ಮಾನಸಿಕ ಗಲಿಬಿಲಿ ಸಮಸ್ಯೆಗೆ ಗೌರಿ ಚೂರ್ಣ ರಾಮಬಾಣ

in ಕನ್ನಡ ಮಾಹಿತಿ/ಜ್ಯೋತಿಷ್ಯ 935 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಆಶ್ವಯುಜ ಮಾಸೆ, ಶುಕ್ಲ  ಪಕ್ಷದ ಚತುರ್ದಶಿ ತಿಥಿ,  ರೇವತಿ ನಕ್ಷತ್ರ,  ವಜ್ರ ಯೋಗ, ವನಿಜ ಕರಣ, ಅಕ್ಟೋಬರ್ 30 , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯಾಹ್ನ 12 ಗಂಟೆ 15  ನಿಮಿಷದಿಂದ 2  ಗಂಟೆ 3 ನಿಮಿಷದವರೆಗೂ ಇದೆ.

Advertisement

ನಮ್ಮ ಮನಸ್ಸಿನಂತೆ ನಮ್ಮ ದೇಹ ಮತ್ತು ನಮ್ಮ ದೃಷ್ಟಿ ಇರುತ್ತದೆ. ಯದ್ಭಾವಂ ತದ್ಭವತಿ ಎಂಬಂತೆ ಇರುತ್ತದೆ. ಮನಸ್ಸಿನ ಗಲಿಬಿಲಿಯನ್ನು ನಿವಾರಿಸಲು ಗೌರಿ ಚೂರ್ಣ ಅತ್ಯುತ್ತಮವಾದುದು. ಹೀಗೆ ಬೇವು ಬಿತ್ತಿದರೆ ಬೇವಿನಮರ,ಜಾಲಿ ಬೀಜವನ್ನು ಬಿತ್ತಿದರೆ  ಜಾಲಿಯ ಮರವಾಗುತ್ತದೆ  ಅದೇ ರೀತಿ ನಮ್ಮ ಮನಸ್ಸು ಹೇಗಿರುತ್ತದೊ ನಮ್ಮ ದೇಹ, ನಮ್ಮ ದೃಷ್ಟಿ ಕೋನವು ಕೂಡ ಅದೇ ರೀತಿ ಇರುತ್ತದೆ. ಶೋಕ ಮನುಷ್ಯನಿಗೆ ಬಂದಾಗ ನಿಯಂತ್ರಣ ತಪ್ಪಿ ಬಿಡುತ್ತಾನೆ. ಏನೆಲ್ಲ ಆಡಬಾರದ ಮಾತುಗಳನ್ನೆಲ್ಲಾ ಆಡುತ್ತಾನೆ. ಉದ್ವೇಗ, ಭೀತಿ, ಮತಿಭ್ರಮಣ, ಉನ್ಮಾದ, ಉತ್ಪ್ರೇಕ್ಷೆ ,ಕಾಂತಿ ಎಲ್ಲವು ಶೋಕದಿಂದ ಕಳೆದುಕೊಳ್ಳುತ್ತ ಹೋಗುತ್ತಾನೆ. ಈ ಮಾನಸಿಕ ಗಲಿಬಿಲಿ ಸಮಸ್ಯೆಗೆ ಅತ್ಯುತ್ತಮವಾದ ಗೌರಿ ಚೂರ್ಣವನ್ನು ಗುರೂಜಿರವರು ನೀಡುತ್ತಿದ್ದಾರೆ. ಅತಿ ಮುಖ್ಯವಾಗಿ  ಇಂತಹ ಮಾನಸಿಕ ಪರಿಭ್ರಮಣೆಗೆ ಸ್ತ್ರೀಯರು ಒಳಗಾಗಿದ್ದರೆ, ದಂಪತಿಗಳ ಮಧ್ಯೆ ಈ ರೀತಿ ಸಮಸ್ಯೆ ಉಂಟಾಗಿದ್ದರೆ, ಸಣ್ಣ ಸಮಸ್ಯೆಗೆ ಚಿಂತಿಸಿ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದರೆ, ಸಣ್ಣ ಸಣ್ಣ ವಿಷಯಗಳಿಗೆ  ಗಾಬರಿ ಪಡುವುದು, ಏನೋ ಆಗುತ್ತದೆ ಎಂದು ಭಯಪಡುವುದು. ಈ ಸಮಸ್ಯೆಗೆ ರೇವತಿ ನಕ್ಷತ್ರದಂದು ಗುರೂಜಿರವರು ಉಚಿತವಾಗಿ ಗೌರಿ ಚೂರ್ಣವನ್ನು ಕೊಡುತ್ತಾರೆ.

