ಕೊರೊನಾ ಲಾಕ್ ಡೌನ್ ನಡುವೆ ಹೋಟೆಲ್ ನಲ್ಲಿ‌ ಸಿಲುಕಿಕೊಂಡ ಸ್ಯಾಂಡಲ್ ವುಡ್ ಹಿರಿಯ ನಟಿ

in News/ಕನ್ನಡ ಮಾಹಿತಿ 57 views

ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್‍ಡೌನ್ ಶುರುವಾದಗಿನಿಂದ ಅನೇಕ ಜನರು ತಮ್ಮ ಮನೆಗೆ ಹೋಗಲು ಸಾಧ್ಯವಾಗದೇ ಎಲ್ಲಿ ಉಳಿದಿದ್ದರೋ ಅಲ್ಲಿಯೇ ಬಂಧಿಯಾಗಿದ್ದಾರೆ
ಆ ಸಾಲಿಗೆ ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಕೂಡ ಒಂದು ಹೋಟೆಲ್ ನಲ್ಲಿ ಸಿಲುಕಿಕೊಂಡಿದ್ದಾರೆ.

Advertisement

 

Advertisement

Advertisement

 

Advertisement

ಹೌದು, ಈ ಲಾಕ್‍ಡೌನ್‍ನಲ್ಲಿ ಕಳೆದ 22 ದಿನಗಳಿಂದ ನಟಿ ಜಯಂತಿ ಸಿಲುಕಿ ಹಾಕಿಕೊಂಡಿದ್ದಾರೆ. ಕಳೆದ ತಿಂಗಳು ಮಾರ್ಚ್ 22 ರಂದು ನಾಡಿನ ವಿಶ್ವ ವಿಖ್ಯಾತ ಹಂಪಿ ದೇವಸ್ಥಾನ ನೋಡಲು ಕುಟುಂಬ ಸಮೇತ ನಟಿ ಜಯಂತಿ ಹಂಪಿಗೆ ತೆರಳಿದ್ದರು. ಆಗ ಕರ್ನಾಟಕದಲ್ಲಿ ಹೆಚ್ಚಾಗಿ ಕೊರೊನಾ ವೈರಸ್ ವ್ಯಾಪಿಸಿರಲಿಲ್ಲ. ಆದರೆ ಈ ಮಧ್ಯೆ ನಟಿ ಜಯಂತಿ ಕುಟುಂಬ ಪ್ರವಾಸದಲ್ಲಿದ್ದಾಗಲೇ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲು ಸರ್ಕಾರ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ಹೊಸಪೇಟೆಯಲ್ಲಿರುವ ಖಾಸಗಿ ಹೊಟೇಲ್‍ವೊಂದರಲ್ಲಿ ಜಯಂತಿ ಹಾಗೂ ಕುಟುಂಬ ಉಳಿದುಕೊಂಡಿದ್ದರಂತೆ. ಈಗ ಅಲ್ಲಿಗೆ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

 

 

ಆದರೆ ಲಾಕ್‍ಡೌನ್ ಆದ ನಂತರ ಜಯಂತಿ ಕುಟುಂಬ ಬೆಂಗಳೂರಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅಂದಿನಿಂದ ಹೊಟೇಲ್‍ನಲ್ಲಿಯೇ ಕುಟುಂಬಸ್ಥರು ಇದ್ದರು. ಇಂದು 21 ದಿನದ ಲಾಕ್‍ಡೌನ್ ಮುಗಿದಿದ್ದು, ಬೆಂಗಳೂರಿಗೆ ವಾಪಸ್ ಬರಬಹುದು ಎಂದು ಭಾವಿಸಿದ್ದರು. ಆದರೆ ಪ್ರಧಾನಿ ಮೋದಿ ಅವರು ಇಂದು ಮತ್ತೆ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿ ಅಧಿಕೃತವಾಗಿ ಫೋಷಣೆ ಮಾಡಿದ್ದಾರೆ. ಈ ಮಧ್ಯೆ ಇನ್ನೂ 19 ದಿನಗಳ ಕಾಲ ಹೊಟೇಲ್‍ನಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ ನಟಿ ಜಯಂತಿ ಕುಟುಂಸ್ಥರಿಗೆ ಉಂಟಾಗಿದೆ. ಮೇ 3ರ ಬಳಿಕ ಲಾಕ್‍ಡೌನ್ ಸಡಿಲವಾದರೆ ಜಯಂತಿ ಕುಟುಂಬ ಬೆಂಗಳೂರಿಗೆ ಬರುವ ನಿರೀಕ್ಷೆಯಲ್ಲಿದ್ದಾರಂತೆ

Advertisement
Share this on...