6 ತಿಂಗಳ ನಂತರ ಸಿಲಿಕಾನ್ ಸಿಟಿಯಲ್ಲಿ ಮತ್ತೆ ರಂಗೇರಿದ ಫ್ಯಾಷನ್ ಶೋ

in ಮನರಂಜನೆ 172 views

ಫ್ಯಾಷನ್ ಎಂಬುದು ಇಂದು ನಿನ್ನೆಯದಲ್ಲ, ಸಿಂಧು ನಾಗರಿಕತೆಯ ಸಮಯದಲ್ಲೇ ಮಹಿಳೆಯರು ಉಗುರು ಬಣ್ಣ, ಬಳೆಗಳು, ಕಾಡಿಗೆಯನ್ನು ಬಳಸುತ್ತಿದ್ದರು. ಹತ್ತಿಯನ್ನು ನೇಯ್ದು ಬಣ್ಣ ಹಾಕಿ ಬಟ್ಟೆಯನ್ನಾಗಿ ಬಳಸುತ್ತಿದ್ದರು. ಓಲ್ಡ್ ಇಸ್ ಗೋಲ್ಡ್ ಎಂಬ ಮಾತಿನಂತೆ ಇಂದು ನಾವು ಬಳಸುತ್ತಿರುವ ಬಹುತೇಕ ಎಲ್ಲಾ ವಸ್ತುಗಳು ಸಾವಿರಾರು ವರ್ಷಗಳ ಹಿಂದೆಯೇ ಇದ್ದದ್ದು. ಕಾಲಕ್ಕೆ ತಕ್ಕಂತೆ ಟ್ರೆಂಡ್ ಬದಲಾಗುತ್ತಿದೆ ಅಷ್ಟೇ. ಇನ್ನು ದೊಡ್ಡ ದೊಡ್ಡ ನಗರಗಳಲ್ಲಿ ಆಗ್ಗಾಗ್ಗೆ ಫ್ಯಾಷನ್​ ಶೋ ನಡೆಯುವುದು ಸಾಮಾನ್ಯ. ವಿವಿಧ ಮಾದರಿಯ ಬಟ್ಟೆಗಳನ್ನು ಧರಿಸಿ, ಬಣ್ಣ ಬಣ್ಣದ ಲೈಟ್ಸ್ ನಡುವೆ, ಮ್ಯೂಸಿಕ್​​​ಗೆ ತಕ್ಕಂತೆ ಮಾಡೆಲ್​​ಗಳು ರ್‍ಯಾಂಪ್ ಮೇಲೆ ಹೆಜ್ಜೆ ಹಾಕುವುದನ್ನು ನೋಡುವುದೇ ಚೆಂದ. ಆದರೆ ಈ ಫ್ಯಾಷನ್ ಎನ್ನುವುದು ವಯಸ್ಕರಿಗೆ ಮಾತ್ರವಲ್ಲ. ಮಾರುಕಟ್ಟೆಯಲ್ಲಿ ಮಕ್ಕಳಿಗಾಗಿ ವಿವಿಧ ನಮೂನೆಯ ಬಟ್ಟೆಗಳು, ಆಕ್ಸೆಸರಿಗಳು ಲಭ್ಯವಿದೆ. ಮಕ್ಕಳ ಫ್ಯಾಷನ್ ಶೋ ಕೂಡಾ ಆಯೋಜಿಸಲಾಗುತ್ತದೆ.

Advertisement

Advertisement

ಕಳೆದ 6 ತಿಂಗಳಿಂದ ಕೊರೊನಾ ಕಾರಣದಿಂದ ಯಾವುದೇ ಫ್ಯಾಷನ್​ ಶೋ ಅಥವಾ ಇನ್ನಿತರ ಕಾರ್ಯಕ್ರಮಗಳು ನಡೆದಿರಲಿಲ್ಲ. ಆದರೆ ಇದೀಗ ಹಂತ ಹಂತವಾಗಿ ಲಾಕ್​​ ಡೌನ್​ ತೆರವುಗೊಳ್ಳುತ್ತಿದ್ದು ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದೆ. ಅಕ್ಟೋಬರ್ 15 ರಿಂದ ಸಿನಿಮಾ ಥಿಯೇಟರ್​​​ಗಳು ಕೂಡಾ ಆರಂಭವಾಗುತ್ತಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಫ್ಯಾಷನ್ ಶೋ ಆರಂಭವಾಗಿದ್ದು ಫ್ಯಾಷನ್ ಪ್ರಿಯರು ಥ್ರಿಲ್ ಆಗಿದ್ದಾರೆ. ಇತ್ತೀಚೆಗೆ ನಗರದ ಖಾಸಗಿ ಹೋಟೆಲ್​​ನಲ್ಲಿ ಆರ್ಕಿಡ್ ಇಂಟರ್​​​ನ್ಯಾಷನಲ್​​ ಯೂನಿವರ್ಸಲ್ ಪೆಜೆಂಟ್ರಿ 2020 ಫ್ಯಾಷನ್ ಶೋ ಏರ್ಪಡಿಸಲಾಗಿತ್ತು. ಈ ಫ್ಯಾಷನ್ ಶೋನಲ್ಲಿ ಪುಟ್ಟ ಮಕ್ಕಳು ಕೂಡಾ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇದರೊಂದಿಗೆ ಯುವಕ-ಯುವತಿಯರ ರ್‍ಯಾಂಪ್ ವಾಕ್ ಹಾಗೂ ಡ್ಯಾನ್ಸ್ ಅಲ್ಲಿ ನೆರೆದಿದ್ದವರನ್ನು ಹೊಸ ಲೋಕಕ್ಕೆ ಕೊಂಡೊಯ್ದಿದ್ದಂತೂ ನಿಜ.

