ಈ ಹಬ್ಬದ ನಂತರ ಮಾಯವಾಗುತ್ತಾ ಕೊರೊನಾ ವೈರಸ್ !

in ಕನ್ನಡ ಮಾಹಿತಿ 174 views

ಭಾರತ ಒಂದು  ಸಾಂಪ್ರದಾಯಿಕ ದೇಶವಾಗಿದ್ದು  ಇಲ್ಲಿನ ಜನರು  ಶಾಸ್ತ್ರ  ಸಂಪ್ರದಾಯಗಳಿಗೆ  ಹೆಚ್ಚು ಬೆಲೆಯನ್ನು ಕೊಡುತ್ತಾರೆ ಮತ್ತು ನಂಬುತ್ತಾರೆ.  ಕರೋನಾ ಎಂಬ ವೈರಸ್ ಭಾರತಾದ್ಯಂತ ಹರಡಿ ತಾಂಡವವಾಡುತ್ತಿದೆ. ಈ ಕರೋನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ . ದೇಶದಲ್ಲಿನ ಹಲವು ವೈದ್ಯಕೀಯ ಸಂಸ್ಥೆಗಳು ಈ ಕರೋನಾ ಮಹಾಮಾರಿಗೆ ಔಷಧಿಯನ್ನು ಕಂಡು ಹಿಡಿಯಲು ಸತತವಾಗಿ ಪ್ರಯತ್ನಪಡುತ್ತಿವೆ.  ಇಂತಹ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಜನರು  ಅಜ್ಜಿ ಹಬ್ಬದ ಮೊರೆ ಹೋಗಿದ್ದಾರೆ. ಹಾಗಾದರೆ ಈ ಅಜ್ಜಿ ಹಬ್ಬ ಎಂದರೇನು ?  ಅದನ್ನು ಹೇಗೆ ಮಾಡಲಾಗುತ್ತದೆ ಮತ್ತು ಏಕೆ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ .

Advertisement

 

Advertisement


ನಮ್ಮ ಭಾರತ ದೇಶದಲ್ಲಿ ಮರಗಳನ್ನು ದೇವರೆಂದು ಪೂಜಿಸುವ ಆಚರಣೆ ಕೂಡ ಇದೆ. ಅದರಂತೆ ಬೇವಿನ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ವಿವಿಧ ರೀತಿಯ ತಿನಿಸುಗಳನ್ನು ಎಡೆ ರೀತಿಯಲ್ಲಿ ಇಟ್ಟು ಪೂಜಿಸುತ್ತಾರೆ.  ಈ ರೀತಿಯ ಆಚರಣೆಯನ್ನೇ ಅಜ್ಜಿ ಹಬ್ಬ ಎಂದು ಕರೆಯಲಾಗುತ್ತದೆ . ಅಜ್ಜಿ ಹಬ್ಬ ಎಂದು ಏಕೆ ಕರೆಯಲಾಗುತ್ತದೆ ಎಂಬುದಕ್ಕೆ ಹಲವು ಕಡೆ ನಾನಾ ರೀತಿಯಾದ ಕಥೆಗಳಿವೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಬೆಳೆ ಚೆನ್ನಾಗಿ ಬರಲಿ ಮತ್ತು ಯಾವುದೇ ರೀತಿಯ ರೋಗ ರುಜಿನಗಳು ಬರದಿರಲಿ ಎಂದು ಈ ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತದೆ, ಮತ್ತೆ ಕೆಲವು ಕಡೆ ಶ್ರಾವಣ ಮಾಸದಲ್ಲಿ ಕೂಡ  ಈ ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತದೆ .

Advertisement

 

Advertisement

ಹಿಂದಿನ ಕಾಲದಲ್ಲಿ ಪ್ಲೇಗ್ ಕಾಲರ ಮುಂತಾದ ಸಾಂಕ್ರಾಮಿಕ ರೋಗಗಳು ಬಂದಾಗ ಜನರು ಗ್ರಾಮಗಳನ್ನೇ ಬಿಟ್ಟು ಬೇರೆಡೆ ಹೋಗುತ್ತಿದ್ದರು. ಅಲ್ಲದೆ ದೇವರ ಮೊರೆ ಹೋಗಿ ರೋಗ ಹರಡದಂತೆ ನಮ್ಮನ್ನು ಕಾಪಾಡು ತಾಯಿ ಎಂದು ಎಲ್ಲರೂ ಒಟ್ಟಾಗಿ ಬೇಡಿಕೊಳ್ಳುತ್ತಾ ಪೂಜಿಸುತ್ತಿದ್ದರು. ಮತ್ತೆ ಕೆಲವೆಡೆ ‘ಅಮ್ಮ’ ಬಂದರೆ ಈ ರೀತಿ ದೇವರ ಮೊರೆ ಹೋಗಿ ಪೂಜೆಯನ್ನು ಸಲ್ಲಿಸುತ್ತಿದ್ದರು . ಹೀಗಾಗಿ ಸಾಂಕ್ರಾಮಿಕ ರೋಗ ಹರಡದಿರಲಿ ದೂರ ತೊಲಗಲಿ ಎಂಬ ಉದ್ದೇಶದಿಂದ ಮಾಡಲಾಗುತ್ತಿದ್ದ ಈ ಅಜ್ಜಿ ಹಬ್ಬವನ್ನು ಇಂದು ಕರೋನಾ ವೈರಸ್ ತಮ್ಮ ಗ್ರಾಮಗಳಿಗೆ ವಕ್ಕರಿಸದೆ ಇರಲಿ ಎಂಬ ಕಾರಣಕ್ಕೆ ಈ ಅಜ್ಜಿ ಹಬ್ಬವನ್ನು ಆಚರಿಸುತ್ತಿದ್ದಾರೆ . ಅದರಲ್ಲೂ ತುಮಕೂರಿನ ಸಿರಾ ಮಧುಗಿರಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿಶೇಷವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ.

 


ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ . ಕೆಲವರು ಇದರ ವಿರುದ್ಧವಾಗಿ ಇದೊಂದು ಕೇವಲ ಮೂಢನಂಬಿಕೆ ಇಂತಹ ಪೂಜೆ ಆಚರಣೆಗಳಿಂದ ಕರೋನಾ ವೈರಸ್ ತೊಲಗುವುದಿಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು  ಎಂದು ಹೇಳಿದರೆ  ಮತ್ತೆ ಕೆಲವರು ಮತ್ತೆ ಕೆಲವರು ಈ ಪೂಜೆಯಿಂದ ಕರೋನಾ ವೈರಸ್ ಹೋಗುವುದಾದರೆ ಹೋಗಲಿ ಎನ್ನುತ್ತಿದ್ದಾರೆ.

Advertisement
Share this on...