ಪ್ರಚಂಡ ಕುಳ್ಳ ದ್ವಾರಕೀಶ್ ರವರ ಮೊದಲ ಶಾಟ್ ನ ವಿಶೇಷ ಏನು ಗೊತ್ತಾ?

in ಕನ್ನಡ ಮಾಹಿತಿ/ಸಿನಿಮಾ 107 views

ದ್ವಾರಕೀಶ್ ರವರ ಅಣ್ಣನಿಗೆ ಸಿನಿಮಾದಲ್ಲಿ ದ್ವಾರಕೀಶ್ ರವರು ನಟಿಸುವುದು ಸುತರಾಂ ಇಷ್ಟವಿರಲಿಲ್ಲ. ದ್ವಾರಕೀಶ್ ರವರು ಓದುತ್ತಿರುವಾಗಲೇ ಅವರ ಅಣ್ಣ ಮೈಸೂರಿನಲ್ಲಿ ಭಾರತ್ ಆಟೋ ಸ್ಪೇರ್ಸ್ ಅಂತ ಒಂದು ಆಟೋ ಮೊಬೈಲ್ ಶಾಪ್ ಇಟ್ಟುಕೊಂಡಿದ್ದರು. ಆದರೆ ದ್ವಾರಕೀಶ್ ಗೆ ಸಿನಿಮಾ ಸೆಳೆತ ಸೆಳೆಯುತ್ತಲೇ ಇತ್ತು.  1962 ರಲ್ಲಿ ಕನ್ನಡದ ಖ್ಯಾತ ನಿರ್ದೇಶಕ, ಸಂಭಾಷಣಾಕಾರ ಹಾಗೂ ಸಾಹಿತ್ಯ ರಚನಾಕಾರ ಹುಣಸೂರು ಕೃಷ್ಣಮೂರ್ತಿಯವರ ನಿರ್ದೇಶನದಲ್ಲಿ ಮದ್ರಾಸಿನ ಗೋಲ್ಡಾ ಸ್ಟುಡಿಯೋದಲ್ಲಿ ವೀರಸಂಕಲ್ಪ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನಟ ದ್ವಾರಕೀಶ್ ರವರಿಗೆ ವೀರಸಂಕಲ್ಪ ಮೊದಲ ಸಿನಿಮಾ. ದ್ವಾರಕೀಶ್ ರವರು ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಮೊದಲ ಶಾಟ್ ನ ಚಿತ್ರೀಕರಣ ಅದು. ತಮ್ಮ ಸೋದರ ಮಾವನವರಾದ ಹುಣಸೂರು ಕೃಷ್ಣಮೂರ್ತಿಯವರು ನನ್ನ ಸೋದರ ಅಳಿಯ ಸಿನಿಮಾರಂಗದಲ್ಲಿ ಸಿಂಹಾಸನದ ಮೇಲೆ ಹೀಗೆ ಕುಳಿತು ಕನ್ನಡ ಚಿತ್ರರಂಗದಲ್ಲಿ ರಾರಾಜಿಸಬೇಕು ಎಂದು ಆ ಶಾಟ್ ಇಟ್ಟಿದ್ದರು.

Advertisement

Advertisement

ನಟ ದ್ವಾರಕೀಶ್ ಆ ಶಾಟ್ ನಲ್ಲಿ ಅತ್ಯದ್ಭುತವಾಗಿ ನಟಿಸಿದ್ದರು. ಅಕ್ಷರಶಃ ದ್ವಾರಕೀಶ್ ರವರು ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದಂತಹ ಹೆಗ್ಗುರುತೊಂದನ್ನು ಮೂಡಿಸಿದ್ದರು.
ಶಾಲಾ-ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು ದ್ವಾರಕೀಶ್. ಕಾಲೇಜಿನಲ್ಲಿ ಮಾರ್ಕ್ಸ್ ಕಡಿಮೆ ಬಂದಾಗ ಲೇ ನಿನಗೆ ತಲೆಗೆ ವಿದ್ಯೆ ಹತ್ತಲ್ವೋ ನಾಟಕನೋ, ಸಿನಿಮಾನೋ ನೋಡಿಕೋ ಎಂದು ಮೇಷ್ಟ್ರುಗಳಿಂದ ಬಯಿಸಿಕೊಂಡಿದ್ದರು. ಪ್ರಚಂಡ ಕುಳ್ಳ ದ್ವಾರಕೀಶ್ ಕನ್ನಡದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ 50 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ‌. ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Advertisement

 

Advertisement

ದ್ವಾರಕೀಶ್ ರವರು ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರು. ಸತತವಾಗಿ ದ್ವಾರಕೀಶ್ ನಿರ್ಮಾಣದ 20 ಸಿನಿಮಾಗಳು ಸೋತವು. ದ್ವಾರಕೀಶ್ ಕಥೆ ಇನ್ನಷ್ಟೇ ಮುಗಿದುಹೋಯಿತು ಎಂದು ಎಲ್ಲಾ ಭಾವಿಸಿದರು. ಆದರೆ ದ್ವಾರಕೀಶ್ ಮಾತ್ರ ಜಗ್ಗಲಿಲ್ಲ-ಕುಗಲಿಲ್ಲ. ಸಿನಿಮಾರಂಗವೆಂಬ ಚೌಕಟ್ಟಿನಲ್ಲಿ ಗರುಡಗಂಬದಂತೆ ನಿಂತರು. ಆ ಒಂದು ಚಿತ್ರ ಅವರಿಗೆ ಗೆಲುವಿನ ದಾರಿಯತ್ತ ಕರೆದುಕೊಂಡು ಹೋಯಿತು. ಅವರ ಆಪ್ತಮಿತ್ರ ಎಂದು ಕರೆಸಿಕೊಳ್ಳುತ್ತಿದ್ದ ವಿಷ್ಣುವರ್ಧನ್ ರವರು ದ್ವಾರಕೀಶ್ ಅವರಿಗೆ ಕಾಲ್ ಶೀಟ್ ನೀಡಿದರು. ಆಪ್ತಮಿತ್ರ ಚಿತ್ರ ಸಿದ್ಧವಾಯಿತು. ದ್ವಾರಕೀಶ್ ಮತ್ತೆ ಕನ್ನಡ ಚಿತ್ರರಂಗದಲ್ಲಿ ಪ್ರಚಂಡ ಕುಳ್ಳ ಎನಿಸಿಕೊಂಡರು.

 

ಅರ್ಧ ಶತಮಾನಕ್ಕೂ ಹೆಚ್ಚು ಸಿನಿಮಾ ರಂಗದ ಅನುಭವದಲ್ಲಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಈ ಇಳಿ ವಯಸ್ಸಿನಲ್ಲೂ ಉತ್ಸಾಹಿಯಾಗಿದ್ದಾರೆ ನಟ ದ್ವಾರಕೀಶ್.

– ಸುಷ್ಮಿತಾ

Advertisement
Share this on...