ಚಿತ್ರರಸಿಕರಿಗೆ ಮತ್ತೊಮ್ಮೆ ನಿರಾಸೆ !

in ಮನರಂಜನೆ/ಸಿನಿಮಾ 132 views

ಸಿನಿಮಾ ಎಂಬುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಶವಾಗಿದೆ. ಸಂಸಾರದ ಜಂಜಾಟ, ಕೆಲಸದ ಒತ್ತಡ, ಜೀವನದ ಬೇಸರ ಇವೆಲ್ಲವನ್ನು ಈ ಸಿನಿಮಾ ಎಂಬುದು ಮೂರು ಗಂಟೆಗಳ ಕಾಲ ದೂರ ಮಾಡುತ್ತದೆ. ಚಿತ್ರಗಳನ್ನು  ಚಿತ್ರಮಂದಿರಗಳಲ್ಲಿ ವಿಕ್ಷಿಸುವುದೇ ಒಂದು ಹಬ್ಬ. ತಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಇಡೀ ಪ್ರಪಂಚದಲ್ಲೇ ನಮ್ಮ ದೇಶದಷ್ಟು ಕಲೆ ಹಾಗೂ ಕಲಾವಿದರನ್ನು ಪ್ರೀತಿಸುವಷ್ಟು ಆರಾಧಿಸುವಷ್ಟು ಎಲ್ಲಿಯೂ ಸಿಗುವುದಿಲ್ಲ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡಿಗಡೆಯಾಗುತ್ತಿದೆ ಎಂದರೆ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಜರುಗಿರುತ್ತದೆ. ಚಿತ್ರಮಂದಿರದ ಮುಂದೆ ನಾಯಕನ ಬಹು ಎತ್ತರವಾದ ಕಟೌಟ್. ಅದಕ್ಕೆ ಹಾಲಿನ ಅಭಿಷೇಕ. ಹೂ ಮಾಲೆಗಳು, ವಾಧ್ಯಗೊಷ್ಟಿ ಹಾಗೂ ಮೊದಲನೇ ದಿನ ಮೊದಲು  ವೀಕ್ಷಿಸಿದವರಿಗೆಲ್ಲಾ ಊಟ ಅಥವಾ ಸಿಹಿ ಗಳನ್ನು ಹಂಚಿ ಸಂಭ್ರಮಿಸುತ್ತಾರೆ. ಇನ್ನೂ ಓರ್ವ ಚಿತ್ರ ನಟ ನಮ್ಮ ಏರಿಯಾ ಅಥವಾ ಬೀದಿಗಳಿಗೆ ಬರುತ್ತಿದ್ದಾರೆ ಎಂಬುದು ತಿಳಿದರೆ ಅಲ್ಲಿ ಜನಸಾಗರವೇ ಹರಿದು ಬಿಟ್ಟಿರುತ್ತದೆ. ಇದರ ಜೊತೆ ನಮ್ಮ ನೆಚ್ಚಿನ ನಟನನ್ನು ನೋಡಲು ಅವರವರ ಮನೆಯ ಮುಂದೇ ಮುಂಜಾನೆ ಇಂದಲೇ ಕ್ಯೂ ನಿಂತಿರುತ್ತಾರೆ. ಈ ರೀತಿಯಾದ ಅಭಿಮಾನ ಹಾಗೂ ಸನ್ಮಾನ ಯಾವ ಕೆಲಸದಲ್ಲಿ ಸಿಗುತ್ತದೆ ಹೇಳಿ. ಅದಕ್ಕೇ ಹೇಳುವುದು ನಮ್ಮ ದೇಶದಲ್ಲಿ ಕಲಾವಿದರಾಗಿ ಹುಟ್ಟುವುದೇ ಒಂದು ಪುಣ್ಯವೆಂದು.

