ಶ್ವಾನಗಳಿಗೂ ಮನುಷ್ಯನಿಗೂ ಎಂತ ಅವಿನಾಭಾವ ಸಂಬಂಧವಿದೆ ನೋಡಿ…

in ಕನ್ನಡ ಮಾಹಿತಿ 322 views

ಶ್ವಾನಕ್ಕೆ ಇರುವ ನಿಯತ್ತು ಮನುಷ್ಯನಿಗೂ ಇರುವುದಿಲ್ಲ ಎಂಬ ಮಾತಿದೆ. ಅದೇ ಕಾರಣಕ್ಕೆ ಕೆಲವರು ಶ್ವಾನಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಸಾಕುತ್ತಾರೆ. ಶ್ವಾನಗಳಿಗೂ ಮನುಷ್ಯನಿಗೂ ಎಂತ ಅವಿನಾಭಾವ ಸಂಬಂಧವಿದೆ ಎಂಬುದರ ಬಗ್ಗೆ ಎಷ್ಟೋ ಸಿನಿಮಾಗಳನ್ನು ನೋಡಿದ್ದೇವೆ. ಸಿನಿಮಾಗಳಿಗಿಂತ ಹೆಚ್ಚಾಗಿ ನಮ್ಮ ಸುತ್ತಮುತ್ತ ನಡೆಯುವ ಎಷ್ಟೋ ಘ’ಟನೆಗಳನ್ನು ನೋಡಿರುತ್ತೇವೆ. ಪೊ’ಲೀಸ್ ಇಲಾಖೆಯಲ್ಲಿ ಕೂಡಾ ಅ’ಪರಾ’ಧಿಗಳನ್ನು ಪತ್ತೆ ಹಚ್ಚಲು ಶ್ವಾನಗಳನ್ನು ಬಳಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಶ್ವಾನಗಳು ಇದುವರೆಗೂ ಎಷ್ಟೋ ಅ’ಪ’ರಾಧ ಪ್ರಕರಣಗಳನ್ನು ಭೇಧಿಸಿ ಅ’ಪರಾ’ಧಿಗಳನ್ನು ಪತ್ತೆ ಹಚ್ಚಿವೆ. ಅಂತ ಶ್ವಾನಗಳಿಗೆ ಪ್ರಶಸ್ತಿ ಕೂಡಾ ದೊರೆತಿದೆ. ಪೊಲೀಸರು ಸಾಮಾನ್ಯವಾಗಿ ಇಂತಹ ಕೆಲಸಕ್ಕೆ ಹೆಚ್ಚಾಗಿ ಜರ್ಮನ್ ಶೆಪರ್ಡ್, ಲ್ಯಾಬ್ರಡಾರ್ ಹಾಗೂ ಇನ್ನಿತರ ಜಾತಿಯ ಶ್ವಾನಗಳನ್ನು ಬಳಸಿಕೊಳ್ಳುತ್ತಾರೆ. ಶ್ವಾನಗಳನ್ನು ಖರೀದಿಸಿ ಅವುಗಳಿಗೆ ತರಬೇತಿ ನೀಡಿ ಅ’ಪ’ರಾಧಿಗಳನ್ನು ಪತ್ತೆ ಹಚ್ಚಲು ಬಳಸುತ್ತಾರೆ. ಅಷ್ಟೇ ಅಲ್ಲ ಬಾಂ’ಬ್ ನಿ’ಷ್ಕ್ರಿ’ಯ ತಂಡದಲ್ಲೂ ಇಂತಹ ಶ್ವಾನಗಳಿರುತ್ತವೆ.

