ನವರಾತ್ರಿಯ ಎಂಟನೆಯ ದಿನ : ಮಹಾಗೌರಿಯ ಸ್ವರೂಪ ದಲ್ಲಿ ಪೂಜಿಸಲಾಗುತ್ತದೆ

in ಜ್ಯೋತಿಷ್ಯ 583 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ ಪಕ್ಷದ ಅಷ್ಟಮಿ ತಿಥಿ, ಶ್ರವಣ ನಕ್ಷತ್ರ, ಧೃತಿ ಯೋಗ, ಭವ ಕರಣ, ಅಕ್ಟೋಬರ್ 24   ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.
ಇಂದು ದೇವಿಯ ಎಂಟನೆಯ ದಿನ. ಮಹಾಗೌರಿಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.  ಇಂದು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ಉತ್ಸವ ಮಾಡುತ್ತಿರುತ್ತಾರೆ. ಅಮ್ಮನವರನ್ನು ಪಟ್ಟಕ್ಕೆ ಕೂರಿಸಿ ಅಲಂಕರಿಸಿರುತ್ತಾರೆ.  ಅತಿ ವಿಶೇಷವಾಗಿ  ಹೋಮ, ಹವನ, ಯಜ್ಞಗಳನ್ನು ಮಾಡಲಾಗುತ್ತದೆ. ಸಮಸ್ತ ಲೋಕವೂ ತಂಪಾಗಿರಲಿ ಎಂದು ಯಜ್ಞ ಯಾಗಾದಿಗಳನ್ನು ಮಾಡಲಾಗುತ್ತದೆ ಆ ಯಜ್ಞಯಾಗಾದಿಗಳಲ್ಲಿ ಪಾಲ್ಗೊಂಡು ಹವನಕ್ಕೆ ಪಾಯಸ, ಎಳ್ಳು, ಬೆಣ್ಣೆ,  ಅರಿಶಿನ ಕುಂಕುಮ, ತುಪ್ಪ, ಬಾಳೆಹಣ್ಣು, ಕೊಬ್ಬರಿ, ಗಂಧ ಇದರಲ್ಲಿ ಯಾವುದಾದರೂ ಒಂದನ್ನಾದರೂ ಸಮರ್ಪಣೆ ಮಾಡಿ. ಇಂದು ಅಮ್ಮನವರಿಗೆ ಶಕ್ತಿ ತುಂಬಿಸುವ ಸಲುವಾಗಿ ಯಜ್ಞ ಯಾಗಾದಿಗಳನ್ನು  ಪೂಜೆ, ಅಭಿಷೇಕ,  ಅಲಂಕಾರ, ನೈವೇದ್ಯಗಳನ್ನು ಮಾಡಲಾಗುತ್ತದೆ. ನಮಗೆ ಇರುವ ಸಂಕಷ್ಟಗಳನ್ನು ಪಾರುಮಾಡಲು ಅಮ್ಮನವರಿಗೆ ಯಜ್ಞ ಯಾಗಾದಿಗಳನ್ನು ಮಾಡಿ ಶಕ್ತಿಯನ್ನ ತುಂಬಿಸುತ್ತೇವೆ. ಜಗನ್ಮಾತೆ ಶಕ್ತಿ ಇದ್ದರೆ ನಮ್ಮ ಶಕ್ತಿ ಬಂದಂತೆ.  ನಮ್ಮ ಜೀವನದಲ್ಲಿ ಆಗುವಂತಹ ಕೆ’ಡುಕುಗಳನ್ನು ದೂರಮಾಡಿಕೊಳ್ಳಲು ಹೋಮ ಯಜ್ಞ ಯಾಗಾದಿಗಳಲ್ಲಿ ಪಾಲ್ಗೊಳ್ಳಿ ಹವಿಸ್ಸನ್ನು ಅರ್ಪಿಸಿ. ಇದರಿಂದ ಕೆ’ಡುಕಿಗೆ ರಕ್ಷಣಾ ಕವಚ ದೊರೆಯುತ್ತದೆ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ಚಂದ್ರನ ಸಾರದಲ್ಲಿ  ಪುನರ್ಪು ದೋಷದಲ್ಲಿ ಕುಳಿತಿರುವುದರಿಂದ  ಹುಳಿಯ ಪ್ರಭಾವ, ಪರಿಶ್ರಮದ ಛಾಯೆ ಇರುತ್ತದೆ. ವಾರಾಂತ್ಯವಾಗಿರುವುದಿಲ್ಲ ಒತ್ತಡದ ದಿನವಾಗಿರುತ್ತದೆ.