Advertisement

Advertisement

ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು , ಸ್ತ್ರೀಯರಿಗೆ ಪಿಸಿಓಡಿ , ಪಿಸಿಸಿ ಪ್ರಾಬ್ಲಂ ಗಳಿದ್ದರೆ, ತುಂಬಾ ವೇಯ್ಟ್  ಗೇನ್ ಆಗುತ್ತಿದ್ದರೆ, ತುಂಬಾ ವೇಟ್ ಲಾಸ್ ಆಗುತ್ತಿದ್ದರೆ, ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಗೌರಿ ಚೂರ್ಣ ರಾಮಬಾಣ. ಶೀಘ್ರದಲ್ಲೇ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆ. ಯಾವುದೋ 1ನೆಗೆಟಿವ್ ದೃಷ್ಟಿ ತಾಕಿದೆ ಎಂದಾದರೆ ಅದಕ್ಕೆ ಅತ್ಯುತ್ತಮವಾದ ರಾಮಬಾಣವೆಂದರೆ ಯಯಾತಿ ಯಂತ್ರ. ಮಾನಸಿಕ ವಿಭ್ರಾಂತಿ,  ಮಾನಸಿಕ ಆತಂಕ,  ಮಾನಸಿಕ  ಗೊಂದಲ ಚಂಚಲತೆಯಲ್ಲಿ ಒದ್ದಾಡುತ್ತಿರುವವರಿಗೆ ಈ ಯಯಾತಿ ಯಂತ್ರ ಅತ್ಯುತ್ತಮವಾದ ರಾಮಬಾಣ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ರೇವತಿ ನಕ್ಷತ್ರ  ಅಂದರೆ ಚಾಮುಂಡೇಶ್ವರಿಯ ನಕ್ಷತ್ರ. ಚೆನ್ನಾಗಿದೆ ಬುಧ ಸ್ವಲ್ಪ ವಕ್ರ, ಗಲಿಬಿಲಿಯ ವ್ಯವಹಾರಕ್ಕೆ ಎಳೆದುಕೊಂಡು ಹೋಗಿ ಖೆಡ್ಡಕ್ಕೆ  ತಳ್ಳಿ ಬಿಡಬಹುದು ಎಚ್ಚರಿಕೆಯಿಂದ ಇರಿ. ತುಂಬಾ ಕನ್ ಫ್ಯೂಸ್  ಮಾಡುವವರ ಬಳಿ ಇರಬಾರದು,  ತುಂಬಾ ಕನ್ವಿನ್ಸ್ ಮಾಡುವವರ ಬಳಿ ತುಂಬ ಎಚ್ಚರಿಕೆಯಿಂದ ಇರಿ. ತುಂಬಾ ನಯವಾಗಿ ಇರುವವರ ಬಳಿ ಎಚ್ಚರಿಕೆಯಿಂದ ಇರಿ.

ವೃಷಭ ರಾಶಿ : ಶೇರ್ ಮಾರ್ಕೆಟ್, ಸ್ಟಾಕ್ ಮಾರ್ಕೆಟ್,  ಮೇಜರ್ ಇನ್ವೆಸ್ಟ್ ಮೆಂಟ್ ಮಾಡಲು ಹೋಗಲೇ ಬೇಡಿ ಎಚ್ಚರಿಕೆ.

ಮಿಥುನ ರಾಶಿ : ಇನ್ವೆಸ್ಟ್ ಮೆಂಟ್, ಫಿಕ್ಸೆಡ್ ಡೆಪಾಸಿಟ್, ಉತ್ತಮವಾದುದು.

ಕರ್ಕಾಟಕ ರಾಶಿ : ಬಾಲ್ಯದಿಂದಲೂ ರಸ ತೆಗೆಯುವ ತಾಕತ್ತು ನಿಮಗಿದೆ, ಹೆಜ್ಜೆ ಹಾಕಿ.

ಸಿಂಹ ರಾಶಿ : ಸ್ವಲ್ಪ ಜಾಗ್ರತೆ, ಕಲಾವಿದರಾಗಿದ್ದರೆ, ಸ್ಕ್ರಿಪ್ಟ್ ರೈಟರ್ ಆಗಿದ್ದರೆ, ಆರೋಗ್ಯದ ಕಡೆ ಗಮನ ಕೊಡಿ. ಸ್ತ್ರೀ ಯೋರ್ವರ ವಿಚಾರದಲ್ಲಿ ನೋವಿದೆ.

ಕನ್ಯಾ ರಾಶಿ : ಬುಧ ವಕ್ರವಾಗಿರುವುದರಿಂದ ಏನು ಮಾಡಿದರೂ ಅದು ಸರಿಯಾಗುವುದಿಲ್ಲ ಯಾವುದನ್ನೂ ಕೇಳುವುದಿಲ್ಲ. ಮೊಂಡು ವಾದವನ್ನು ಮಾಡುತ್ತೀರಾ.