Advertisement

Advertisement

ಇನ್ನು ಮಹಾಮಾರಿ ಕೊರೋನಾ ಸೋಂಕಿನ ಆರ್ಭಟ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿದ್ದ ಕಾರಣ ದೇಶವನ್ನೇ ಲಾಕ್‌ಡೌನ್ ಮಾಡಬೇಕಾಯಿತು. ಈ ರೀತಿಯಾದ ನಿರ್ಣಯವನ್ನು ತೆಗೆದುಕೊಂಡ ಮೇಲೆ  ಚಿತ್ರರಂಗದ ಸಂಪೂರ್ಣವಾದ ಕೆಲಸ ನಿಂತು ಹೋಗಿತ್ತು. ಚಿತ್ರೀಕರಣದ  ಕೆಲಸ, ಕಾರ್ಯಕ್ರಮಗಳು, ಚಿತ್ರಮಂದಿರ ಸೇರಿ ಪ್ರತಿಯೊಂದು ಕೆಲಸವೂ ಕೂಡ ಸ್ಥಗಿತವಾಗಿತ್ತು. ಇದೀಗ ಚಿತ್ರೀಕರಣಕ್ಕೆ ಸರ್ಕಾರಗಳು ಅನುಮತಿ ನೀಡಿದ್ದೂ ಧಾರಾವಾಹಿ, ರಿಯಾಲಿಟಿ ಕಾರ್ಯಕ್ರಮಗಳು ಹಾಗೂ ಚಿತ್ರದ ಚಿತ್ರೀಕರಣವೂ ಕೂಡ ಆರಂಭವಾಗಿದೆ. ಮಾರ್ಚ್ ತಿಂಗಳವರೆಗೂ ಚಿತ್ರೀಕರಣ ನಡೆದು ಅರ್ಧಕ್ಕೆ ನಿಂತಿದ್ದಂತ  ಚಿತ್ರೀಕರಣ ಪುನಃ  ಆರಂಭವಾಗಿದೆ ಎಂಬ ಖುಷಿ ಒಂದು ಕಡೆಯಾದರೆ, ಮತ್ತೊಂದೆಡೆ ಸಿನಿಮಾ ಮುಗಿಸಿ ಬಿಡುಗಡೆ ಮಾಡಬೇಕು ಎಂದುಕೊಂಡಿರುವ ಚಿತ್ರತಂಡಗಳಿಗೆ ನಿರಾಸೆಯೇ ಮನೆ ಮಾಡಿದೆ.  ಆದರೆ ಕೇಂದ್ರ ಸರ್ಕಾರವೂ ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ತೆಗೆಯಲು ಅನುಮತಿ ನೀಡುತ್ತೇವೆ  ಎಂಬ ಸುದ್ದಿ  ಹೊರ ಬಂದಿತ್ತು ಆದರೆ ಇದೀಗ , ಇದು ಸುಳ್ಳು ಎಂಬುದು ಬಯಲಾಗಿದೆ.

Advertisement

Advertisement

ಕೆಲ ದಿನಗಳಿಂದ ಅಕ್ಟೋಬರ್ 1 ರಿಂದ  ಚಿತ್ರ ಮಂದಿರಗಳನ್ನು ದೇಶಾದ್ಯಂತ  ತೆರೆಯಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದ್ದಾರೆ ಎಂಬು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಕುರಿತು ದಕ್ಷಿಣ ಭಾರತ ವಾಣಿಜ್ಯ ಮಂಡಳಿ  ಜೊತೆ ಚರ್ಚೆ ಸಹ ನಡೆಸಿದೆ,  ಇನ್ನೇನೂ ಚಿತ್ರಮಂದಿರಗಳು ತೆರೆಯಲು ತಯಾರಿ ಸಹ ನಡೆಸಿದ್ದಾರೆ ಎಂದು ಹೇಳಲಾಗಿತ್ತು  ಆದರೆ ಇದೀಗ ಈ ಸುದ್ದಿ ಸುಳ್ಳು ಎಂಬುದಾಗಿ ತಿಳಿದು ಬಂದಿದ್ದು,  ಇಲ್ಲಿಯ ತನಕ ಯಾವುದೇ ರೀತಿಯಲ್ಲಾಗಲಿ ಕೇಂದ್ರ ಗೃಹ ಇಲಾಖೆ ಕಡೆಯಿಂದ ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲವಂತೆ. ಹಾಗೂ ಈ ಕುರಿತು ಚರ್ಚೆಗಳು ಕೂಡ ನಡೆದಿಲ್ಲ ಮತ್ತು ಸೂಚನೆಯೂ ನೀಡಿಲ್ಲ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ಬಯಲಾಗಿದೆ.

ಇನ್ನೂ ಈ ಹಿಂದೆ ಕನ್ನಡ ಚತ್ರರಂಗದ  ಪರವಾಗಿ ವರನಟ ಡಾ. ರಾಜ್ ಅವರ ಹಿರಿಯ ಪುತ್ರ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್  ಅವರ ನೇತೃತ್ವದ ನಿಯೋಗ ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್  ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ನೆರವು ನೀಡಬೇಕು ಹಾಗೂ ಚಿತ್ರಮಂದಿರ ತೆರೆಯಲು ಅನುವು ಮಾಡಿಕೊಡಬೇಕು ಎಂದು ವಿನಂತಿ  ಕೂಡ ಮಾಡಲಾಗಿತ್ತು. ಸದ್ಯದ ಪರಿಸ್ಥಿತಿ  ನೋಡುವುದಾದರೆ ಚಿತ್ರಮಂದಿರಗಳು ತೆರೆಯುವಂತೆ ಕಾಣುತ್ತಿಲ್ಲ. ಚಿತ್ರಗಳನ್ನೇ ನಂಬಿಕೊಂಡಿದ್ದವರ ಗತಿ ಏನಾಗುತ್ತದೋ, ಚಿತ್ರಮಂದಿಗಳು ಯಾವಾಗ ತೆರೆಯುತ್ತದೋ ಎಂದು ಕಾದು ನೋಡಬೇಕಾಗಿದೆ ಅಷ್ಟೇ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...