ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾ ಒಂದು ಸಮಸ್ಯೆಗಳಿರುತ್ತವೆ. ಭಗವಂತ ಎಲ್ಲವನ್ನೂ ನೀಡಿ ಏನಾದರೂ ಕೊರತೆ ನೀಡಿರುತ್ತಾನೆ ಎಂದು ಜನರು ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಆದರೆ ನಮ್ಮ ಜೀವನ, ನಮ್ಮ ಭವಿಷ್ಯ ನಮ್ಮ ಕೈಯ್ಯಲ್ಲಿದೆ. ನಮ್ಮ ದು:’ಖ ನಮ್ಮ ಸಂತೋಷ ಎರಡೂ ನಮ್ಮ ಕೈಯಲ್ಲೇ ಇದೆ. ಇನ್ನೊಬ್ಬರು ನನ್ನನ್ನು ಹೀಯಾಳಿಸುತ್ತಿದ್ದಾರೆ, ಯಾರೋ ನನ್ನ ಬೆನ್ನ ಹಿಂದೆ ಮಾತನಾಡಿಕೊಳ್ಳುತ್ತಾರೆ, ಅವರಿಂದ ದೂರ ಇರಬೇಕು ಎಂಬ ಮನೋಭಾವದಿಂದ ಮನುಷ್ಯ ಬದುಕುತ್ತಿದ್ದಾನೆ. ಜೀವನದಲ್ಲಿ ಎಲ್ಲಾ ಕ’ಷ್ಟಗಳು ನನಗೇ ಬಂದಿವೆ. ಆ ದೇವರು ನನಗೇ ಏಕೆ ಇಷ್ಟು ಸಮ’ಸ್ಯೆ ನೀಡುತ್ತಿದ್ದಾನೆ ಎಂಬ ತಪ್ಪು ಕಲ್ಪನೆಗಳಿಂದ ಹೊರಬರಬೇಕು. ಮನುಷ್ಯ ಒಂದು ನಿಯಮಿತ ಚೌಕಟ್ಟಿನಲ್ಲಿ ಬದುಕಬೇಕು. ಜೀವನದಲ್ಲಿ ನಮಗೆ ನೆಮ್ಮದಿ ಬೇಕೆಂದರೆ ಪ್ರಮುಖವಾಗಿ ಮೂರು ಸೂತ್ರಗಳನ್ನು ಅನುಸರಿಸಬೇಕು.
ಒಮ್ಮೆ ಬಿಡುವು ಮಾಡಿಕೊಂಡು 1 ಗಂಟೆಗಳ ಕಾಲ ನಿಮ್ಮ ಸುತ್ತಮುತ್ತಲಿನ ಹಾಗುಹೋಗುಗಳು, ನಿಮ್ಮ ಜೀವನದಲ್ಲಿ ಏನು ನಡೆಯುತ್ತಿದೆ…? ಮುಂದೆ ಏನು ನಡೆಯಬೇಕಿದೆ ಎಂಬುದನ್ನು ಯೋಚಿಸಿ. ನಿಮ್ಮ ಮನಸ್ಸು ಪರಿವರ್ತನೆಯಾಗಬೇಕೆಂದರೆ ಉತ್ತಮ ಜ್ಯೋತಿಷಿಗಳ ಮೂಲಕ ಒಂದು ಮಂತ್ರವನ್ನು ಕೇಳಿಪಡೆಯಿರಿ. ಬೆಳಗಿನ ಜಾವ, ಸುಂದರ ಪ್ರಕೃತಿಗಳ ನಡುವಿನ ನದಿತೀರದಲ್ಲಿ ಹೋಗಿ ಕುಳಿತುಕೊಳ್ಳಿ. ಗುರುಗಳು ಹೇಳಿಕೊಟ್ಟಿರುವ ಮಂತ್ರವನ್ನು ಜಪಿಸಿದರೆ ನಿಮ್ಮ ದೇಹದಿಂದ ಹಾಗೂ ಜ್ಞಾನದಿಂದ ಒಂದೊಂದೇ ನಕಾರಾತ್ಮಕ ಯೋಚನೆಗಳು ಹೊರಬರುತ್ತವೆ. ಆ ಪ್ರಕೃತಿ, ಬೆಳಗಿನ ಸೂರ್ಯನ ಕಿರಣಗಳು, ಭೂಮಿ ಎಲ್ಲವೂ ನಿಮಗೆ ಧನಾತ್ಮಕ ಶಕ್ತಿ ನೀಡಿ ನಿಮ್ಮ ದಾ’ರಿದ್ರ್ಯವನ್ನು ಕೊನೆಯಾಗಿಸುತ್ತದೆ. ನಿಮ್ಮ ಮನಸ್ಸಿಗೆ ಬೇಸರವಾದಲ್ಲಿ ಒಮ್ಮೆ ಈ ವಿಧಾನ ಅನುಸರಿಸಿ ನೋಡಿ.
