ಏಸೂರು ಕೊಟ್ಟರು ಈಸೂರು ಕೊಡೆವು…

in ಕನ್ನಡ ಮಾಹಿತಿ 537 views

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು .ಇದು ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಠಿಮಾಡಿತು.ಈ ಈಸೂರು ದೇಶದಲ್ಲಿ ಸ್ವತಂತ್ರವೆಂದು ಘೋಷಿಸಲ್ಪಟ್ಟ ಮೊದಲ ಗ್ರಾಮ ಎಂಬ ಹಿನ್ನೆಲೆ ಇದೆ. ಎಲ್ಲರಿಗೂ ತಿಳಿದ ಹಾಗೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು.ಬ್ರಿಟಿಷರು ಜನರಿಂದ ಭೂಕಂದಾಯವನ್ನು ವಸೂಲಿ ಮಾಡುತ್ತಿದ್ದರು ಅದೇ ರೀತಿ ಈಸೂರು ಗಾಮವು ಅವರ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರ ವಿರುದ್ಧ 1942 ರಲ್ಲಿ ಈಸೂರಿನ ಗ್ರಾಮದ ಜನರು ಆಕ್ರೋಶಗೊಂಡರು ಕಾರಣ 1942ರಲ್ಲಿ ನೈಸರ್ಗಿಕ ವಿಪತ್ತಿನಿಂದಾಗಿ ಆ ವರ್ಷ ಕೃಷಿ ಇಳುವರಿ ಕಡಿಮೆಯಾಗಿದ್ದರಿಂದ ಅಲ್ಲಿನ ಜನರು ಭೂಕಂದಾಯವನ್ನು ನಿರಾಕರಿಸಿದರು.ಜನರು ನಿರಾಕರಿಸಿದಾಗ ಬ್ರಿಟಿಷರು ಅವರನ್ನು ಹೆದರಿಸಿದರು. ಅದಕ್ಕೆ ಪ್ರತಿಯಾಗಿ ಅಲ್ಲಿನ ಜನರು ಬ್ರಿಟಿಷ್ ಅಧಿಕಾರಿಗಳನ್ನು ಈಸೂರು ಪ್ರವೇಶಿಸುವುದನ್ನು ತಡೆದು ತ್ರಿವರ್ಣ ಧ್ವಜವನ್ನು ವೀರಭದ್ರೇಶ್ವರ ದೇವಸ್ಥಾನದ ಮೇಲಿಂದ ಸೆಪ್ಟೆಂಬರ್ 29,1942 ರಂದು ಹಾರಿಸಿ ಆ ಗ್ರಾಮವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತ ಎಂದು ಘೋಷಿಸಿದರು.

Advertisement

Advertisement

 

Advertisement

 

Advertisement

ಕೆಲವು ದಿನಗಳ ನಂತರ ಆ ಗ್ರಾಮಕ್ಕೆ ಬ್ರಿಟಿಷ್ ಸರ್ಕಾರ ದೊಡ್ಡ ಪೋಲೀಸ್ ಪಡೆಯನ್ನು ಕಳುಹಿಸಿ ಆ ಗ್ರಾಮವನ್ನು ವಶಪಡಿಸಿಕೊಳ್ಳಲು ಪುನಃ ಪ್ರಯತ್ನಿಸಿದಾಗ ದೊಡ್ಡ ಧಂಗೆ ಆಯಿತು. ಸಾವಿರಾರು ಸಾವು-ನೋವುಗಳಾದವು. ಆ ಧಂಗೆಯಲ್ಲಿ ಅಲ್ಲಿನ ಜನರಿಗೆ ಸಾವು-ನೋವು ಆದರೂ ಅಲ್ಲಿನ ಜನರು “ಏಸೂರು ಕೊಟ್ಟರು ಈಸೂರು ಬಿಡೆವು” ಎಂದು ಹೇಳಿದರು. ಈ ಗ್ರಾಮ ಪ್ರವೇಶವಾಗುತ್ತಿದ್ದಂತೆ ಒಂದು ದೊಡ್ಡ ಧ್ವಜ ಸ್ತಂಭವಿದೆ. ಆ ಸ್ತಂಭದ ಮೇಲೆ ನೋಡಿದರೆ ಏಸೂರು ಕೊಟ್ಟರೂ ಈಸೂರು ಬಿಡೆವು ಎಂಬ ಘೋಷಣೆ ಇದೆ ಈ ಘೋಷಣೆ ಇಂದಿನದ್ದಲ್ಲ ಅಂದು ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತ ರೈತರ ಘೋಷಣೆ.ಅದರ ಪಕ್ಕದಲ್ಲಿ ಒಂದು ಸ್ಮಾರಕವಿದೆ ಆ ಸ್ಮಾರಕದ ಎದುರು ಸ್ವಾತಂತ್ರ್ಯ ಸಂಭ್ರಮಾಚರಣೆ ಬಿಟ್ಟರೆ ಬೇರೇನೂ ಕಾಣುವುದಿಲ್ಲ.

 

ಆದುನೀಕರಣ ಆಗಿ ನೆನಪುಗಳು ಮರುಕಳುಹಿಸುವುದಿಲ್ಲ ಆದರೆ ಇಂದಿಗೂ ಮಹಾತ್ಮ ಗಾಂಧೀಜಿ ವೃತ್ತ ಊರ ಮದ್ಯೆ ಇದೆ. ರಾಷ್ಟ್ರಕವಿಯಾದ ಜಿ.ಎಸ್ ಶಿವರುದ್ರಪ್ಪನವರ ಹುಟ್ಟೂರು ಈಸೂರು ಎಂಬುದು ಸಂತಸದ ವಿಷಯ. ಈಸೂರು ಸ್ವಾತಂತ್ರ್ಯ ಹೋರಾಟದ ಭಾಗವಾಗಿದೆ ಅನ್ನುವುದು ಒಂದು ಕಡೆಯಾದರೆ ಈಸೂರು ಇರುವುದು ನಮ್ಮ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಎನ್ನುವುದು ನಮಗೆ ಹೆಮ್ಮೆ..

– ಶರತ್ ಕುಮಾರ್ ಟಿ
ಸಾರಗಾನ ಜೆಡ್ಡು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...