ನೊಣಗಳನ್ನು ಓಡಿಸುವ ಸುಲಭ ವಿಧಾನ ….ಹೀಗೆ ಮಾಡಿ ನೋಡಿ !

in ಕನ್ನಡ ಮಾಹಿತಿ 931 views

ಮಳೆಗಾಲದಲ್ಲಿ ಎಲ್ಲ ಕಡೆ  ತೇವಾಂಶದಿಂದ ಕೂಡಿರುತ್ತದೆ .ಈ ಕಾಲದಲ್ಲಿ ನೊಣಗಳ ಸಂಖ್ಯೆ ತುಂಬಾ ಜಾಸ್ತಿ ಇರುತ್ತದೆ ಈ ನೊಣಗಳು ಹೊರಗೆ ಕೊಳಚೆ ಪ್ರದೇಶದಲ್ಲೆಲ್ಲ ಕುಳಿತು ಮನೆಯೊಳಗೆ ಬರುತ್ತವೆ. ಅಡುಗೆ ಪದಾರ್ಥಗಳ ಮೇಲೆಲ್ಲ ಕುಳಿತು ಅದನ್ನು ಕಲುಷಿತಗೊಳಿಸುತ್ತವೆ. ಇದರಿಂದ ನಮಗೆ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ.ಆದ್ದರಿಂದ ನೊಣಗಳನ್ನು ಹೇಗೆ ಹೋಗಲಾಡಿಸಬಹುದು ಎಂಬುದಕ್ಕೆ ಕೆಲವು ಸುಲಭ ವಿಧಾನಗಳನ್ನು ತಿಳಿಸಿಕೊಡುತ್ತೇವೆ. ನೊಣಗಳನ್ನು ಹೋಗಲಾಡಿಸಲು ಸುಲಭವಾದ ಮೊದಲನೆಯ ವಿಧಾನವೆಂದರೆ ಅದು ಕಿತ್ತಳೆ ಹಣ್ಣು ಮತ್ತು ಲವಂಗ . ಕಿತ್ತಳೆ ಹಣ್ಣಿಗೆ ಲವಂಗಗಳನ್ನು ಚುಚ್ಚಿ ಬಾಗಿಲು ಮತ್ತು ಕಿಟಕಿಗಳ ಬಳಿ ಇಡುವುದರಿಂದ ನೊಣಗಳು ಮನೆಯ ಒಳಗೆ ಬರುವುದಿಲ್ಲ. ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಲಿಕ್ವಿಡ್ ಹೊರಬರುವಂತೆ ಪ್ರೆಸ್ ಮಾಡಿ  ಅದನ್ನು ಬಾಗಿಲ ಬಳಿ ಕಿಟಿಕಿಯ ಬಳಿ ಇಡುವುದರಿಂದ ನೊಣಗಳು ಬರುವುದಿಲ್ಲ ಈ ಸಿಪ್ಪೆಗಳನ್ನು ಒಣಗುವವರೆಗೂ ಕೂಡ ಇಡಬಹುದು. ಒಂದು ವೇಳೆ ಕಿತ್ತಳೆ ಹಣ್ಣು ಸಿಗದಿದ್ದರೆ ನಿಂಬೆ ಹಣ್ಣಿಗೂ ಕೂಡ ಈ ರೀತಿ ಲವಂಗವನ್ನು ಚುಚ್ಚಿ ಇಡಬಹುದು ಅಥವಾ ನಿಂಬೆ ಹಣ್ಣನ್ನು ಎರಡು ಹೋಳಾಗಿ ಕತ್ತರಿಸಿ ಅದಕ್ಕೆ ಲವಂಗವನ್ನು ಹಚ್ಚಿ ಇಡಬಹುದು.

Advertisement

 

Advertisement

Advertisement

ನೊಣಗಳ ಸಂಖ್ಯೆ ತುಂಬಾ ಜಾಸ್ತಿ ಅಂದರೆ ಒಂದು ಪ್ಲೇಟ್ ಅಲ್ಲಿ ಲವಂಗ ಚುಚ್ಚಿದ ನಿಂಬೆ ಹಣ್ಣನ್ನು ಇಟ್ಟು ಸುತ್ತಲೂ ದಾಲ್ಚಿನ್ನಿ ಅಥವಾ ಚೆಕ್ಕೆ ಪುಡಿಯನ್ನು ಉದುರಿಸಿ .ಈ ತಟ್ಟೆಯನ್ನು ಕಿಟಕಿ ಹತ್ತಿರ ಮತ್ತು ಬಾಗಿಲ ಬಳಿ ಇಡಬೇಕು.ದಿನಕ್ಕೆ ಒಂದು ಬಾರಿ ಈ ನಿಂಬೆಹಣ್ಣನ್ನು ಬದಲಾಯಿಸಿ ಇಡಬೇಕು .ಮತ್ತೊಂದು ಬಹಳ ಸುಲಭವಾದ ಮತ್ತು ಚೀಪ್ ಆದ  ವಿಧಾನವೆಂದರೆ ಅದು ನೀರು. ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ನೀರನ್ನು ಹಾಕಿ ಅದನ್ನು ಕಟ್ಟಿ ಕಿಟಕಿ ಮತ್ತು ಬಾಗಿಲು ಬಳಿ ಅದನ್ನು ನೇತು ಹಾಕಬೇಕು .ಇದರಿಂದ ನೊಣಗಳು ಮನೆಗಳು ಮನೆಯ ಒಳಗೆ ಬರುವುದಿಲ್ಲ.ಏಕೆಂದರೆ ನೊಣಗಳ ದೃಷ್ಟಿ ಮಂದವಾಗಿರುತ್ತದೆ. ನೀರು ಸೂರ್ಯನ ಬೆಳಕಿಗೆ ರಿಫ್ಲೆಕ್ಟ್ ಆಗುವುದರಿಂದ ನೊಣಗಳ ದಿಕ್ಕು ತಪ್ಪುತ್ತದೆ. ಇದರಿಂದ ನೊಣಗಳು ಮನೆಯ ಒಳಗೆ  ಬರುವುದಿಲ್ಲ .

