿಂದ ನಿರ್ಮಾಪಕರಾದರೆ ರೇಣುಕಾ ಶರ್ಮ ಚಿತ್ರವನ್ನು ನಿರ್ದೇಶಿಸಿದ್ದರು. ಎನ್​​​.ಎಸ್​​. ರಾಜ್​​​ಕುಮಾರ್ ಅವರು ಛಾಯಾಗ್ರಾಹಕ ವಿ.ಕೆ. ಕಣ್ಣನ್ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

Advertisement

 

Advertisement

 

Advertisement

Advertisement

 

ಡಾ. ರಾಜ್​ ಸಿನಿಮಾ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದೆ ಎಂದು ತಿಳಿದ ರಾಯಚೂರಿನ ರೈತರು ಒಂದು ಬಸ್ ಮಾಡಿಕೊಂಡು ಬಂದಿಳಿದಿದ್ದಾರೆ. ನನ್ನನ್ನು ನೋಡಲು ರೈತರು ಬಂದಿದ್ದಾರೆ ಎಂದು ತಿಳಿದ ಡಾ. ರಾಜ್​​ಕುಮಾರ್ ಚಿತ್ರೀರಕಣ ಬಿಟ್ಟು ರೈತರನ್ನು ಭೇಟಿ ಮಾಡಲು ಬಂದರು. ರೈತರೊಬ್ಬರು ತಮ್ಮ ಟವೆಲ್​​​ನಲ್ಲಿ ರಾಜ್​​ಕುಮಾರ್ ಅವರಿಗಾಗಿ ಬಾಳೆಹಣ್ಣನ್ನು ತಂದಿದ್ದರು. ಊರಿನಿಂದ ಪ್ರಯಾಣ ಮಾಡಿ ಬರುವಷ್ಟರಲ್ಲಿ ಆ ಹಣ್ಣು ಬಹಳ ಕಳೆತುಹೋಗಿತ್ತು. ಈ ಹಣ್ಣನ್ನು ಆ ರೈತ ರಾಜ್​​ಕುಮಾರ್​​​ ಅವರಿಗೆ ನೀಡಿದರು. ಇದಕ್ಕೆ ಸ್ವಲ್ಪವೂ ಬೇಸರಮಾಡಿಕೊಳ್ಳದ ಅಣ್ಣಾವ್ರು ಆ ಹಣ್ಣನ್ನು ಖುಷಿಯಿಂದಲೇ ಸ್ವೀಕರಿಸಿ ಸ್ಥಳದಲ್ಲೇ ತಿಂದು ರೈತರನ್ನು ಪ್ರೀತಿಯಿಂದ ಮಾತನಾಡಿಸಿ ವಾಪಸ್ ಕಳಿಸಿದ್ದಾರೆ.

 

 

ಈ ವೇಳೆ ಅಲ್ಲಿದ್ದವರನ್ನು ಒಬ್ಬರು ಅಷ್ಟು ಕಳೆತ ಹಣ್ಣನ್ನು ತಿಂದರಲ್ಲಾ ನಿಮ್ಮ ಆರೋಗ್ಯದ ಸ್ಥಿತಿ ಏನಾಗಬೇಡ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಾಜ್​​​ಕುಮಾರ್, ರೈತರು ಅಷ್ಟು ದೂರದಿಂದ ನನ್ನನ್ನು ನೋಡಲು ಬಿಸಿಲಿನಲ್ಲಿ ಬಂದಿದ್ದಾರೆ. ಅವರು ಪ್ರೀತಿಯಿಂದ ಏನೇ ಕೊಟ್ಟರು ಅದು ಪ್ರಸಾದ ಇದ್ದಂತೆ ಆರೋಗ್ಯಕ್ಕೆ ಏನೇ ತೊಂದರೆಯಾದರೂ ದೇವರಿದ್ದಾನೆ ಎಂದು ಸಮಾಧಾನವಾಗಿ ಉತ್ತರಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಸ್ಟಾರ್​​ಗಳು ಎಂದರೆ ಅಣ್ಣಾವ್ರಂತೆ ಸರಳವಾಗಿರಬೇಕು ಎನ್ನುತ್ತಾರೆ ಅಭಿಮಾನಿಗಳು.

Advertisement
Share this on...