ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಐಪಿಎಸ್ ಆಫೀಸರ್ ಆದ ರೋಚಕ ಕಥೆ..!

in ಕನ್ನಡ ಮಾಹಿತಿ/ಮನರಂಜನೆ 206 views

ಒಬ್ಬ ವ್ಯಕ್ತಿ ಬದುಕಿನ ಸೋಲನ್ನು ನೋಡಬೇಕು. ಬದುಕಿನ ಕಷ್ಟಗಳನ್ನು ನೋಡಬೇಕು. ಸೋಲನ್ನು ಮೆಟ್ಟಿ ನಿಂತು ಗೆದ್ದು ಕಷ್ಟಗಳನ್ನು ನೀಗಿಸಿಕೊಂಡು ಸುಖವನ್ನು ಅನುಭವಿಸಿದಾಗಲೇ ಬದುಕು ಅಲ್ವಾ..? ಬದುಕು ಪಕ್ವವಾಗುವುದು ಹಾಗೆ ಅಲ್ವಾ..? ಯಾವುದೇ ಶ್ರೀಮಂತಿಕೆಯ ಅಡಿಪಾಯವಿಲ್ಲದೆ ಕೇವಲ ವಿದ್ಯೆ ಸಂಸ್ಕಾರದ ಮೇಲೆ ಬದುಕನ್ನು ಕಟ್ಟಿಕೊಂಡ ಕನ್ನಡಿಗರ ಹೆಮ್ಮೆ ಅದೆಷ್ಟೋ ಯುವಕರ ಸ್ಪೂರ್ತಿಯ ಚಿಲುಮೆ ರವಿ ಡಿ. ಚೆನ್ನಣ್ಣವರ್. ರವಿ ಡಿ.ಚೆನ್ನಣ್ಣವರ್ ದೇಶಪ್ರೇಮಿಗಳ ದೇಶಪ್ರೇಮಿ. ಭಗತ್ ಸಿಂಗ್, ಚಂದ್ರಶೇಖರ್ ಆಜಾ಼ದ್ ರಂತಹ ಮಹಾನ್ ವ್ಯಕ್ತಿಗಳ ಅನುಯಾಯಿ ಕನ್ನಡಿಗರು ಕಂಡ ಕಡಕ್ ಅಧಿಕಾರಿ. ಬಾಲ್ಯದಲ್ಲಿ ಬಡತನದಲ್ಲಿ ಬೆಳೆದ ರವಿ ಡಿ. ಚನ್ನನವರ್ ರವರ ಬದುಕು ಅಷ್ಟು ಚಂದವೇನು ಇರಲಿಲ್ಲ. ಗದಗ ಜಿಲ್ಲೆಯ ನೀಲಗುಂದ ಎಂಬ ಹಳ್ಳಿಯಲ್ಲಿ ರವಿ ಡಿ.ಚೆನ್ನಣ್ಣವರ್ ಜನಿಸಿದರು. ತಂದೆ ದ್ಯಾಮಪ್ಪ ಚೆನ್ನಣ್ಣವರ್, ತಾಯಿ ರತ್ನಮ್ಮ, ಸಹೋದರ ರಾಘವೇಂದ್ರ. ಕೃಷಿ ಇವರ ಜೀವನಾಧಾರ. ತಂದೆ ತನ್ನ ಮಗನನ್ನು ಓದಿಸಲು ಅಷ್ಟೊಂದು ಶಕ್ತಿ ಇರದೆ ಇರುವಾಗ ಹೈಸ್ಕೂಲು ಓದುತ್ತಿದ್ದಾಗ ರವಿ ಡಿ. ಚೆನ್ನಣ್ಣವರ್ ಅವರೆ ಶಾಲೆಯ ಬಿಡುವಿನ ವೇಳೆಯಲ್ಲಿ ಕಾಂಕ್ರೀಟ್ ಕೆಲಸಕ್ಕೆ ಹೋಗುತ್ತಿದ್ದರು. ಕೃಷಿ ಕೆಲಸಕ್ಕೆ ಹೋಗುತ್ತಿದ್ದರು.

