ಖಳನಾಯಕರಾಗಿ ಬಂದು ನಾಯಕರಾಗಿ ಮಿಂಚಿದವರು ! ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ ?

in ಮನರಂಜನೆ/ಸಿನಿಮಾ 22 views

ಚಂದನವನ ಒಂದು ಬಹುಮುಖ ಪ್ರತಿಭೆಗಳ ತಾಣ. ಚಿತ್ರರಂಗಕ್ಕೆ ಹಾಸ್ಯನಟರಾಗಿ, ಖಳನಾಯಕರಾಗಿ, ನಟರಾಗಿ ಅನೇಕ ಕಲಾವಿದರು ಚಿತ್ರರಂಗವನ್ನು ಆಳಿ ಅವಿಸ್ಮರಣೀಯರಾಗಿದ್ದಾರೆ. ಮೊದಮೊದಲು ಖಳನಾಯಕನಾಗಿ ತೆರೆಯ ಮೇಲೆ ಘರ್ಜಿಸಿ ನಂತರದ ದಿನಗಳಲ್ಲಿ ಯಶಸ್ವಿಯಾದ ನಟರು ನಮ್ಮ ಕನ್ನಡ ಚಿತ್ರರಂಗದಲ್ಲಿದ್ದಾರೆ. ನಾಗರಹಾವಿನ ಜಲೀಲನಿಂದ ಹಿಡಿದು ಲೂಸ್ ಮಾದ ಯೋಗೆಶ್ ತನಕ ಸಾಕಷ್ಟು ಪ್ರತಿಭೆಗಳು ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ. ಅವರು ಯಾರು ಎಂಬುದನ್ನು ಈ ಲೇಖನಿಯಲ್ಲಿ ನೀವು ತಿಳಿದುಕೊಳ್ಳಬಹುದು

Advertisement

 

Advertisement

Advertisement

ನಾಗರಹಾವಿನಲ್ಲಿ ಜಲೀಲನಾಗಿ ಅಂಬಿ: ಯುಗಯುಗ ಕಳೆದರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರವನ್ನು ಸಿನಿರಸಿಕರು ಮರೆಯುವುದಿಲ್ಲ. ಈ ಸಿನಿಮಾದ ಮೂಲಕವೇ ಜಲೀಲ ಪಾತ್ರಧಾರಿಯಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಮೂಲಕ ಅಂಬಿ ಮತ್ತು ವಿಷ್ಣು ಸ್ನೇಹ ಆರಂಭವಾಯಿತು

Advertisement

 

ಕಾಡಿನ ರಹಸ್ಯದಲ್ಲಿ ಟೈಗರ್‌ :ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲಿ ಖಳನಾಯಕನಾಗಿ ತನ್ನದೇ ಆದ ಛಾಪು ಮೂಡಿಸಿದವರು ಟೈಗರ್‌ ಪ್ರಭಾಕರ್. ಇನ್ನು ಪ್ರಭಾಕರ್ ಅವರು ಕಾಡಿನ ರಹಸ್ಯ ಎಂಬ ಚಿತ್ರದ ಮೂಲಕ ಖಳನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ.

 

 

ಮಾವಳ್ಳಿ ಸರ್ಕಲ್ ನಲ್ಲಿ ದೇವರಾಜ್ :ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ,ನಾಯಕನಾಗಿ,ಹಾಸ್ಯ ನಟನಾಗಿ ಇದೀಗ ಪೋಷಕ ಪಾತ್ರದಲ್ಲಿ ಮಿಂಚುತ್ತಿರುವವರು ಡೈನಾಮಿಕ್ ಸ್ಟಾರ್ ದೇವರಾಜ್ ಅವರು. ಇನ್ನು ಅವರು ’27 ಮಾವಳ್ಳಿ ಸರ್ಕಲ್’ ಎಂಬ ಚಿತ್ರದ ಮೂಲಕ ಖಳನಾಯಕನ ಪಾತ್ರದಲ್ಲಿ ಕನ್ನಡ ಸಿನಿರಂಗಕ್ಕೆ ಪ್ರವೇಶ ಮಾಡಿದ್ದಾರೆ.

