ಕೋಳಿಗಳು ಇಟ್ಟಿದ್ದ ಮೊಟ್ಟೆಗಳಲ್ಲಿನ  ಭಂಡಾರ ಹಳದಿ ಬದಲು ಹಸಿರು ! ಆಶ್ಚರ್ಯವೆನಿಸಿದರೂ ಸತ್ಯ …

in ಕನ್ನಡ ಮಾಹಿತಿ 196 views

ನಾವೆಲ್ಲರೂ ಸಾಮಾನ್ಯವಾಗಿ ಚಿಕ್ಕ ವಯಸ್ಸಿನಿಂದಲೂ ಬಣ್ಣಬಣ್ಣದ ಕೋಳಿ ಮರಿಗಳನ್ನು  ನೋಡಿರುತ್ತೇವೆ.  ಅಲ್ಲದೇ  ಬಣ್ಣ ಬಣ್ಣದ ಮೊಟ್ಟೆಗಳನ್ನು ಕೂಡ ನೋಡಿರುತ್ತೇವೆ. ಸಾಮಾನ್ಯವಾಗಿ ಮೊಟ್ಟೆಯ ಒಳಗಡೆ ಭಂಡಾರ ಹಳದಿ ಬಣ್ಣಕ್ಕೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೇರಳದ ಕೋಳಿ ಫಾರಂ ಒಂದರಲ್ಲಿ ಹಸಿರು ಭಂಡಾರವಿರುವ ಮೊಟ್ಟೆಗಳನ್ನು ಕೋಳಿಗಳು ಇಟ್ಟಿವೆ. ಈ ವಿಚಾರ ಆಶ್ಚರ್ಯವೆನಿಸಿದರೂ  ಇದು ಸತ್ಯ.

Advertisement

 

Advertisement

Advertisement

ಕೇರಳದ ಮಲಪ್ಪುರಂನ  ಎಕೆ  ಶಹಿಬುದ್ದೀನ್ ಎಂಬವರಿಗೆ ಸೇರಿದ ಕೋಳಿ ಫಾರಂನಲ್ಲಿ ಕೋಳಿಗಳು ಇಟ್ಟಿದ್ದ ಮೊಟ್ಟೆಗಳಲ್ಲಿನ  ಭಂಡಾರ ಹಳದಿ ಬದಲು ಹಸಿರಾಗಿ ರುವುದನ್ನು ಕಂಡು ಅಚ್ಚರಿಗೊಂಡ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು  ಪೋಸ್ಟ್ ಮಾಡಿದ್ದಾರೆ. ಸುಮಾರು ಕಳೆದ ಒಂಬತ್ತು ತಿಂಗಳುಗಳಿಂದ ಈ ಕೋಳಿ ಫಾರಂನಲ್ಲಿ ಈ ರೀತಿ ನಡೆಯುತ್ತಿದೆ. ಈ ಫೋಟೊ ಮತ್ತು ವಿಡಿಯೊಗಳನ್ನು ನೋಡಿದ ಪಶು ವೈದ್ಯಕೀಯ ಮತ್ತು ಪ್ರಾಣಿ ತಜ್ಞರು  ಕೋಳಿ ಫಾರಂಗೆ ಭೇಟಿ ನೀಡಿ ಅಲ್ಲಿನ ಒಂದು ಕೋಳಿ ಮತ್ತು ಹಲವಾರು ಮೊಟ್ಟೆಗಳನ್ನು ಅಧ್ಯಯನ ನಡೆಸಲು ಸಂಗ್ರಹಿಸಿದರು.

Advertisement

 

 

ಕೋಳಿಗಳಿಗೆ ನೀಡಿರುವ ಆಹಾರವೇ ಇದಕ್ಕೆ ಕಾರಣವಿರಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  ಅದರಂತೆ ತಮ್ಮ ಪಶು ವಿಶ್ವವಿದ್ಯಾಲಯದ ಆಹಾರವನ್ನು ನೀಡಿ ಆಹಾರಗಳನ್ನೇ ಕೋಳಿಗಳಿಗೆ ನೀಡುವಂತೆ ಹೇಳಿದರು . ಆ ನಂತರ ಮೊಟ್ಟೆಯ ಒಳಗಿನ ಹಸಿರು ಬಣ್ಣವು ಕಡಿಮೆಯಾಗಿ ಹಳದಿ ಬಣ್ಣಕ್ಕೆ ತಿರುಗುತ್ತಾ ಬಂತು. ಆದರೆ ಶಹಿಬುದ್ದೀನ್ ಅವರು ನಿರ್ದಿಷ್ಟವಾಗಿ  ಕೋಳಿಗಳಿಗೆ ನಾವು ಬೇರೇನೂ ನೀಡಿಲ್ಲ ಎಂದು ಹೇಳಿದ್ದಾರೆ. ನಂತರ ನಿರಂತರವಾಗಿ ಪರೀಕ್ಷೆ ನಡೆಸಿದ್ದರ ಫಲವಾಗಿ ಈ ವಿಚಾರ ತಿಳಿಯಿತು.

ಕೇರಳದ ಕೋಳಿ ಫಾರಂನ ಮುಂದೆ ಇರುವ ಅಂಗಳದಲ್ಲಿ ಬೆಳೆದ ನೈಸರ್ಗಿಕ ಗಿಡಮೂಲಿಕೆ  ಕುರುಂ ತೋಟ್ಟಿ ಎಂಬ ಸಸ್ಯಗಳನ್ನು ಸೇವಿಸಿದ್ದರಿಂದ ಈ ರೀತಿ ಬಣ್ಣ ಬದಲಾಗಿರಬಹುದು  ಎಂದು ಪೌಲ್ಟ್ರಿ ಸೈನ್ಸ್ ಡಿಪಾರ್ಟ್ಮೆಂಟ್ನ ಅಸಿಸ್ಟೆಂಟ್ ಪ್ರೊಫೆಸರ್ ಡಾಕ್ಟರ್ ಶಿವಲಿಂಗಂ ಅವರು ಹೇಳಿದ್ದಾರೆ

Advertisement
Share this on...