Advertisement

ಇನ್ನು ಈ ರೀತಿ ನೇತ ಹಾಕಿದ್ದ ಪ್ಲಾಸ್ಟಿಕ್ ಅವರಿಗೆ ಸ್ವಲ್ಪ ನೀಮ್ ಆಯಿಲ್ ಅಥವಾ ಬೇವಿನ ಎಣ್ಣೆಯನ್ನು ಸ್ವಲ್ಪ ಹಚ್ಚಿ ಇಟ್ಟರೆ ಅದರ ವಾಸನೆಗೆ ನೊಣಗಳು ಬರುವುದಿಲ್ಲ. ಗಿಡಗಳ ಪಾಟ್ ನಲ್ಲಿ ನೀರು ಹಾಕಿದಾಗ ಆ ನೀರಿ ನೀರಿಗೆ ಒಂದು ಸ್ಪೂನ್  ಬೇವಿನ ಎಣ್ಣೆಯನ್ನು ಹಾಕುವುದರಿಂದ ನೊಣಗಳು ಮನೆಯ ಒಳಗೆ ಬರುವುದಿಲ್ಲ .ಒಂದು ಸ್ಪೆ ಬಾಟಲಿಗೆ ನೀರನ್ನು ತುಂಬಿಸಿ ಅದಕ್ಕೆ ಒಂದು ಸ್ಪೂನ್ನಷ್ಟು ಬೇವಿನ ಎಣ್ಣೆಯನ್ನು ಹಾಕಿ ನೊಣಗಳು ಬರುವಂತಹ ಕಿಟಕಿ ಬಾಗಿಲ ಬಳಿ ಸ್ಪ್ರೇ ಮಾಡಿದರೆ ನೊಣಗಳು  ಮನೆಯ ಒಳಗೆ ಬರುವುದಿಲ್ಲ .ನೊಣಗಳನ್ನು ಹೋಗಲಾಡಿಸಲು ಮತ್ತೊಂದು  ವಿಧಾನವೆಂದರೆ  ಒಂದು ಸ್ಪ್ರೇ ಬಾಟಲ್ ನಲ್ಲಿ ನೀರನ್ನು ತುಂಬಿಸಿ ಅದಕ್ಕೆ ಒಂದು ಸ್ಪೂನ್ನಷ್ಟು ಅಚ್ಚಕಾರದ ಪುಡಿಯನ್ನು ಹಾಕಿ ಅದನ್ನು  ಸ್ಪ್ರೇ ಮಾಡುವುದರಿಂದ ನೊಣಗಳು ಸಾಯುತ್ತವೆ .

 

ಈ ವಿಧಾನವನ್ನು ಅನುಸರಿಸುವಾಗ ಸ್ವಲ್ಪ ಹುಷಾರಾಗಿರುವುದು ಒಳ್ಳೆಯದು .ಮತ್ತೆ ಇನ್ನೊಂದು ಸುಲಭವಾದ ವಿಧಾನವೆಂದರೆ ಮನೆಯಲ್ಲಿ ಇರುವಂತಹ ಕರ್ಪೂರವನ್ನು ತೆಗೆದುಕೊಂಡು ಅದಕ್ಕೆ ಬೆಂಕಿ ಬೆಂಕಿಯನ್ನು ಹಚ್ಚಿ ತಕ್ಷಣ ಹಾರಿಸಬೇಕು ಆಗ ಆ ಕರ್ಪೂರದಿಂದ ಸುಗಂಧಿತ ವಾಸನೆ ಬರುತ್ತದೆ ಈ ವಾಸನೆ ನೊಣಗಳಿಗೆ ಆಗುವುದಿಲ್ಲ ಇದನ್ನು ಕಿಟಕಿ ಬಾಗಿಲುಗಳ ಬಳಿ ಇಡುವುದರಿಂದ ನೊಣಗಳು ಮನೆಯ ಒಳಗೆ ಬರುವುದಿಲ್ಲ.ಮತ್ತೆ ಕಿಟಕಿಗಳಿಗೆ ಮಸ್ಕಿಟೊ ನೆಟ್ ಗಳನ್ನು ಕೂಡ ಹಾಕುವುದರಿಂದ ನೊಣಗಳು ಮನೆಯ ಒಳಗೆ ಬರುವುದನ್ನು ತಡೆಯಬಹುದು .ಈ ಎಲ್ಲ ವಿಧಾನಗಳಿಂದ ನೊಣಗಳು ಮನೆಯ ಒಳಗೆ ಬರುವುದನ್ನು ನಾವು ತಡೆಯಬಹುದು .

Advertisement
Share this on...