ಒಂದು ವೇಳೆ ಜೀವನದಲ್ಲಿ ನೀವು ಮಾನಸಿಕವಾಗಿ ನೊಂದಿದ್ದರೆ, ಒಮ್ಮೆ ಸಮುದ್ರದ ತಟದಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಿ. ಆ ಮಹಾಸಮುದ್ರವನ್ನು ನೋಡಿದರೆ ಅದರ ಮುಂದೆ ನಿಮ್ಮ ಸಮಸ್ಯೆ ಏನೇನೂ ಅಲ್ಲ ಅನ್ನಿಸುತ್ತದೆ. ತನ್ನ ಒಡಲಲ್ಲಿ ಇರುವ ಜೀವರಾಶಿಗಳನ್ನು ರಕ್ಷಿಸುವ ಸಲುವಾಗಿ ಅಲೆಗಳು ಕಸವನ್ನು ಹೇಗೆ ದಡಕ್ಕೆ ತಳ್ಳುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಅದೇ ರೀತಿ ನಿಮ್ಮ ಮನಸ್ಸಿನಲ್ಲಿ ಏನೇ ಕಷ್ಟ, ಗೊಂದಲ, ನೋವು ಇದ್ದರೂ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕೆಂದರೆ ಅವೆಲ್ಲವನ್ನೂ ಹೊರ ಚೆಲ್ಲಬೇಕು. ಸಾಧ್ಯವಾದರೆ ಸಮುದ್ರದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ನಮಸ್ಕರಿಸಿ.
ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ನಿವಾರಿಸಲು ಮತ್ತೊಂದು ಸರಳ ಉಪಾಯವಿದೆ. ಮನೆಯಲ್ಲಿರುವ ಪ್ರೀತಿ ಪಾತ್ರರೊಂದಿಗೆ ನಿಮ್ಮ ನೋವುಗಳ ಬಗ್ಗೆ ಚರ್ಚಿಸಿ. ದೇವಿ ಸ್ವರೂಪಿಯಾದ ತಾಯಿಯೊಂದಿಗೆ ಚರ್ಚಿಸಿದರೆ ಇನ್ನೂ ಸೂಕ್ತ. ಒಂದು ಸಮಯವನ್ನು ನಿಗದಿಪಡಿಸಿ, ಇಬ್ಬರೂ ಕುಳಿತು ಮುಕ್ತ ಚರ್ಚೆ ಮಾಡಿ. ಅದಕ್ಕೂ ಮನ್ನ ತಾಯಿಯ ಕಾಲಿಗೆ ನಮಸ್ಕರಿಸಿ. ತಾಯಿಯ ಪಾದಗಳಿಗೆ ನಿಮ್ಮ ಹಣೆ ಮುಟ್ಟುವಂತೆ ನಮಸ್ಕಾರ ಮಾಡಿ. ನಿಮ್ಮ ಮನಸ್ಸಿನಲ್ಲಿ ಇರುವುದೆಲ್ಲವನ್ನೂ ತಾಯಿಯ ಬಳಿ ಹೇಳಿಕೊಳ್ಳಿ. ನಂತರ ನಿಮ್ಮ ಮನಸ್ಸಿನ ಭಾರ ಕಡಿಮೆ ಆಗುವುದನ್ನು ಗಮನಿಸಿ. ಒಮ್ಮೆ ತಪ್ಪದೆ ಈ ಮೂರೂ ಸೂತ್ರಗಳನ್ನು ಅನುಸರಿಸಿ ಎಲ್ಲಾ ಗೊಂದಲ, ಸಂಕಷ್ಟಗಳಿಂದ ಹೊರಬನ್ನಿ.