Advertisement

Advertisement

ಇನ್ನು ಪೊಲೀಸ್ ಶ್ವಾನಗಳು ಸ’ತ್ತಾಗ ಅದಕ್ಕೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ ಅಂ’ತ್ಯಕ್ರಿಯೆ ಮಾಡಲಾಗುತ್ತದೆ. ಮೈಸೂರಿನ ಬಾಂ’ಬ್​ ಡಿ’ಟೆ’ಕ್ಟಿವ್ ಶ್ವಾ’ನ ದಳದಲ್ಲಿ ಕಳೆದ 6 ವರ್ಷದಿಂದ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ 7 ವರ್ಷದ ಲಕ್ಕಿ(ಶ್ವಾನ) ಅಕ್ಟೋಬರ್ 20 ರಂದು ಸಾ’ವನ್ನಪ್ಪಿದ್ದಾನೆ. ಲಕ್ಕಿಗೆ ಪೊಲೀಸರು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂ’ತ್ಯಕ್ರಿಯೆ ನೆರವೇರಿಸಿದ್ದಾರೆ. 2018 ರಲ್ಲಿ ನಡೆದ ಸೌತ್ ರೇಂಜ್ ಪೊಲೀಸ್ ಮೀಟ್​​​ನಲ್ಲಿ ಲಕ್ಕಿ ತನ್ನ ಕಾರ್ಯಕ್ಕಾಗಿ ಪದಕ ಪಡೆದಿದ್ದನು. ಸುಮಾರು 200 ಪ್ರಕರಣಗಳಲ್ಲಿ ಲಕ್ಕಿ ಪೊಲೀಸರಿಗೆ ಸಹಾಯ ಮಾಡಿದ್ದನು. ಕಳೆದ ಕೆಲವು ದಿನಗಳಿಂದ ಜ್ವ’ರದಿಂದ ಬಳಲುತ್ತಿದ್ದ ಲಕ್ಕಿ ಬುಧವಾರ ಸಾ’ವನ್ನ’ಪ್ಪಿದ್ದಾನೆ.

Advertisement

ಮೈಸೂರಿನಲ್ಲಿ ಮಾತ್ರವಲ್ಲ ಭಾರತೀಯ ಪೊಲೀಸ್ ಇಲಾಖೆಯಲ್ಲಿ ಸ್ಫೋ’ಟ’ಕ, ಮಾ’ದ’ಕ ವಸ್ತುಗಳು ಮತ್ತು ಅ’ಪರಾ’ಧಿಗಳ ಪತ್ತೆಯಲ್ಲಿ ಶ್ವಾನದಳವನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕೂಡಾ ಶ್ವಾನ ದಳಕ್ಕೆ ಆಗ್ಗಾಗ್ಗೆ ಹೊಸ ಶ್ವಾನಗಳನ್ನು ಕರೆತಂದು ಅವುಗಳ ಬಲವರ್ಧನೆಗಾಗಿ ಕೋಟ್ಯಂತರ ರೂಪಾಯಿ ಹಣವನ್ನು ಕೂಡಾ ಖರ್ಚು ಮಾಡಲಾಗುತ್ತಿದೆ. ಜರ್ಮನ್ ಶೆಪರ್ಡ್​, ಲ್ಯಾಬ್ರಡಾರ್, ಡಾಬರ್ ವುನ್, ಗೋಲ್ಡನ್ ರಿಟ್ರೀವರ್, ಬೆಲ್ಜಿಯಂ ಮಾಲಿನೊಯಿಸ್, ಮುಧೋಳ ತಳಿಯ ನಾಯಿಗಳು ಸೇರಿದಂತೆ ವಿವಿಧ ತಳಿಯ ಶ್ವಾನಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಕೆಲವೊಮ್ಮೆ ಶ್ವಾನಗಳು ಸೇವೆಯಿಂದ ನಿವೃತ್ತರಾದಾಗ ಮನುಷ್ಯರಂತೆ ಅವುಗಳನ್ನು ಸನ್ಮಾನಿಸಿ ಬೀಳ್ಕೊಡಲಾಗುತ್ತದೆ.

Advertisement

ವಿಶೇಷ ಎಂದರೆ ಇತ್ತೀಚೆಗಷ್ಟೇ ವಿಶೇಷ ತಳಿಯ ಶ್ವಾನಗಳು ಮಾತ್ರವಲ್ಲ ಬೀದಿ ಬದಿಯ ಸುಮಾರು 50 ಶ್ವಾನಗಳನ್ನು ಕೂಡಾ ಶ್ವಾನದಳಕ್ಕೆ ಸೇರಿಸಿಕೊಂಡು ಅವುಗಳಿಗೆ ಟ್ರೈನಿಂಗ್ ನೀಡಲಾಗುತ್ತಿದೆ. ಅಪರಾಧಗಳು ಹೆಚ್ಚಾಗುತ್ತಿರುವ ನಗರಗಳಲ್ಲಿ ಪೊಲೀಸರ ಜೊತೆಗೆ ಶ್ವಾನಗಳಿಗೂ ಟ್ರೈನಿಂಗ್ ನೀಡಿ ಖಡಕ್​ ಆಗಿ ತಯಾರು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಾದರೂ ಅಪರಾಧಗಳು ಕಡಿಮೆಯಾಗುವುದಾ ಕಾದು ನೋಡಬೇಕು.

Advertisement
Share this on...