Advertisement

ವೃಷಭ ರಾಶಿ : ನಿಮಗೆ ಚಂದ್ರನಿಗೂ ಅಷ್ಟಕಷ್ಟೆ, ಭಾಗ್ಯ ಸ್ಥಾನದಲ್ಲಿರುವ ಚಂದ್ರ ಭಾಗ್ಯವನ್ನು ಅನುಭವಿಸಲಾಗದ ಕತ್ತಲೆಯನ್ನು ತಂದಿಡುವಂತಹ ದಿನ. ಆದ್ದರಿಂದ ದೇವಿ ದೇವಸ್ಥಾನಕ್ಕೆ ಹೋಗಿ ಪೂಜೆ ಆರಾಧನೆಯಲ್ಲಿ ಪಾಲ್ಗೊಳ್ಳಿ , ನಿವಾರಣೆಯಾಗುತ್ತದೆ.

ಮಿಥುನ ರಾಶಿ : ಚಂದ್ರ ಕೆಟ್ಟಸ್ಟು ನಿಮಗೆ ಬಲ,  ಶುಭ ಸುದ್ದಿಯೊಂದಿದೆ. ಮಾತು ಮನಸ್ಸು ಏಕಾಗ್ರತೆಯಿಂದ ಇರುವುದಿಲ್ಲ ಜಾಗ್ರತೆ.

ಕರ್ಕಾಟಕ ರಾಶಿ : ಚೆನ್ನಾಗಿದೆ ಪರಿಶ್ರಮದಿಂದ ವೃತ್ತಿಯನ್ನು ಪಡೆಯುವಂತಹ ಸುಯೋಗ ನಿಮಗಿದೆ. ಗಡಿಬಿಡಿ ಏನೂ ಆಗುವುದಿಲ್ಲ ಪರಿಶ್ರಮ ಇರುತ್ತದೆ, ಪರಿಶ್ರಮಕ್ಕೆ ತಕ್ಕ ಫಲವನ್ನು ನೋಡುತ್ತೀರಾ.

ಸಿಂಹ ರಾಶಿ : ಸ್ವಲ್ಪ ಖರ್ಚು ವೆಚ್ಚಗಳ ದಿನವಾದರೂ ಒಳ್ಳೆಯದಕ್ಕೆ ಖರ್ಚಾಗುತ್ತದೆ. ಹತ್ತಿರದ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಅರ್ಚನೆ ಪೂಜೆ ಮಾಡಿಸಿ  5 ಜನರಿಗೆ ಪಾಯಸದ ಪ್ರಸಾದವನ್ನು ಕೊಟ್ಟು ಬನ್ನಿ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ : ಚೆನ್ನಾಗಿದೆ, ಆಕಸ್ಮಿಕವಾಗಿ ದೈವದರ್ಶನ’  ಗುರುದರ್ಶನ, ಭಾಗ್ಯಾಧಿಪತಿ ಪಂಚಮದಲ್ಲಿರುವುದರಿಂದ ಹಿಂದಿನ ಜನ್ಮದ ಪುಣ್ಯದ ಫಲ ಜೀವನಪರ್ಯಂತ ಸುಖವಾಗಿರುವಂತ ಶುಭ ಸುದ್ದಿಯೊಂದನ್ನು ಕೊಡುತ್ತದೆ. ಆದರೂ ಅದು ನಿಜವ ಎಂಬ ಅನುಮಾನ ಪಡುತ್ತೀರಾ.

