ಅರಣ್ಯನಾಶದಿಂದ ಹೊಸ ಹೊಸ ವೈರಸ್’ಗಳು ಹುಟ್ಟುತ್ತಿವೆ ಎಂದು ಎಚ್ಚರಿಕೆ ನೀಡಿದ ಸಂಶೋಧಕರು ! ಕಾರಣ ಇಲ್ಲಿದೆ ನೋಡಿ

in ಕನ್ನಡ ಮಾಹಿತಿ 63 views

ಕೊರೊನಾ ವೈರಸ್ ತರಹದ ಮತ್ತೊಂದು ಸಾಂಕ್ರಾಮಿಕ ರೋಗವು ಉದ್ಭವಿಸುದ ಸಾಧ್ಯತೆ ಹೆಚ್ಚಿದ್ದು, ಈ ಹೊಸ ಸಾಂಕ್ರಾಮಿಕವು ಅಮೆಜಾನ್ ಕಾಡುಗಳಿಂದ ಹುಟ್ಟಿಕೊಳ್ಳಬಹುದು ಎಂದು ಬ್ರೆಜಿಲ್ ಪರಿಸರವಾದಿ ಡೇವಿಡ್ ಲ್ಯಾಪೋಲಾ ಎಚ್ಚರಿಕೆ ನೀಡಿದ್ದಾರೆ. ಏಕಾಏಕಿ ತೀವ್ರ ಅರಣ್ಯನಾಶವೇ ಕೊರೊನಾ ವೈರಸ್ ಹುಟ್ಟಿಕೊಳ್ಳಲು ಕಾರಣ ಎಂದು ಹೇಳಿರುವ ಲ್ಯಾಪೋಲಾ ಅವರು, ಕಾಡು ಪ್ರದೇಶಗಳು ನಾಶವಾಗಿ, ನಗರೀಕರಣವಾಗುತ್ತಿರುವುದರಿಂದ ಪ್ರಾಣಿಗಳಿಂದ ಮನುಷ್ಯರಿಗೆ ಕಾಯಿಲೆಗಳು ಹರಡುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ.

Advertisement

 

Advertisement


ಅಷ್ಟೇ ಅಲ್ಲ, ಅಮೆಜಾನ್ ಕಾಡುಗಳು ವೈರಸ್ಗಳ ದೊಡ್ಡ ಉಗ್ರಾಣವಾಗಿದೆ ಎಂದು ಕಾಡುಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ 38 ವರ್ಷದ ಲ್ಯಾಪೋಲಾ ಎಎಫ್ಪಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಮಳೆಕಾಡು ಎಂದು ಖ್ಯಾತಿಯಾಗಿರುವ ಅಮೆಜಾನ್, ವೇಗವಾಗಿ ನಾಶವಾಗುತ್ತಿದೆ. ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರ ಅಧಿಕಾರಾವಧಿಯ ಮೊದಲ ವರ್ಷದಲ್ಲಿ, ಅಮೆಜಾನ್ನಲ್ಲಿ ಅರಣ್ಯನಾಶವು 85 ಪ್ರತಿಶತದಷ್ಟು ಹೆಚ್ಚಾಗಿದೆ. ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದು ಈ ವರ್ಷವೂ ಮುಂದುವರೆದಿದೆ.

Advertisement

 

Advertisement


ಜನವರಿಯಿಂದ ಏಪ್ರಿಲ್ ವರೆಗೆ, ಬ್ರೆಜಿಲಿಯನ್ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಐಎನ್ಪಿಇ) 1202 ಚದರ ಕಿಲೋಮೀಟರ್ವರೆಗಿನ ಮರಗಳನ್ನು ನಾಶ ಮಾಡಿದ್ದು, ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಇದು ಹೊಸ ದಾಖಲೆಯಾಗಿದೆ ಎಂದು ಲ್ಯಾಪೋಲಾ ಹೇಳಿದ್ದಾರೆ.
ನೀವು ಪರಿಸರ ಅಸಮಾನತೆಯನ್ನು ಸೃಷ್ಟಿಸಿದಾಗ, ವೈರಸ್ ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹುಟ್ಟಿಕೊಳ್ಳುತ್ತದೆ ಎಂದು ಲ್ಯಾಪೋಲಾ ಹೇಳಿದ್ದು, ಎಚ್ಐವಿ, ಎಬೋಲಾ ಮತ್ತು ಡೆಂಗ್ಯೂ ಜ್ವರ ಕೂಡ ಅದೇ ರೀತಿ ಜನಿಸಿವೆ ಎಂದು ತಿಳಿಸಿದ್ದಾರೆ. ಪರಿಸರ ಅಸಮತೋಲನದಿಂದಾಗಿ ಈ ಎಲ್ಲಾ ವೈರಸ್ಗಳು ಹೊರಹೊಮ್ಮಿದವು ಅಥವಾ ವ್ಯಾಪಕವಾಗಿ ಹರಡಿವೆ ಎಂದು ಸ್ಪಷ್ಟಪಡಿಸಿದ್ದಾರೆ.

 


ಕೆಲವು ಜಾತಿಯ ಬಾವಲಿಗಳೊಂದಿಗೆ ವೈರಸ್’ಗಳು ಸಂಬಂಧ ಹೊಂದಿವೆ. ಆದರೆ ಅಮೆಜಾನ್ನ ಅಪಾರ ಜೀವವೈವಿಧ್ಯತೆಯಿರುವ ಈ ಪ್ರದೇಶ ವಿಶ್ವದ ಅತಿದೊಡ್ಡ ಕೊರೊನಾ ವೈರಸ್ ವಲಯ ಆಗಬಹುದು. ಇದಕ್ಕೆ ಮೊದಲ ಕಾರಣವೆಂದರೆ ಅಮೆಜಾನ್ ಕಾಡುಗಳನ್ನು ಬಳಸುತ್ತಿರುವ ರೀತಿ. ಮತ್ತೊಂದು ಕಾರಣವೆಂದರೆ ರೈತರು, ಅಕ್ರಮ ಗಣಿಗಾಕೆ ಮತ್ತು ಮರ ಕಡಿಯುವವರು ಹೆಚ್ಚು ಅರಣ್ಯ ನಾಶ ಮಾಡುತ್ತಿದ್ದಾರೆ. ನಮ್ಮ ಸಮಾಜ ಮತ್ತು ಮಳೆಕಾಡುಗಳ ನಡುವಿನ ಸಂಬಂಧವನ್ನು ನಾವು ಬಲಪಡಿಸಬೇಕು. ಇಲ್ಲದಿದ್ದರೆ, ಜಗತ್ತು ಹೆಚ್ಚು ಅಪಾಯ ಎದುರಿಸಬೇಕಾಗುತ್ತದೆ ಎಂದು ಡೇವಿಡ್ ಲ್ಯಾಪೋಲಾ ಸೂಚಿಸಿದ್ದಾರೆ.

Advertisement
Share this on...