ತುಲಾ ರಾಶಿ : ಬುದ್ದಿಯಿಂದ ನೀವು ಖೆಡ್ಡಕ್ಕೆ  ಬೀಳುತ್ತೀರಾ, ಭಾಗ್ಯಾಧಿಪತಿ ನಿಮ್ಮ ಮನೆಯಲ್ಲೇ ಇದ್ದರೂ ಬುದ್ದಿ ವಕ್ರವಾಗಿರುವುದು ಒಳ್ಳೆಯದಲ್ಲ. ಯಾರು ಏನೇ ಮಾತಾಡಿದರೂ ಯಾರು ಏನೇ ಹೇಳಿದರೂ ಕೇಳುವುದಿಲ್ಲ.  ಸಿದ್ಧಾಂತದ ಪ್ರಭಾವಕ್ಕೆ ಒಳಗಾಗುತ್ತೀರ ಜಾಗ್ರತೆ.

ವೃಶ್ಚಿಕ ರಾಶಿ : ನಿಮ್ಮ ಮನಸ್ಸಿಗೆ ನೆಗೆಟಿವ್ ತುಂಬಿಸಲು ಪ್ರಯತ್ನಿಸುತ್ತಾರೆ ಆದರೆ ನೀವು ಅದೃಷ್ಟವಂತರು ತಲೆಕೆಡಿಸಿಕೊಳ್ಳಲು ಹೋಗಬೇಡಿ. ಯಾರೂ ಏನೂ ಮಾಡಲಾಗುವುದಿಲ್ಲ ಗೆದ್ದುಕೊಂಡು ಬರುತ್ತೀರಾ ಸ್ವಲ್ಪ ಹಣಕಾಸನ್ನು ಕೂಡ ನೋಡುತ್ತೀರಾ.

ಧನಸ್ಸು ರಾಶಿ : ಬುಧನ ವಕ್ರತೆ ಗೆಲುವನ್ನೇ ತಂದುಕೊಡುತ್ತದೆ ಅದರಲ್ಲೂ ವಿದ್ಯಾರ್ಥಿಗಳಾಗಿದ್ದರೆ ಯಾವುದೇ ಕಾಂಪಿಟೇಟಿವ್ ಎಗ್ಸಾಮ್ ನಲ್ಲೂ ಕೂಡ ಬರೆದು  ಗೆಲ್ಲುತ್ತೀರಾ.

ಮಕರ ರಾಶಿ : ಬುದ್ಧಿ ಉಪಯೋಗಿಸಿ ಮಾಡುವಂತಹ ಟೆಕ್ನಿಕಲ್ ಮೆಕ್ಯಾನಿಕಲ್ ಇಂಜಿನಿಯರ್ ಗಳಿಗೆ ಚೆನ್ನಾಗಿದೆ. ಆದರೆ ಅತಿಯಾದ ಬುದ್ಧಿಯನ್ನು ಉಪಯೋಗಿಸಲು ಹೋಗಿ ಬೆಂಕಿಗೆ ಬೀಳಬೇಡಿ.

ಕುಂಭ ರಾಶಿ : ಮೈಯಲ್ಲ ಮೀನಿನಂತೆ ತುಂಬ ಚುರುಕಾಗಿರುತ್ತೀರ. ಎಲ್ಲಾ ಬರುತ್ತದೆ ಎಂದು ಎಲ್ಲವನ್ನೂ ನೀವು ನಿಮ್ಮ ತಲೆ ಮೇಲೆ ಹಾಕಿಕೊಂಡು ಮಾಡಲು ಹೋಗಬೇಡಿ.  ಆಯಾ ಕೆಲಸಗಳನ್ನು ಅವರವರೇ ಮಾಡಬೇಕು.

ಮೀನ ರಾಶಿ : ಎಂಥವರಾದರೂ ಅವರನ್ನು ಕನ್ವಿನ್ಸ್ ಮಾಡುವ ಕಸ್ಟಮರ್ ಸರ್ವಿಸ್ ಸೇಲ್ಸ್ ಮಾರ್ಕೆಟಿಂಗ್ ಫೀಲ್ಡ್ ನಲ್ಲಿ ಇರುವವರಿಗೆ ಗೆಲುವು ಕಟ್ಟಿಟ್ಟಬುತ್ತಿ ಆದರೆ ಯಾರಿಗೂ ದುಡ್ಡು ಕೊಡಲು ಮಾತ್ರ ಹೋಗಬೇಡಿ. ಅಗ್ರಿಮೆಂಟ್ ಇಲ್ಲದೆ ನೀವು ದುಡುಕಬೇಡಿ.

All Rights reserved Namma  Kannada Entertainment.

Advertisement
Share this on...