ಕನ್ನಡ ಚಿತ್ರರಂಗಕ್ಕೆ ಚಿನ್ನದಂತ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕರು ಎಲ್ಲಿ ಹೋದ್ರು…?

in ಸಿನಿಮಾ 255 views

ನಿರ್ದೇಶಕ, ಒಂದು ಸಿನಿಮಾದ ಬೆನ್ನೆಲುಬು. ಸಿನಿಮಾ ಮಾಡಬೇಕೆಂಬ ವಿಚಾರದಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಥಿಯೇಟರ್​​​ನಲ್ಲಿ ಪ್ರದರ್ಶನ ಕಾಣುವವರೆಗೂ ನಿರ್ದೇಶಕನ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಈಗ ಸ್ಟಾರ್​​​​ಗಳಾಗಿ ಹೆಸರು ಮಾಡಿರುವ ಎಷ್ಟೊ ನಟ-ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವುದು ಕೂಡಾ ನಿರ್ದೇಶಕರೇ. ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್​​ ಅಂಬರೀಶ್, ಆರತಿ ಹಾಗೂ ಇನ್ನಿತರ ಖ್ಯಾತ ನಟ ನಟಿಯರನ್ನು ಸ್ಯಾಂಡಲ್​​ವುಡ್​​​​ಗೆ ಪರಿಚಿಯಿಸಿದ್ದು ಪುಟ್ಟಣ್ಣ ಕಣಗಾಲ್ ಅವರೇ.

Advertisement

 

Advertisement

Advertisement

 

Advertisement

ಆದರೆ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಎಷ್ಟೋ ಸ್ಟಾರ್ ನಿರ್ದೇಶಕರು ಕಾರಣಾಂತರಗಳಿಂದ ಇಂದು ತೆರೆ ಮರೆಗೆ ಸರಿದಿದ್ದಾರೆ. ಭಾರ್ಗವ, ಭಗವಾನ್, ಎಸ್​​​​. ಮಹೇಂದರ್, ಫಣಿ ರಾಮಚಂದ್ರ, ಸುನಿಲ್ ಕುಮಾರ್ ದೇಸಾಯಿ, ಓಂ ಪ್ರಕಾಶ್ ರಾವ್, ಎಸ್​​. ನಾರಾಯಣ್ , ರಾಜೇಂದ್ರ ಸಿಂಗ್ ಬಾಬು ಇವರೆಲ್ಲಾ ಸ್ಯಾಂಡಲ್​ವುಡ್​​​ಗೆ ಎಂದೂ ಮರೆಯಲಾರದಂತ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಈಗ ಇವರೆಲ್ಲಾ ಸಿನಿಮಾ ನಿರ್ದೇಶನದತ್ತ ಬರುತ್ತಿಲ್ಲ.

 

 

ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಆಪರೇಷನ್ ಡೈಮಂಡ್ ರಾಕೆಟ್​​​ನಂತ ಡಾ. ರಾಜ್ ಚಿತ್ರಗಳನ್ನು ನಿರ್ದೇಶಿಸಿರುವ ಯಶಸ್ವಿ ನಿರ್ದೇಶಕ ಭಗವಾನ್, ಡಾ. ರಾಜ್​​​ ಅಭಿನಯದ ಭಾಗ್ಯವಂತರು, ಒಲವು ಗೆಲುವು, ವಿಷ್ಣುವರ್ಧನ್ ಅಭಿನಯದ ಗುರು ಶಿಷ್ಯರು, ಕರ್ಣ, ಹೃದಯ ಗೀತೆ, ಬಂಗಾರದ ಕಳಸದಂತ ಚೆಂದದ ಸಿನಿಮಾಗಳ ನಿರ್ದೇಶಕ ಭಾರ್ಗವ, ನಮ್ಮೂರ ಮಂದಾರ ಹೂವೆ, ಬೆಳದಿಂಗಳ ಬಾಲೆ, ಉತ್ಕರ್ಷ, ನಿಷ್ಕರ್ಷ, ಸ್ಪರ್ಶ ಸಿನಿಮಾಗಳ ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಇದೀಗ ತೆರೆ ಮರೆಗೆ ಸರಿದಿದ್ದಾರೆ. ಬಹಳ ವರ್ಷಗಳ ನಂತರ ಇತ್ತೀಚೆಗೆ ಸುನಿಲ್ ಕುಮಾರ್ ದೇಸಾಯಿ ಉದ್ಘರ್ಷ ಸಿನಿಮಾವನ್ನು ನಿರ್ದೇಶಿಸಿದರೂ ಆ ಸಿನಿಮಾ ಯಶಸ್ವಿಯಾಗಲಿಲ್ಲ. ಅನಂತ್ ನಾಗ್​ ಅವರ ಗಣೇಶನ ಸೀರೀಸ್​ ಸಿನಿಮಾಗಳಾದ ಗಣೇಶ ಸುಬ್ರಹ್ಮಣ್ಯ, ಗಣೇಶನ ಮದುವೆ, ಗೌರಿ ಗಣೇಶ ಸಿನಿಮಾಗಳನ್ನು ತೆಗೆದ ಫಣಿ ರಾಮಚಂದ್ರ ಕೂಡಾ ಈಗ ಏನು ಮಾಡುತ್ತಿದ್ದಾರೆ ಯಾರಿಗೂ ಗೊತ್ತಿಲ್ಲ.

 

 

ಇವರೊಂದಿಗೆ ಗಟ್ಟಿಮೇಳ, ಕರ್ಪೂರದ ಗೊಂಬೆ, ಶೃಂಗಾರ ಕಾವ್ಯ, ತಾಯಿ ಇಲ್ಲದ ತಬ್ಬಲಿಯಂತ ಸೆಂಟಿಮೆಂಟ್ ಸಿನಿಮಾಗಳಿಗೆ ಹೆಸರಾದ ಎಸ್​​. ಮಹೇಂದರ್, ಸಿಂಹದ ಮರಿ, ಕಲಾಸಿಪಾಳ್ಯ, ಎಕೆ 47, ಹುಚ್ಚ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ ಓಂ ಪ್ರಕಾಶ್ ರಾವ್, ಚೈತ್ರದ ಪ್ರೇಮಾಂಜಲಿ, ಶಬ್ಧವೇಧಿ, ವೀರಪ್ಪ ನಾಯಕ, ಸೂರ್ಯವಂಶದಂತ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎಸ್​. ನಾರಾಯಣ್, ಮುತ್ತಿನ ಹಾರ, ಅಂತ, ಬಂಧನ, ತಿರುಗು ಬಾಣ, ಕರ್ಣ, ಕೃಷ್ಣ ನೀ ಬೇಗನೆ ಬಾರೋ, ಹೂವು ಹಣ್ಣು, ಹಿಮಪಾತಗಳಂತ ಎವರ್​​ಗ್ರೀನ್​​​ ಚಿತ್ರಗಳನ್ನು ನೀಡಿದ ರಾಜೇಂದ್ರ ಸಿಂಗ್ ಬಾಬು ಕೂಡಾ ಬಹಳ ವರ್ಷಗಳಿಂದ ಯಾವುದೇ ಸಿನಿಮಾಗಳನ್ನು ನಿರ್ದೇಶಿಸಿಲ್ಲ.

 

 

ಇವರೊಂದಿಗೆ ಇನ್ನೂ ಅನೇಕ ನಿರ್ದೇಶಕರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಇಂತಹ ನಿರ್ದೇಶಕರು ಮತ್ತೆ ಸಿನಿಮಾ ನಿರ್ದೇಶನದತ್ತ ಬಂದರೆ ನಿಜಕ್ಕೂ ನಮ್ಮ ಕನ್ನಡ ಚಿತ್ರರಂಗಕ್ಕೆ ಇನ್ನೂ ಎತ್ತರಕ್ಕೆ ಬೆಳೆಯುವುದರಲ್ಲಿ ಸಂದೇಹ ಇಲ್ಲ.

Advertisement
Share this on...