ತಿಂಡಿಗಳನ್ನು ಮಾಡಿಕೊಂಡು ತಿನ್ನಿ: ಸೋಷಿಯಲ್ ಮೀಡಿಯಾದಲ್ಲಿ ಅಪ್​​​​ಲೋಡ್ ಮಾಡಬೇಡಿ ಅಂತ ಖುಷ್ಬೂ ಕಿಡಿಕಾರಿದ್ದೇಕೆ ಗೊತ್ತಾ.?

in News 48 views

ಭಾರತೀಯರು ಹಿಂದೆಂದೂ ಅನುಭವಿಸದ ಸ್ಥಿತಿಯಲ್ಲಿದ್ದಾರೆ. ಬಂದ್ ಇದ್ದಾಗ ಮಾತ್ರ ಕೇವಲ ಒಂದು ದಿನ ಮನೆಯೊಳಗೆ ಕೂರುತ್ತಿದ್ದ ಜನರು ಈಗ ಕೊರೊನಾ ಲಾಕ್​​ಡೌನ್ ಕಾರಣದಿಂದಾಗಿ ತಿಂಗಳುಗಟ್ಟಲೆ ಕೆಲಸ ಇಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಈಗಾಗಲೇ ಭಾರತದಲ್ಲಿ 21 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದು 681 ಮಂದಿ ಸಾವನ್ನಪ್ಪದ್ದಾರೆ. ಇನ್ನು ಕರ್ನಾಟಕದಲ್ಲಿ 443 ಕೊರೊನಾ ಪಾಸಿಟಿವ್ ಕೇಸ್ ವರದಿಯಾಗಿದ್ದು 17 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಮನೆಯಿಂದ ಹೊರ ಬರದೆ ಸೇಫ್ ಇರುವುದು ಉತ್ತಮ.

Advertisement

 

Advertisement

Advertisement

 

Advertisement

ಇನ್ನು ಜನರಿಗೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ. ಎಷ್ಟು ಹೊತ್ತು ಅಂತ ಟಿವಿ ನೋಡಲು ಸಾಧ್ಯ…? ಎಷ್ಟು ಹೊತ್ತು ಗೇಮ್ಸ್ ಆಡಲು ಸಾಧ್ಯ..? ಆದ್ದರಿಂದ ಕೆಲವರು ವಿವಿಧ ರೆಸಿಪಿಗಳನ್ನು ಟ್ರೈ ಮಾಡುತ್ತಿದ್ದಾರೆ. ಲಾಕ್​ಡೌನ್​​​ಗೂ ಮುನ್ನ ಸಂಜೆ ಆದರೆ ಸಾಕು ಮಸಾಲೆಪೂರಿ, ಪಾನಿ ಪೂರಿ, ಗೋಬಿ ಮಂಚೂರಿ, ಪಾವ್​ಬಾಜಿ ಎಂದು ಚಾಟ್ಸ್ ತಿನ್ನಲು ಹೊರಗೆ ಹೋಗುತ್ತಿದ್ದ ಜನರಿಗೆ ಈಗ ಬಾಯಿ ಕಟ್ಟಿದಂತಾಗಿದೆ. ಆದ್ದರಿಂದ ಇವೆಲ್ಲಾ ರೆಸಿಪಿಗಳನ್ನು ಮನೆಯಲ್ಲೇ ಮಾಡುತ್ತಿದ್ದಾರೆ. ಇದರೊಂದಿಗೆ ಇನ್ನೂ ವಿವಿಧ ತಿಂಡಿಗಳನ್ನು ಮಾಡಿ ಅದನ್ನು ಪ್ಲೇಟ್​ನಲ್ಲಿ ಗಾರ್ನಿಶ್ ಮಾಡಿ ಫೋಟೋ ಕ್ಲಿಕ್ ಮಾಡಿ ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡುತ್ತಿದ್ದಾರೆ.

 

 

ಜನರ ಈ ವರ್ತನೆಗೆ ಇತ್ತೀಚೆಗಷ್ಟೇ ಬಾಲಿವುಡ್​ ಕೊರಿಯೋಗ್ರಾಫರ್ ಫರ್ಹಾ ಖಾನ್ ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಫೂ ಕೂಡಾ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಊಟ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಲಾಕ್​ಡೌನ್​​ನಿಂದ ದುಡಿಮೆ ಇಲ್ಲದೆ, ಕೂಲಿ ಸಿಗದೆ, ಒಂದು ಹೊತ್ತಿನ ಊಟಕ್ಕಾಗಿ ಕೂಡಾ ಪರದಾಡುತ್ತಿದ್ದಾರೆ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ನೀವು ವಿವಿಧ ಬಗೆಯ ತಿಂಡಿಗಳನ್ನು ಹೀಗೆ ಎಲ್ಲರಿಗೂ ತೋರಿಸುವ ಅವಶ್ಯಕತೆ ಇಲ್ಲ.

 

ನಿಮಗೆ ಬೇಕಾಗಿದ್ದನ್ನು ಮನೆಯಲ್ಲಿ ಮಾಡಿಕೊಂಡು ಕುಟುಂಬದವರೊಂದಿಗೆ ತಿಂದು ಎಂಜಾಯ್ ಮಾಡಿ. ಆದರೆ ಯಾವುದೇ ಕಾರಣಕ್ಕೂ ಎಲ್ಲರಿಗೂ ತೋರಿಸಿಕೊಂಡು ತಿನ್ನಬೇಡಿ, ಸಾಧ್ಯವಾದರೆ ಅನ್ನವಿಲ್ಲದೆ ಪರದಾಡುತ್ತಿರುವವರಿಗೆ ಊಟ ನೀಡಿ ಎಂದು ಖುಷ್ಬೂ ನೆಟಿಜನ್ಸ್​​​​​ಗೆ ಕಿವಿಮಾತು ಹೇಳಿದ್ದಾರೆ.

 

 

ತಮಿಳು ನಟಿ ಖುಷ್ಬೂ ತೆಲುಗು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲ ಖುಷ್ಬೂ ಸುಂದರ್ ರಾಜಕೀಯದಲ್ಲಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ಹೊಸ ಚಿತ್ರದಲ್ಲಿ ಖುಷ್ಬೂ ರಜನಿ ಜೊತೆಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ಖುಷ್ಬೂ ಸಿನಿಮಾ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಅಭಿಮಾನಿಗಳೊಂದಿಗೆ ಚರ್ಚಿಸುತ್ತಿರುತ್ತಾರೆ.

Advertisement
Share this on...