ತುಲಾ ರಾಶಿ : ಉದ್ಯೋಗದಲ್ಲಿ ತೊಳಲಾಟ, ಗಡಿಬಿಡಿ, ಮಾಡಿಕೊಳ್ಳುವಂತಹ ದಿನ.  ಬುಧ ವಕ್ರವಾಗಿ ಇರುವುದರಿಂದ ಬುದ್ದಿ  ಮತ್ತು ಮನಸ್ಸಿನ ಮಾತಿನ ಗೊಂದಲದಲ್ಲಿ ತೊಳಲಾಡುತ್ತೀರ. ಅಮ್ಮನವರ ದೇವಸ್ಥಾನಕ್ಕೆ ಹೋಗಿ ಯಜ್ಞಕ್ಕೆ ಮೂವತ್ತು ಗ್ರಾಂ ಅಷ್ಟಾದರೂ ಬೆಲ್ಲವನ್ನ ಸಮರ್ಪಿಸಿ ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿ : ಚಂದ್ರ ಚೆನ್ನಾಗಿದ್ದಾನೆ, ಮಾತೃಕಾರಕ,  ಕೇತು ಕುಳಿತಿರುವುದರಿಂದ ಸ್ವಲ್ಪ ಹುಳಿಯಾದ ಪ್ರಭಾವವಿದ್ದರೂ, ಚಂದ್ರ ಚೆನ್ನಾಗಿ ಇರುವುದರಿಂದ ಶುಭ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಂತಹ ದಿನ. ತಂದೆ ತಾಯಿಗಳ ಸಹಾಯ, ತಂದೆತಾಯಿಗಳ ಸಮಾನರಾದವರ ಸಹಾಯ ದೊರೆಯುವಂತಹ ದಿನ.

ಧನಸ್ಸು ರಾಶಿ :  ಅಷ್ಟಮಾಧಿಪತಿ ಚಂದ್ರ ಕುಟುಂಬಸ್ಥಾನದಲ್ಲಿ ವೃತ್ತಿ ಸ್ಥಾನದಲ್ಲಿರುವುದರಿಂದ ಸ್ವಲ್ಪ ವೃತ್ತಿ ಮತ್ತು ಕುಟುಂಬಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಎಳೆದಾಟ ತೊಳಲಾಟ ವಿರುತ್ತದೆ. ಇಂದು ಅಮ್ಮನವರ ಕ್ಷೇತ್ರದಲ್ಲಿ 5 ಜನರಿಗೆ ಕಲ್ಲುಸಕ್ಕರೆಯನ್ನು ಪ್ರಸಾದವಾಗಿ ಹಂಚಿ ಒಳ್ಳೆಯದಾಗುತ್ತದೆ.

ಮಕರ ರಾಶಿ : ಯಾರೂ  ಹುಡುಕಿಕೊಂಡು ಸಹಾಯಕ್ಕೆ ಬರುತ್ತಾರೆ, ಅದರಲ್ಲಿ ಅಭಿವದ್ಧಿ ಕಾಣುವಂತಹ ದಿನ, ತೊಂದರೆ ಏನೂ ಇಲ್ಲ ತುಂಬಾ ಕಷ್ಟವಾದ ಕೆಲಸಗಳನ್ನು ನಿಭಾಯಿಸಿ ಕೊಂಡು ಹೋಗುವಂತಹ ಶಕ್ತಿಯಿದೆ.

ಕುಂಭ ರಾಶಿ : ಸ್ವಲ್ಪ ಖರ್ಚು ವೆಚ್ಚದ ದಿನ, ದೇವಿ ದರ್ಶನದ ದಿನ , ದೇವಿಯರ ಪೂಜೆಯ ದಿನ,ಆಕಸ್ಮಿಕವಾಗಿ ದೇವಿದರ್ಶನ, ಗುರುದರ್ಶನ, ತೀರ್ಥಕ್ಷೇತ್ರ, ನದಿ  ಕ್ಷೇತ್ರಗಳನ್ನು ನೋಡುವಂತಹ ಪ್ರಸಾದವನ್ನು ಸೇವಿಸುವಂತಹ ಶುಭ ದಿನ.

ಮೀನ ರಾಶಿ : ಮಾಡುವ ಸಕಲ ಕೆಲಸ ಕಾರ್ಯಗಳಲ್ಲೂ ವಿಶೇಷ ಪ್ರಗತಿ. ಅದರಲ್ಲೂ ಮಧು, ಮಾಂಸಾಹಾರ ಊಟ, ಫಿಶ್ ಹೋಟೆಲ್, ಮೀನುಗಾರಿಕೆ, ಮಾಂಸ ಮಾರಾಟ ಗಳಲ್ಲಿ ತೊಡಗಿಸಿಕೊಂಡಿರುವವರಿಗೆ ತಕ್ಕಮಟ್ಟಿಗೆ ಅನುಕೂಲವನ್ನು ನೋಡುವಂತಹ  ದಿನ.

All Rights reserved Namma  Kannada Entertainment.

Advertisement
Share this on...