Advertisement

Advertisement

ಓದುವ ಯಾವುದೇ ವಾತಾವರಣ ಅವರ ಮನೆಯಲ್ಲಿ ಖಂಡಿತ ಇರಲಿಲ್ಲ. ಇಂತಹ ವ್ಯತ್ತಿರಿಕ್ತ ವಾತಾವರಣದಲ್ಲೇ ವಿದ್ಯೆಯನ್ನು ತಲೆಗೆ ತುಂಬಿಕೊಂಡರು ರವಿ ಡಿ.ಚೆನ್ನಣ್ಣವರ್. ಹಾಗಾಗಬೇಕು ಹೀಗಾಗಬೇಕು ಅಂತ ಏನೇನೋ ಚಂದದ ಕನಸುಗಳನ್ನು ಕಂಡಿದ್ದರು. ರವಿಯವರ ಕಷ್ಟದ ಬದುಕಿನಲ್ಲಿ ಒಂದು ಸ್ಪಷ್ಟ ಗುರಿ ಇತ್ತು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಪದವಿ ಪಡೆದರು. ಈ ವೇಳೆ ಬಾರ್ ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಾರೆ. ನಂತರ 2008 ರಲ್ಲಿ ಯುಪಿಎಸ್ ಸಿ ಎಕ್ಸಾಮ್ ತೆಗೆದುಕೊಂಡರು. 2009ರಲ್ಲಿ 703ನೇ ರಾಂಕ್ ಪಡೆದುಕೊಂಡರು. ಕಲಬುರ್ಗಿಯಲ್ಲಿ ಪ್ರೊಬೆಷನರಿ ಗ್ರೇಡ್ ಮುಗಿಸಿ ಬೆಳಗಾವಿಯಲ್ಲಿ ಹೆಚ್ಚುವರಿ ಎಸ್.ಪಿ ಯಾಗಿ ಕೆಲಸ ಆರಂಭಿಸಿದರು. ಇದೀಗ ಬೆಂಗಳೂರು ಗ್ರಾಮಾಂತರ ಎಸ್.ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Advertisement

ತಮ್ಮ ವ್ಯಾಪ್ತಿಯಲ್ಲಿ ಕೆಲವೊಂದು ವಿಶಿಷ್ಟ ಹಾಗೂ ಸಮಾಜಮುಖಿ ಕೆಲಸಗಳಿಂದ ರಾಜ್ಯಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿರುವ ರವಿ ಡಿ.ಚೆನ್ನಣ್ಣವರ್ ಕರ್ನಾಟಕದ ರಿಯಲ್ ಸಿಂಗಂ. ತಪ್ಪು ಮಾಡುವವರನ್ನು ತಿದ್ದಬೇಕು, ತಿದ್ದಿಕೊಳ್ಳದೆ ಇದ್ದಾಗ ಪೊಲೀಸ್ ಪವರ್ ತೋರಿಸಬೇಕು ಎನ್ನುವ ಸೂಪರ್ ಕಾಪ್ ನಮ್ಮ ಹೆಮ್ಮೆಯ ರವಿ ಡಿ. ಚನ್ನಣ್ಣನವರ್. ಇವರ ಸ್ಪೂರ್ತಿದಾಯಕ ಮಾತುಗಳು ವಿಚಾರಗಳನ್ನು ಕೇಳಿರುವ ಯುವಕರ ಬದುಕು ಸ್ವಲ್ಪವಾದರೂ ಸರಿ ದಾರಿಗೆ ಬರುತ್ತಿರುವುದಂತೂ ಸುಳ್ಳಲ್ಲ.

– ಸುಷ್ಮಿತಾ

Advertisement
Share this on...