Advertisement

Advertisement

 

ಸಿಲಿಕಾನ್ ಸಿಟಿಯಲ್ಲಿ ಏನಿಲ್ಲಾ ಅಂದರೂ ಒಂದು ತಿಂಗಳಲ್ಲಿ ಸುಮಾರು 10 ಫ್ಯಾಷನ್ ಶೋ ನಡೆಯುತ್ತಿತ್ತು. ಆದರೆ ಕೊರೊನಾ ಸಮಸ್ಯೆ ಆರಂಭವಾದಾಗಿನಿಂದ ಎಲ್ಲರೂ ಮನೆಯಲ್ಲೇ ಸುಮ್ಮನೆ ಕೂರುವಂತಾಗಿತ್ತು. ಆದರೆ 6 ತಿಂಗಳ ಬಳಿಕ ಮತ್ತೆ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದಕ್ಕೆ ಸ್ಪರ್ಧಿಗಳು ಹಾಗೂ ಪ್ರೇಕ್ಷಕರು ಬಹಳ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಆಯೋಜಕ ಮಧುಸೂದನ್ ಮಾತನಾಡಿ, “ಈ ಫ್ಯಾಷನ್ ಶೋ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಮಾಡೆಲ್​​​ಗಳು ಈ ಶೋನಲ್ಲಿ ಭಾಗವಹಿಸಿದ್ದಾರೆ” ಎಂದು ಮಾಹಿತಿ ನೀಡಿದರು. ಐಪಿಎಸ್ ಅಧಿಕಾರಿ ಜೆ. ಅರ್ಜುನ್ ಚಕ್ರವರ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತೀರ್ಪುಗಾರರಾಗಿ ನಟಿ ಶಿಲ್ಪಾ ದಾಸ್, ನಟಿ ರಮ್ಯಾ ಬಾರ್ನ, ಡ್ಯಾನ್ಸ್ ಕೊರಿಯೋಗ್ರಾಫರ್ ಸರಿತಾ ಕೊಠಾರಿ, ಫಿಟ್ನೆಸ್ ಎಕ್ಸ್​​​ಪರ್ಟ್ ಜ್ಯೋಸ್ನಾ ವೆಂಕಟೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಈ ಶೋನಲ್ಲಿ ವಿಜೇತರಾದವರ ವಿವರ ಇಲ್ಲಿದೆ.

ಮಿಸ್ಟರ್ ಅ್ಯಂಡ್​​​​​ ಮಿಸ್ ವರ್ಲ್ಡ್ ನೋಬಲ್ ಕಿಂಗ್ – ಭರತ್, ಸುಶ್ಮಿತಾ
ಮಿಸ್ಟರ್ ಅ್ಯಂಡ್ ಮಿಸ್ ಟಾಪ್ ಮಾಡೆಲ್ ಯೂನಿವರ್ಸ್- ರಿಶಿ ಮತ್ತು ಶ್ವೇತಾ
ಮಿಸ್ಟರ್ ಅ್ಯಂಡ್ ಮಿಸ್ ರನ್ ವೇ ಮಾಡೆಲ್ ಯೂನಿವರ್ಸ್- ಸತ್ಯ ಮತ್ತು ಸೌಂದರ್ಯ
ಮಿಸ್ಟರ್ ಅ್ಯಂಡ್ ಮಿಸ್ ಟಾಪ್ ಮಾಡೆಲ್ ಇಂಟರ್​ನ್ಯಾಷನಲ್​​ – ಕೇಶವ್ ಮತ್ತು ತೇಜಸ್ವಿನಿ
ಮಿಸ್ಟರ್ ಅ್ಯಂಡ್ ಮಿಸ್ ಟೂರಿಸಂ ಇಂಟರ್​​​​​​​ನ್ಯಾಷನಲ್ – ಅಕ್ಷಯ್ ಮತ್ತು ನವಂಮ್ ಸಿಂಗ್

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...