ಇದೊಂದೇ ಕಾರಣಕ್ಕೆ ಮಹೇಶ್ ಬಾಬು ಚಿತ್ರ ರಿಜೆಕ್ಟ್ ಮಾಡಿದ್ರು ಸಾಯಿಪಲ್ಲವಿ!

in ಸಿನಿಮಾ 77 views

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಎದುರು ನಟಿಸುವ ಅವಕಾಶವನ್ನು ಯಾವುದೇ ನಟಿಯಾಗಲೀ ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ ಸ್ಟಾರ್ ನಟಿ ಸಾಯಿ ಪಲ್ಲವಿ ಮಹೇಶ್ ಚಿತ್ರವನ್ನು ಮೃದುವಾಗಿ ನಿರಾಕರಿಸಿದ್ದಾರೆ.

Advertisement

 

Advertisement

Advertisement

 

Advertisement

ಮಹೇಶ್ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಸಂಕ್ರಾಂತಿಯ ಸಮಯದಲ್ಲಿ ಬಿಡುಗಡೆಯಾಗಿದ್ದು, ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು. ಇದನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದಾಗಲೂ, ‘ಸರಿಲೇರು ನೀಕೆವ್ವರು’ ಬಾಹುಬಲಿ 2 ದಾಖಲೆಯನ್ನು ಮುರಿದು, ಅತ್ಯಧಿಕ ಟಿಆರ್ಪಿ ಪಡೆಯಿತು.

 

 

ಮೊದಲು ಈ ಚಿತ್ರಕ್ಕೆ ರಶ್ಮಿಕಾ ಅವರನ್ನು ಆಯ್ಕೆ ಮಾಡುವ ಮೊದಲು ನಿರ್ದೇಶಕ ಅನಿಲ್ ರವಿಪುಡಿ ಸಾಯಿ ಪಲ್ಲವಿಯನ್ನು ಸಂಪರ್ಕಿಸಿದ್ದರಂತೆ. ಆದರೆ ಸಾಯಿ ಪಲ್ಲವಿ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು. ಕಾರಣವಿಷ್ಟೇ, ಸಾಯಿ ಪಲ್ಲವಿ ಉತ್ತಮ ಚಿತ್ರಕಥೆಗಳ ಕಡೆಗೆ ಮಾತ್ರ ಗಮನಹರಿಸುತ್ತಾರೆ. ಅಷ್ಟೇ ಅಲ್ಲ, ಕಥೆಯಲ್ಲಿ ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದಾರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ‘ಸರಿಲೇರು ನೀಕೆವ್ವರು’ ವಿಷಯಕ್ಕೆ ಬರುವುದಾದರೆ ಸಾಯಿ ಪಲ್ಲವಿ ಈ ಚಿತ್ರದಲ್ಲಿ ತನಗೆ ಪ್ರಾಮುಖ್ಯತೆ ಇಲ್ಲ ಎಂದು ಭಾವಿಸಿರಬಹುದು. ಈ ಕಾರಣದಿಂದ, ಅವರು ಮಹೇಶ್ ಚಿತ್ರವನ್ನು ತಿರಸ್ಕರಿಸಬಹುದು ಎಂದು ಕೆಲವು ಟಾಲಿವುಡ್ ವೆಬ್ ಸೈಟ್’ಗಳು ವರದಿ ಮಾಡಿವೆ.

 

 

ಈ ಹಿಂದೆ ಸಾಯಿಪಲ್ಲವಿ ವಿಜಯ್ ದೇವರಕೊಂಡ ನಟನೆಯ ‘ಡಿಯರ್ ಕಾಮ್ರೆಡ್ ‘ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರಲಿಲ್ಲ. ಆದರೆ ಸಾಯಿ ಪಲ್ಲವಿ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸಲು ಒಪ್ಪದಿರಲು ಕಾರಣ ಚಿತ್ರಕಥೆಯಲ್ಲ, ಬದಲಿಗೆ ಲಿಪ್ ಲಾಕ್ ದೃಶ್ಯದ ಬೇಡಿಕೆ ಎಂಬುದು ಆಗ ಸ್ಪಷ್ಟವಾಗಿತ್ತು. ಸಾಯಿ ಪಲ್ಲವಿ ಚಿತ್ರ ರಿಜೆಕ್ಟ್ ಮಾಡಿರುವುದಕ್ಕೆ ಕಾರಣ ಸ್ಪಷ್ಟವಾಗುತ್ತಿದ್ದಂತೆ, ‘ಡಿಯರ್ ಕಾಮ್ರೆಡ್ ‘ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆ ಇನ್ನೂ ಹೆಚ್ಚಾಗಿತ್ತು.

 

 

ಆ ಸಮಯಕ್ಕೆ ಸಾಯಿ ಪಲ್ಲವಿ ಡಿಯರ್ ಕಾಮ್ರೆಡ್ ತಿರಸ್ಕರಿಸಲಿಕ್ಕೆ ಕಾರಣ ಬಹಿರಂಗವಾದ ಮೇಲೆ ಸಾಯಿ ಪಲ್ಲವಿ ಗ್ರೇಟ್ ಎಂದು ಯಾರೂ ಕೂಡ ಚರ್ಚಿಸಿರಲಿಲ್ಲ. ಬದಲಿಗೆ, ಆ ಸಿನಿಮಾದಲ್ಲಿ ನಟಿಸಬೇಕು ಅಥವಾ ನಟಿಸಬಾರದು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕಿಲ್ಲ ಎಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿತ್ತು.

 

ಪ್ರಸ್ತುತ ಸಾಯಿ ಪಲ್ಲವಿ ಅವರು ರಾಣ ದಗ್ಗುಬಾಟಿ ಅವರೊಂದಿಗೆ ‘ವಿರಾಟಪರ್ವಂ’ ಚಿತ್ರದಲ್ಲಿ ಮತ್ತು ನಾಗ ಚೈತನ್ಯ ಅವರೊಂದಿಗೆ ‘ಲವ್ ಸ್ಟೋರಿ’ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವುಗಳ ನಂತರ, ಕಿಶೋರ್ ತಿರುಮಲಾ ನಿರ್ದೇಶನದ, ಶರ್ವಾನಂದ್ ಅವರ ಹಾಸ್ಯ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

Advertisement
Share this on...