ಸೀರೆ ಉಟ್ಟರೆ ಕಂಫರ್ಟಬಲ್ ಇರೊಲ್ಲ ಅನ್ನೋ ಹೆಣ್ಣು ಮಕ್ಕಳು ಒಮ್ಮೆ ಈ ವಿಡಿಯೋ ನೋಡಿ

in ಮನರಂಜನೆ 284 views

ಸೀರೆ, ಭಾರತೀಯ ಸಾಂಪ್ರದಾಯಿಕ ಉಡುಪು. ಹೆಣ್ಣು ಮಕ್ಕಳನ್ನು ಸೀರೆಯಲ್ಲಿ ನೋಡುವುದೇ ಎಂಥ ಚೆಂದ. ಸೀರೆ ಮುಂದೆ ಯಾವ ಜೀನ್ಸ್, ಕುರ್ತಾ, ಮಿಡ್ಡಿ ಏನೂ ಇಲ್ಲ ಬಿಡಿ. ಸೀರೆಗೆ ಇರುವ ಮಹತ್ವವೇ ಅಂತಾದ್ದು. ಇನ್ನು ಸೀರೆ ಉಟ್ಟರೆ ನಡೆಯುವುದು, ಕೆಲಸ ಮಾಡುವುದು ಕಷ್ಟ ಎಂಬ ಕಾರಣದಿಂದ ಕೆಲವು ಹೆಣ್ಣು ಮಕ್ಕಳು ಸೀರೆ ಉಡಲು ಹಿಂಜರಿಯುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣುಮಗಳು ಸೀರೆಯಲ್ಲಿ ಮಸ್ತ್​ ಡ್ಯಾನ್ಸ್ ಮಾಡಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಕೊಡಗಿನ ಯುವತಿಯೊಬ್ಬರು ಸುದೀಪ್​ ಅಭಿನಯದ ‘ಪೈಲ್ವಾನ್’ ಚಿತ್ರದ ಬಂದ ನೋಡು ಪೈಲ್ವಾನ್…. ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಮೂವರು ಯುವತಿಯರು ಸತೀಶ್ ನೀನಾಸಂ ಅಭಿನಯದ ‘ಅಯೋಗ್ಯ’ ಚಿತ್ರದ ಏನಮ್ಮಿ ಏನಮ್ಮಿ…ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಏಷ್ನಾ ಕುಟ್ಟಿ ಎಂಬ ಯುವತಿ ಸೀರೆಯಲ್ಲಿ ಮಾಡಿರುವ ಡ್ಯಾನ್ಸ್ ವಿಡಿಯೋ ಕೂಡಾ ವೈರಲ್ ಆಗಿದೆ.

Advertisement

Advertisement

ಸ್ಕೂಲ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತ ವಿಶೇಷ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳು ಹುಲಾ ಹೂಪ್​​​ ಡ್ಯಾನ್ಸ್ ಮಾಡುವುದನ್ನು ನೋಡುತ್ತೇವೆ. ಆದರೆ ಇದೀಗ ಹೂಪ್ ಡ್ಯಾನ್ಸ್ ಟ್ರೆಂಡ್ ಆಗಿ ಹೋಗಿದೆ. ಇನ್ನು ನಾವು ಡ್ಯಾನ್ಸ್ ಮಾಡುವಾಗ ಸುಲಭವಾಗಿ ಮೂಮೆಂಟ್ ಮಾಡಲು ಸರಿಹೊಂದುವ ಬಟ್ಟೆಗಳನ್ನು ಧರಿಸುತ್ತೇವೆ. ಆದರೆ ಏಷ್ನಾ ಕುಟ್ಟಿ ಸೀರೆ ಧರಿಸಿ ಮೈನಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ಹೂಪ್​​​ ಡ್ಯಾನ್ಸ್ ಮಾಡಿದ್ದಾರೆ. ಏಷ್ನಾ ಸೀರೆ ಧರಿಸಿ ಡ್ಯಾನ್ಸ್ ಮಾಡುತ್ತಿರುವುದು ಇದೇ ಮೊದಲಲ್ಲ, ಅವರ ಇನ್ಸ್ಟಾಗ್ರಾಮ್ ಖಾತೆ ನೋಡಿದರೆ ಸೀರೆ ಧರಿಸಿ ಡ್ಯಾನ್ಸ್ ಮಾಡಿರುವ ಬಹಳಷ್ಟು ವಿಡಿಯೋಗಳನ್ನು ನೋಡಬಹುದು. ಇವೆಲ್ಲಾ ಅಮ್ಮನ ಸೀರೆಗಳಂತೆ. ‘ಅಮ್ಮನ ಸೀರೆಗಳನ್ನು ಧರಿಸಿ ಡ್ಯಾನ್ಸ್ ಮಾಡುವುದೇ ಚೆಂದ’ ಎನ್ನುತ್ತಾರೆ ಈ ಯುವತಿ.