 

ಚಿರಂಜೀವಿ ಸುಧಾಕರ ಶಶಿಕುಮಾರ: ಒಂದು ಕಾಲದಲ್ಲಿ ತಮ್ಮ ಸುಂದರ ಮುಖದಿಂದ ಹೆಂಗಳೆಯರ ಮನಸ್ಸು ಗೆದ್ದು, ಚಿತ್ರರಂಗದಲ್ಲಿ ಬೇಡಿಕೆಯ ನಟರಾಗಿದ್ದವರು ಶಶಿಕುಮಾರ್ ಅವರು. ಖಳನಾಯಕನಾಗಿ ಚಿರಂಜೀವಿ ಸುಧಾಕರ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು 1990 ರಲ್ಲಿ ತೆರೆಕಂಡ `ಬಾರೇ ನನ್ನ ಮುದ್ದಿನ ರಾಣಿ’ ಚಿತ್ರದಿಂದ ನಾಯಕನಾಗಿ ನಟಿಸಲು ಆರಂಭಿಸಿದರು.

 

ನವರಸಗಳನಾಯಕ ಜಗ್ಗೇಶ್: ಕನ್ನಡ ಚಿತ್ರರಂಗದಲ್ಲಿ ನವರಸಗಳನ್ನು ರುಬ್ಬಿ ಕುಡಿದಿರುವವರು ಎಂದರೆ ಅದು ಜಗ್ಗೇಶ್ ಅವರು.
ಇಬ್ಬನಿ ಕರಗಿತು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನವರಸ ನಾಯಕ ಜಗ್ಗೇಶ್ ತಮ್ಮ ಸಿನಿ ಕರಿಯರ್ ಆರಂಭದಲ್ಲಿ ಕೆಲವು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ.

 

ಚಂದ್ರಚಕೋರಿಯಲ್ಲಿ ಶ್ರೀನಗರ ಕಿಟ್ಟಿ: ಕಿರುತೆರೆಯಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದ ಕಿಟ್ಟಿ ಚಂದ್ರ ಚಕೋರಿ’ ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಇವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಗಿರಿ.

 

SSLC ಓದಿದ ದುನಿಯಾ ವಿಜಯ್: ಖಳನಾಯಕನಾಗಿ ದುನಿಯಾ ವಿಜಯ್ ರಂಗ ಎಸ್.ಎಸ್.ಎಲ್.ಸಿ’ ಚಿತ್ರದ ಮೂಲಕ ಸಿನಿ ರಂಗಕ್ಕೆ ಪ್ರವೇಶ ಮಾಡಿದರು ನಂತರ ಸೂರಿ ನಿರ್ದೇಶನದ `ದುನಿಯಾ’ ಚಿತ್ರದ ಮೂಲಕ ನಾಯಕನಾಗಿ ಸಿನಿ ಜರ್ನಿ ಅಭಿನಯಿಸಿದರು.

 

ಟಪೋರಿಯಲ್ಲಿ ಗೋಲ್ಡನ್ ಸ್ಟಾರ್: ನಿರೂಪಕರಾಗಿದ್ದ ಗಣೇಶ್ ಅವರು ಟಪೋರಿ ಎಂಬ ಸಿನಿಮಾದ ಸಿನಿ ಜರ್ನಿ ಪ್ರಾರಂಭಿಸಿದರು ನಂತರ ಎಂ.ಡಿ.ಶ್ರೀಧರ್ ನಿರ್ದೇಶನದ `ಚೆಲ್ಲಾಟ’ ಚಿತ್ರದ ಮೂಲಕ ನಾಯಕನಾಗಿ ಸಿನಿ ಜರ್ನಿ ಅಭಿನಯಿಸಿದರು

 

ದುನಿಯಾದಲ್ಲಿ ಲೂಸ್ ಆದ ಯೋಗಿ: ಸುಕ್ಕ ಸೂರಿ ನಿರ್ದೇಶನದ ದುನಿಯಾ ಚಿತ್ರದಲ್ಲಿ ಲೂಸ ಮಾದ ಪಾತ್ರ ಮಾಡುವ ಮೂಲಕ ಯೋಗೇಶ್ ಸಿನಿಪಯಣ ಆರಂಭಿಸಿದರು. `ನಂದ ಲವ್ಸ್ ನಂದಿತ’ ಚಿತ್ರದಿಂದ ನಾಯಕನಾಗಿ ಸಿನಿ ಜರ್ನಿ ಆರಂಭಿಸಿದರು.

Advertisement
Share this on...