Advertisement

ಆಸಕ್ತರಿಗೆ ಕಳೆದ 5 ವರ್ಷಗಳಿಂದ ಏಷ್ನಾ ಕುಟ್ಟಿ ಹುಲಾ ಹೂಪ್ ತರಬೇತಿ ನೀಡುತ್ತಿದ್ದಾರಂತೆ. ಕೊರೊನಾ ಲಾಕ್​​ಡೌನ್ ಆರಂಭವಾದಾಗಿನಿಂದ ಇಂದಿಗೂ ಕೂಡಾ ಏಷ್ನಾ ಆನ್​​​​​ಲೈನ್​​ನಲ್ಲೇ ಟ್ರೈನಿಂಗ್ ನೀಡುತ್ತಿದ್ದಾರೆ ಎನ್ನಲಾಗಿದೆ. ಏಷ್ನಾ ಅವರ ಈ ವಿಡಿಯೋ ಇಂಟರ್​​​ನೆಟ್​​ನಲ್ಲಿ ಹರಿದಾಡುತ್ತಿದ್ದು ಸೆಲಬ್ರಿಟಿಗಳಾದ ರೇಖಾ ಭಾರಧ್ವಾಜ್, ಆನಂದ್ ಮಹಿಂದ್ರಾ ಹಾಗೂ ಇನ್ನಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಏಷ್ನಾಗೆ ಬಹಳ ಖುಷಿ ಆಗಿದೆಯಂತೆ.

Advertisement

 

View this post on Instagram

 

Can one really flex to a song like Genda Phool which is all heart tho? This post is primarily to share with you why I put out #sareeflow as a hashtag. It had been on my mind for months, and the intention was not to create the most sensual saree videos, but to feel so comfortable and happy wearing it without the pressure of being a delicate lady. That aside, I wanted to also spotlight Indian hoopers because we’re so few in number but growing so fast. Theres so much diversity in our cultures and even in our sarees that I hoped this trend would add a very unique twist to a global art form. Or visa versa- that you’d want to get yourself a hoop because you secretly want to dress up to goof around. Either case, I think it’s fantastic that you’re doing it anyway and sharing it ❤️ . . . Wearing @pumaindia + mother’s saree obv✨ . . #hoopersofinstagram #hooplife #hoopdance #hoop #hoopersofig #hooplove #flowarts #hoopflow #hulahoop #hulahooping #infinitecirclescommunity #girlswhohoop #hooper #hooping

A post shared by Eshna Kutty (@eshnakutty) on

ತಮ್ಮ ವಿಡಿಯೋ ಜೊತೆಗೆ ಏಷ್ನಾ ಕುಟ್ಟಿ ‘ಹ್ಯಾಷ್​​ಟ್ಯಾಗ್ ಸ್ಯಾರಿ ಫ್ಲೋ’ ಎಂದು ಬರೆದುಕೊಂಡಿದ್ದು “ನಾನು ನನ್ನ ಡ್ಯಾನ್ಸನ್ನು ಪ್ರಮೋಟ್ ಮಾಡಲು ಹೀಗೆ ಮಾಡುತ್ತಿಲ್ಲ. ಬದಲಿಗೆ ನಾವು ಸೀರೆಯನ್ನು ಉಟ್ಟು ಕೂಡಾ ಎಷ್ಟು ಕಂಫರ್ಟಬಲ್ ಆಗಿರಬಹುದು ಎಂಬುದನ್ನು ತೋರಿಸುವುದು ನನ್ನ ಉದ್ದೇಶ” ಎಂದು ಬರೆದುಕೊಂಡಿದ್ದಾರೆ. ಖ್ಯಾತ ಬಾಲಿವುಡ್ ನಟಿ, ನಿರೂಪಕಿ ಮಂದಿರಾ ಬೇಡಿ ಕೂಡಾ ಒಮ್ಮೆ ಸೀರೆ ಉಟ್ಟು ಪುಷ್​ ಅಪ್ಸ್ ಮಾಡಿ ತೋರಿಸಿದ್ದರು. ಒಟ್ಟಿನಲ್ಲಿ ಸೀರೆ ಹಾಕಿದರೆ ಅಲುಗಾಡುವುದೂ ಕಷ್ಟ ಎಂದು ತಿಳಿದುಕೊಂಡಿರುವ ಹೆಣ್ಣು ಮಕ್ಕಳು ಈ ವಿಡಿಯೋ ನೋಡಿದರೆ ಬಹುಶ: ಇನ್ಮುಂದೆ ಸೀರೆಯನ್ನು ಇಷ್ಟಪಡುವುದರಲ್ಲಿ ನೋ ಡೌಟ್.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...